ಹೊಸನಗರ

ಎಸ್.ಸಿ.ಐ ರಿಪ್ಪನ್‌ಪೇಟೆ ಲಿಜನ್ ಅಧ್ಯಕ್ಷರಾಗಿ ಪಿಯುಸ್ ರೋಡ್ರಿಗಸ್ ಪ್ರಮಾಣ ವಚನ ಸ್ವೀಕಾರ

ಎಸ್.ಸಿ.ಐ ರಿಪ್ಪನ್‌ಪೇಟೆ ಲಿಜನ್ ಅಧ್ಯಕ್ಷರಾಗಿ ಪಿಯುಸ್ ರೋಡ್ರಿಗಸ್ ಪ್ರಮಾಣ ವಚನ ಸ್ವೀಕಾರ – InShot 20260803 222211187

ರಿಪ್ಪನ್‌ಪೇಟೆ : ಎಸ್.ಸಿ.ಐ ರಿಪ್ಪನ್‌ಪೇಟೆ ಲಿಜನ್ ಅಧ್ಯಕ್ಷರ ಸ್ಥಾನಕ್ಕೆ ಪಿಯುಸ್ ರೋಡ್ರಿಗಸ್, ಉಪಾಧ್ಯಕ್ಷರಾಗಿ ಕೆ.ವಿ. ಕುಮಾರ್ ಕೂರ್ಸೆ ಪ್ರಮಾಣ ವಚನ ನೀಡಿ, ನಾಯಕತ್ವ ಎಂಬುದು ಒಂದು ಸಾಮೂಹಿಕ ಕ್ರಿಯೆ ಎಂಬುದನ್ನು ಸೀನಿಯರ್ ಚೇಂಬರ್ ಬಲವಾಗಿ ನಂಬಿದೆ ಎಂದು ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಕಾರ್ಯಕ್ರಮ ಉದ್ಘಾಟಿಸಿ ಎಸ್.ಸಿ.ಐ ರಾಷ್ಟ್ರೀಯ ಅಧ್ಯಕ್ಷ ಎಂ. ವಾಸುದೇವನ್ ಮಾತನಾಡಿ, ಸಮಾಜದ ಕಟ್ಟಕಡೆಯ ಮನುಷ್ಯ ಕೂಡ ಗೌರವಯುತವಾದ ಬದುಕನ್ನು ಬಾಳಬೇಕು. ಇದು ಎಸ್.ಸಿ.ಐ ನ ನಿಜವಾದ ಆಶಯ ಎಂದು ನುಡಿದರು.

ನಿಕಟಪೂರ್ವ ಅಧ್ಯಕ್ಷ ಚಿತ್ರ ಕುಮಾರ್ ಸದಸ್ಯರನ್ನು ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಪ್ರಾಣ ಉಳಿಸಲು ಪ್ರೇರೇಪಿಸಿದರು. ರಕ್ತದಾನವು ಮಾನವೀಯತೆ ತೋರಿಸುವ ಒಂದು ಮಹತ್ವದ ಕಾರ್ಯವಾಗಿದ್ದು, ಎಸ್.ಸಿ.ಐ ಈ ಕಾರ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಪೂರ್ವ ಸಂಯೋಜಕ ಎಚ್.ಎನ್. ಸೂರ್ಯನಾರಾಯಣ ಮಾತನಾಡಿ, ದೇಶದಲ್ಲಿ ಅಪಾರ ಮಾನವ ಸಂಪನ್ಮೂಲವಿದ್ದು, ಅದನ್ನು ದೇಶ ಮತ್ತು ಮಾನವನ ಅಭಿವೃದ್ಧಿಗಾಗಿ ಬಳಸುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಮಾನವ ಸಂಪನ್ಮೂಲ ಅಭಿವೃದ್ಧಿಗೆ ತರಬೇತಿ ಅತ್ಯುತ್ತಮ ಸಾಧನ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶುಭ ಎ. ರಾವ್, ಬೇನಾಜ್ ಹೆಚ್. ಎಂ., ದಿವ್ಯಶ್ರೀ, ದೀಕ್ಷಿತ್ ಆರ್ ಮತ್ತು ಸಾಧಕರಾದ ಶಿಕ್ಷಕ ಭೋಜಪ್ಪ ಅವರನ್ನು ಸನ್ಮಾನಿಸಲಾಯಿತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಸಭೆಯ ಅಧ್ಯಕ್ಷತೆಯನ್ನು ಪಿಯುಸ್ ರೋಡ್ರಿಗಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ಸಿ.ಐ GLC ಸಂಪತ್ ಕುಮಾರ್, ಉಪಾಧ್ಯಕ್ಷ ನಾರಾಯಣ ನಾಯರ್, ತರಬೇತಿ ಮತ್ತು ಯೂತ್ ವಿಂಗ್ ನಿರ್ದೇಶಕ ಹುಸೇನ್ ಹೈಕಾಡಿ, ಕಾರ್ಯದರ್ಶಿ ಸಂಗೀತ ಷಾಜಿ, ಖಜಾಂಚಿ ಸಾಜಿದಹನೀಫ್, ಉಪಾಧ್ಯಕ್ಷ ನೇಮಪ್ಪ ಬಂಡಿ, ಅಜೇಶ್ ಸರಿತಾ ಅನಿಲ್, ದೇವರಾಜ್ ಮಳವಳ್ಳಿ, ಶಾಝಿ, ಪ್ರಭಾಕರ್, ಶೈಜು, ದಾನಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕು. ಕುಮುದ ಪ್ರಾರ್ಥನೆ ಸಲ್ಲಿಸಿದರು. ರಾಮಚಂದ್ರ ಸ್ವಾಗತಿಸಿದರು. ಸಾಹಿತಿ ಹಬೀಬ್ ಸಾಹಿಬ್ ವರದಿ ವಾಚನೆ ನಡೆಸಿದರು. ಗುಂಡನಾಯ್ಕ್ ವಂದಿಸಿದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]