Hosanagara

ಮೇ 20 ರಂದು ದೇಶಾದ್ಯಂತ ಔಷಧಿ ವ್ಯಾಪಾರ ವಹಿವಾಟು ಬಂದ್ ; ಹೊಸನಗರ ಎನ್.ದತ್ತಾತ್ರೇಯ ಉಡುಪ

ಹೊಸನಗರ ; ದೇಶಾದ್ಯಂತ ಔಷಧಿ ವ್ಯಾಪಾರ ವಹಿವಾಟು ಬಂದ್ ಹಿನ್ನೆಲೆಯಲ್ಲಿ ಹೊಸನಗರ ತಾಲ್ಲೂಕಿನಲ್ಲೂ ಮೇ 20ರ ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 10 ಗಂಟೆಯವರೆಗೆ ತಾಲ್ಲೂಕಿನ ಎಲ್ಲ ಔಷಧಿ ಅಂಗಡಿಗಳು ಬಂದ್ ಆಗಲಿದೆ ಎಂದು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ದತ್ತಾತ್ರೇಯ ಉಡುಪ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಭಾರತ ದೇಶ ವ್ಯಾಪ್ತಿಯಲ್ಲಿ ಅಂಗಡಿಗಳನ್ನು ಹೊರತು ಪಡಿಸಿ ಆನ್‌ಲೈನ್ ಮೂಲಕ ಔಷಧಿಗಳು ಬರುತ್ತಿದೆ. ದೇಶ ವ್ಯಾಪ್ತಿಯಲ್ಲಿ ಔಷಧಿಗಳ ದರದಲ್ಲಿ ವ್ಯತ್ಯಾಸದಲ್ಲಿ ಔಷಧಿಗಳು ಸಿಗುತ್ತಿದೆ. ಇದರ ಜೊತೆಗೆ ಅತೀ ಕಳಪೆ ಮಟ್ಟದ ಔಷಧಿಗಳು ಸರಬರಾಜು ಆಗುತ್ತಿದ್ದು ಇವುಗಳನ್ನು ತಡೆಯಬೇಕಾದರೆ ಒಂದು ದಿನದ ಮಟ್ಟಿಗೆ ಔಷಧಿ ಅಂಗಡಿಗಳನ್ನು ಬಂದ್ ಅನಿವಾರ್ಯತೆಯಾಗಿದ್ದು ನಾವು ನಮ್ಮ ಔಷಧಿ ಅಂಗಡಿಗಳನ್ನು ಉಳಿಸಿಕೊಳ್ಳಬೇಕಾದರೆ ಸರ್ಕಾರ ಹಾಗೂ ಆರೋಗ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಆನ್‌ಲೈನ್ ಸೇವೆ, ದರದಲ್ಲಿ ವ್ಯತ್ಯಾಸ ಹಾಗೂ ಕಳಪೆ ಗುಣಮಟ್ಟದ ಔಷಧಿ ಸರಬರಾಜು ನಿಲ್ಲಿಸಬೇಕೆಂದು ಹಾಗೂ ಊರಿನ ಸಾರ್ವಜನಿಕರು ಸಹಕರಿಸಬೇಕೆಂದು ಕೇಳಿಕೊಂಡರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>