ಚಲಿಸುತ್ತಿದ್ದ ಸರ್ಕಾರಿ ಬಸ್ ಮೇಲೆ ಉರುಳಿದ ವಿದ್ಯುತ್ ಕಂಬ !

Written by Mahesha Hindlemane

Published on:

HOSANAGARA | ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು ಅಲ್ಲಲ್ಲಿ ಅನಾಹುತಗಳು ನಡೆಯುತ್ತಿವೆ.

WhatsApp Group Join Now
Telegram Group Join Now
Instagram Group Join Now

ಇಂದು ಬೆಳಗ್ಗೆ ಚಲಿಸುತ್ತಿದ್ದ ಸರ್ಕಾರಿ ಬಸ್ (KSRTC Bus) ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೇಕಟ್ಟೆ – ನಿಟ್ಟೂರು ಮಾರ್ಗದಲ್ಲಿ ನಡೆದಿದೆ.

ಬಸ್‌ನ ಹಿಂಬದಿಯ ಒಂದು ಬದಿಗೆ ವಿದ್ಯುತ್ ಕಂಬ ತಂತಿ ಸಮೇತ ಬಿದ್ದಿದ್ದು ಅದೃಷ್ಟವಶಾತ್ ಈ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ‌.

ಬಸ್ ಬೆಂಗಳೂರಿನಿಂದ ಹೊಸನಗರ – ನಗರ ಮಾರ್ಗವಾಗಿ ಕೊಲ್ಲೂರು ಕಡೆ ಚಲಿಸುತ್ತಿತ್ತು‌. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಂಬ ತೆರವುಗೊಳಿಸಿ ಸಂಚಾರ ಅನುವುಮಾಡಿಕೊಟ್ಟರು‌.

Leave a Comment