RIPPONPETE ; ರಸ್ತೆ ಅಗಲೀಕರಣ ಹೆಸರಿನಲ್ಲಿ ಅಧಿಕೃತ ಕಟ್ಟಡವನ್ನು ಲೋಕೋಪಯೋಗಿ ಇಲಾಖೆಯವರು ಕಂದಾಯ ಇಲಾಖೆಯವರು ತಿಳುವಳಿಕೆಯನ್ನು ನೀಡದೇ ಏಕಾಏಕಿ ತೆರವುಗೊಳಿಸಿ ಕಟ್ಟಡದ ಮಾಲೀಕರನ್ನು ಬೀದಿಗೆ ತಳ್ಳಿರುವ ಕ್ರಮವನ್ನು ಖಂಡಿಸಿ ಏಕಾಂಗಿ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ದಾಖಲೆ ಪತ್ರವನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಸಾಗರ – ತೀರ್ಥಹಳ್ಳಿಯ ರಾಜ್ಯ ಹೆದ್ದಾರಿಯ ರಿಪ್ಪನ್‌ಪೇಟೆಯ ತಲಾ ಒಂದೊಂದು ಕಿ.ಮೀ.ರಸ್ತೆ ಅಗಲೀಕರಣ ಕಾಮಗಾರಿಗೆ ಸರ್ಕಾರದಿಂದ 5.85 ಕೋಟಿ ರೂ. ಅನುದಾನ ಬಿಡುಗಡೆಯಾಗುವ ಮೂಲಕ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭಿಸಲಾಗಿದ್ದು ಅಲ್ಲದೆ ರಸ್ತೆ ಬಾಕ್ಸ್ ಚರಂಡಿ, ಡಿವೈಡರ್ ಹೀಗೆ ಕಾಮಗಾರಿ ಪ್ರಗತಿಯಲ್ಲಿದ್ದು ಮಳೆಗಾಲದ ಕಾರಣ ಕಾಮಗಾರಿಯನ್ನು ಕಳೆದ ಮೂರ್ನಾಲ್ಕು ತಿಂಗಳು ಸ್ಥಗಿತಿಗೊಂಡಿದ್ದು ಈಗ ಪುನರಾರಂಭಗೊಳ್ಳುವ ಮುನ್ನವೇ ವಿನಾಯಕ ವೃತ್ತದ ಬಳಿಯ ಖಾಸಗಿ ಗಣೇಶ ಮೆಟಲ್ ಸ್ಟೋರ‍್ ಅಂಗಡಿಯವರು ತೆರವುಗೊಳಿಸಿಲ್ಲದ ಕಾರನ ಏಕಾಏಕಿ ಕಳೆದ ಸೋಮವಾರ ತಹಶೀಲ್ದಾರ್ ಮತ್ತು ಲೋಕೋಪಯೋಗಿ ಇಲಾಖೆ ಪೊಲೀಸ್ ಭದ್ರತೆಯಲ್ಲಿ ಅಧಿಕೃತ ಅಂಗಡಿಯನ್ನು ತೆರವುಗೊಳಿಸುವ ಮೂಲಕ ಮಾಲೀಕರನ್ನು ಬೀದಿಗೆ ತಳ್ಳಿದ್ದಾರೆಂದು ಆರೋಪಿಸಿದರು.
ಸರ್ಕಾರ ಕೂಡಲೇ ಇತ್ತ ಗಮನಹರಿಸಿ ಕಟ್ಟಡದ ಮಾಲೀಕನಿಗಾದ ನಷ್ಟವನ್ನು ತುಂಬಿಸಿಕೊಡುವ ಮೂಲಕ ಸೂಕ್ತ ಪರಿಹಾರ ಕಲ್ಪಿಸಿಕೊಡುವಂತೆ ಆಗ್ರಹಿಸಿದ ಅವರು, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದರು.