SHIVAMOGGA ; ಮಲೆನಾಡಿನ ಹೊಸನಗರದಲ್ಲಿ ಮರಳು ದಂಗಲ್ ಆರಂಭವಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕೇವಲ ಕಾಂಗ್ರೆಸ್‌ನವರು ಮಾತ್ರ ಮರಳು ಸಾಗಾಟ ಮಾಡಬೇಕೆಂಬ ಅಲಿಖಿತ ನಿಯಮವೊಂದು ಶಿವಮೊಗ್ಗ ಜಿಲ್ಲೆಯಲ್ಲಿ ಜಾರಿಯಾಗಿದ್ದು, ಇದರ ವಿರುದ್ಧ ಇದೀಗ ಬಿಜೆಪಿ ಗರಂ ಆಗಿದೆ.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.facebook.com/share/v/1Yy2bJcyVz/
ಕಾಂಗ್ರೆಸ್‌ನವರೇ ನಾವು ಯಾಕೆ ಮರಳು ಸಾಗಾಟ ಮಾಡಬಾರದೆಂಬ ? ಪ್ರಶ್ನೆ ಬಿಜೆಪಿಯವರು ಎತ್ತಿದ್ದಾರೆ. ಶಿವಮೊಗ್ಗ ಪೊಲೀಸರ ವಿರುದ್ಧವೂ ಹಣದ ಆರೋಪ ಮಾಡಿರುವ ಬಿಜೆಪಿ ನಾಯಕರು, ಮರಳು ಸಾಗಾಟದ ವಿರುದ್ಧ ಲೋಕಾಯುಕ್ತಕ್ಕೂ ದೂರು ನೀಡಿದ್ದಾರೆ.
ರಾಜ್ಯದಲ್ಲಿ, ಮರಳು ವಿಚಾರ ಆಗಾಗ್ಗೆ ಮುನ್ನಲೆಗೆ ಬಂದು, ಅಕ್ರಮ ಮರಳು ಸಾಗಾಟಕ್ಕೆ ರಹದಾರಿಯಾಗುತ್ತಲೇ ಇರುತ್ತದೆ. ಅಷ್ಟಕ್ಕೂ ಇದೀಗ ಮಲೆನಾಡು ಜಿಲ್ಲೆ ಶಿವಮೊಗ್ಗದ ಹೊಸನಗರದಲ್ಲಿಯೂ ಮರಳು ವಿಚಾರ ಮತ್ತೆ ಸದ್ದು ಮಾಡಿದೆ. ಮಲೆನಾಡಿನಲ್ಲಿ ಮರಳು ದಂಗಲ್ ಶುರುವಾಗಿದೆ. ಮರಳು ಸಾಗಾಟದ ವಿಚಾರದಲ್ಲಿ ರಾಜಕೀಯ ಶುರುವಾಗಿದೆ. ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿಪಕ್ಷವಾಗಿರುವ ಬಿಜೆಪಿ ನಡುವೆ ಈ ಮರಳು ಸಾಗಾಟದ ವಿಚಾರ ಪ್ರತಿಷ್ಟೆಯ ಪ್ರಶ್ನೆಯಾಗಿ ಕಾಡಲಾರಂಭಿಸಿದೆ. ಕೇವಲ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್‌ನವರು ಮಾತ್ರ ಮರಳು ಸಾಗಾಟ ಮಾಡಬೇಕು. ವಿರೋಧ ಪಕ್ಷವಾಗಿರುವ ಬಿಜೆಪಿಯವರು ಮರಳು ಸಾಗಾಟ ಮಾಡಬಾರದೆಂಬ ಅಲಿಖಿತ ಫರ್ಮಾನು ಹೊರಡಿಸಲಾಗಿದೆ ಎಂಬುದು ಬಿಜೆಪಿ ಮರಳು ಸಾಗಾಟಗಾರರ ಗಂಭೀರ ಆರೋಪವಾಗಿದೆ.
ಶಿವಮೊಗ್ಗ ಜಿಲ್ಲೆ ಅದರಲ್ಲೂ ಹೊಸನಗರ ಭಾಗದಲ್ಲಿ, ಮರಳು ಸರಬರಾಜು ಮಾಡಲು, ಕೇವಲ ಕಾಂಗ್ರೆಸ್ ನವರಿಗೆ ಮಾತ್ರ ಪರ್ಮಿಷನ್ ಇದಿಯಂತೆ. ಅದರಲ್ಲೂ ಕೆಲವರಿಗೆ ಮಾತ್ರ ಈ ಪರ್ಮಿಷನ್ ನೀಡಲಾಗಿದಿಯಂತೆ. ಇನ್ನುಳಿದಂತೆ, ಬೇರೆಯವರು ಇದಕ್ಕೆ ಕೈ ಹಾಕಿದರೆ, ಸ್ವತಃ ಪೊಲೀಸರೇ ಬಂದು ತಡೆಯುತ್ತಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.
ಈ ಭಾಗದ ಕೆಲ ಪೊಲೀಸರಿಗೆ ಈ ಸಂಬಂಧ ತಿಂಗಳಿಗೆ 1,15,000 ಸಾವಿರ ರೂ. ಸಂದಾಯವಾಗುತ್ತದೆ. ಹೀಗಾಗಿ, ಪೊಲೀಸರು ಕೂಡ ಮರಳು ಮಾಫೀಯಾದಲ್ಲಿ ಕೈ ಜೋಡಿಸುತ್ತಾರೆಂಬ ಆರೋಪ ಕೇಳಿ ಬಂದಿದೆ.
ಅಷ್ಟಕ್ಕೂ, ಈ ಮರಳು ದಂಧೆಯಲ್ಲಿ ಪೊಲೀಸರಿಗೂ 1,15,000 ರೂ. ಮಾಮೂಲಿ ಹೋಗುತ್ತದೆ ಎಂಬ ಗಂಭೀರ ಆರೋಪ ಕೂಡ ಹರತಾಳು ಹಾಲಪ್ಪ ಮಾಡಿದ್ದು, ಮರಳು ಸಾಗಾಟದ ವಿಚಾರದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇರಲಿ ಎಂಬುದು ಬಿಜೆಪಿ ಮರಳು ಸಾಗಾಟಗಾರರ ಒತ್ತಾಯವಾಗಿದ್ದು, ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಲೋಕಾಯುಕ್ತಕ್ಕೂ ದೂರು ನೀಡಿದ್ದು, ಕೂಡಲೇ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್ ಹಾಗೂ ಕಂದಾಯ ಇಲಾಖಾಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂಬ ಆಗ್ರಹ ಮಾಡಲಾಗಿದೆ.
ಒಟ್ಟಾರೆ, ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ, ಮರಳು ಸಾಗಾಟದ ವಿಚಾರದಲ್ಲಿ ರಾಜಕೀಯ ಜಿದ್ದು ಶುರುವಾಗಿದ್ದು, ಇದರಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದವರು ಮಾತ್ರ, ಮರಳು ಸಾಗಾಟ ಮಾಡಬೇಕೆಂಬ ಅಲಿಖಿತ ನಿಯಮವೊಂದು ಜಾರಿಯಾಗಿದೆ.
ಏನೇಯಾಗ್ಲೀ, ಮರಳು ಸಾಗಾಟದ ವಿಚಾರದಲ್ಲಿ ನದಿ ಪಾತ್ರದಲ್ಲಿ ಮರಳು ಕಡಿಮೆಯಾಗಿ, ನದಿಗಳಿಗೆ ಯಾವುದೇ ತೊಂದರೆಯಾಗಬಾರದೆಂಬುದು ನಮ್ಮ ಆಶಯವಾಗಿದೆ.