ಹೊಸನಗರ: ತಾಲೂಕಿನ ಸಾಗರ-ಹೊಸನಗರ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾರ್ಯ ಹಾಗೂ ಮರಗಳ ಕಡಿತಲೆ ಹಿನ್ನೆಲೆಯಲ್ಲಿ ನವೆಂಬರ್ 3 ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ (MESCOM) ತಿಳಿಸಿದೆ.
33 ಕೆ.ವಿ ಸಾಗರ-ಹೊಸನಗರ ವಿದ್ಯುತ್ ಮಾರ್ಗದ ನಿರ್ವಹಣೆ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಾರ್ಗಕ್ಕೆ ತಾಗುವ ಮರಗಳ ರೆಂಬೆಗಳನ್ನು ಕಡಿಯುವ ಕಾಮಗಾರಿ ನಡೆಯಲಿದೆ. ಈ ಕಾರಣದಿಂದಾಗಿ ಅಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು (ಗ್ರಾ.ಪಂ. ವ್ಯಾಪ್ತಿ):
- ಹೊಸನಗರ ಟೌನ್ ವ್ಯಾಪ್ತಿ
- ಜೇನಿ
- ಹರಿದ್ರಾವತಿ
- ಹರತಾಳು
- ಪುರಪ್ಪೆಮನೆ
- ಮಾರುತಿಪುರ
- ರಾಮಚಂದ್ರಾಪುರ
- ಮೇಲಿನಬೆಸಿಗೆ
- ಸೊನಲೆ
- ಎಂ.ಗುಡ್ಡೆಕೊಪ್ಪ
- ಕರಿನಗೊಳ್ಳಿ
- ಕೋಡೂರು
ಕಾಮಗಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಂಟಾಗುವ ಅನನುಕೂಲತೆಗೆ ವಿಷಾದಿಸುತ್ತಾ, ಹೊಸನಗರ ಉಪವಿಭಾಗ ವ್ಯಾಪ್ತಿಯ ಗ್ರಾಹಕರು ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಮೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

