ಡಿ.08 ರಂದು “ಪ್ರತಿಬಿಂಬ ಸಾಗರ-ಸೊರಬ” ಕಾರ್ಯಕ್ರಮ

Written by malnadtimes.com

Published on:

SORABA ; ಶ್ರೀ ಅಖಿಲ ಹವ್ಯಕ ಮಹಾಸಭಾದ ವತಿಯಿಂದ ಡಿ. 8ರಂದು ತಾಲೂಕಿನ ನಿಸರಾಣಿ ಗ್ರಾಮದ ವಿದ್ಯಾಭಿವೃದ್ಧಿ ಸಂಘ ಪ್ರೌಢಶಾಲೆಯ ಆವರಣದಲ್ಲಿ “ಪ್ರತಿಬಿಂಬ ಸಾಗರ-ಸೊರಬ” ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರತಿಬಿಂಬದ ಸಂಚಾಲಕ ಎಚ್. ರಾಜಾರಾಮ ರಾವ್ ಹೊಸಬಾಳೆ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಶುಕ್ರವಾರ ಪಟ್ಟಣದ ಜೈಮಾತಾ ಸಭಾಂಗಣದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂದು ಕ್ರೀಡೋತ್ಸವ, ಸ್ಪರ್ಧಾ ಸೌರಭ, ಆರ್ತ ಸಹಾಯ ವಿತರಣೆ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ವೈಭವ ನಡೆಯಲಿದ್ದು, ಬೆಳಗ್ಗೆ 9ಕ್ಕೆ ಕಾರ್ಯಕ್ರಮವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ವೈದ್ಯ ಡಾ. ಎಂ.ಕೆ. ಭಟ್ ಉದ್ಘಾಟಿಸಲಿದ್ದಾರೆ. ಪ್ರಗತಿಪರ ಕೃಷಿಕ ಸೀತಾರಾಮಯ್ಯ ಕಟ್ಟಿನಕೆರೆ, ಸಾಗರದ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್. ಮಹಾಬಲೇಶ್ವರ ಉಪಸ್ಥಿತರಿರುವರು ಎಂದರು.

ನಂತರ ಬೆಳಗ್ಗೆ 10ರಿಂದ ಸ್ಪರ್ಧಾ ಸೌರಭ ನಡೆಯಲಿದ್ದು, ಆರು ವರ್ಷದ ಮಕ್ಕಳಿಗೆ ಯಾವುದೇ ಶ್ಲೋಕ ಪಠಣ, ಚಿತ್ರಕ್ಕೆ ಬಣ್ಣ ತುಂಬುವುದು, 6ರಿಂದ 12 ವರ್ಷದವರಿಗೆ ಭಗವದ್ಗೀತಾ ಕಂಠಪಾಠ ಒಂದನೇ ಅಧ್ಯಾಯದ ಮೊದಲ 15 ಶ್ಲೋಕಗಳು ಮತ್ತು ಚಿತ್ರಕಲೆ, 18 ವರ್ಷದೊಳಗಿವರಿಗೆ ರಸಪ್ರಶ್ನೆ, ಆಶುಭಾಷಣ, 18 ವರ್ಷ ಮೇಲ್ಪವರಿಗೆ ಹವ್ಯಕ ಸಂಪ್ರದಾಯ ಗೀತೆ, ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಲಾಗಿದೆ.

ಮಧ್ಯಾಹ್ನ 2ರಿಂದ 4ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಗೀತ, ಗಮಕ ಹಾಗೂ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಸಂಜೆ 4ಕ್ಕೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಹವ್ಯಕ ಮಹಾಸಭಾದ ಮಾಜಿ ಪ್ರಧಾನ ಕಾರ್ಯದರ್ಶಿ ಜಿ.ಜಿ. ಹೆಗಡೆ ತಲೆಕೇರಿ ವಹಿಸಲಿದ್ದಾರೆ.

ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಎಚ್. ಶ್ರೀಪಾದರಾವ್, ಸಾಗರದ ಆಯುರ್ವೇದ ವೈದ್ಯ ಡಾ. ನಿರಂಜನ ಹೆಗಡೆ, ಸಂಘಟನೆಯ ನಿರ್ದೇಶಕಿ ರಾಜಲಕ್ಷ್ಮಿ ದೇವಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಗುವುದು ಮತ್ತು ಆರ್ತ ಸಹಾಯ ವಿತರಣೆ ನಡೆಯಲಿದೆ. ಕಾರ್ಯಕ್ರಮಕ್ಕೆ ಹವ್ಯಕ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಎಂ.ಕೆ. ಭಟ್ ಮಾತನಾಡಿ, ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯವಾದರೂ ಬುದ್ದಿವಂತಿಕೆ, ಸಂಸ್ಕೃತಿ ಮತ್ತು ಸಂಸ್ಕಾರಗಳಿಂದ ಸಮಾಜವು ಗುರುತಿಸುತ್ತಿದೆ. ರಾಜ್ಯದಲ್ಲಿ ಹವ್ಯಕ ಸಮಾಜದವರು ಸುಮಾರು 5 ಲಕ್ಷದಷ್ಟಿದ್ದಾರೆ. ಎಲ್ಲರನ್ನೂ ಒಗ್ಗೂಡಿಸುವ ಉದ್ದೇಶದಿಂದ ಸಂಘಟನೆಯು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಅಖಿಲ ಹವ್ಯಕ ಮಹಾಸಭಾದಿಂದ ಡಿ.27ರಿಂದ 29ರವರೆಗೆ ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ.

ವಿಶೇಷವಾಗಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾಸಿಲಾಗುವುದು ಮತ್ತು ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳು ಜರುಗಲಿದೆ ಎಂದರು.

ಪ್ರತಿಬಿಂಬದ ಸಹ ಸಂಚಾಲಕ ಚಂದ್ರಶೇಖರ ಭಟ್ ಹೊರಬಟ್ಟೆ, ಪ್ರತಿನಿಧಿಗಳಾದ ರಘುನಂದನ್ ಪಟೇಲ್ ಕೆರೆಕೊಪ್ಪ, ಎನ್. ಚಂದನ್, ಡಾ. ಅಶೋಕ ವಿ. ಹೊಸಬಾಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Comment