ಸುಹಾಸ್‌ ಶೆಟ್ಟಿ ಹತ್ಯೆ ಖಂಡಿಸಿ ಹೊಸನಗರದಲ್ಲಿ ಪತ್ರಿಭಟನೆ

Written by malnadtimes.com

Published on:

ಹೊಸನಗರ ; ಬುಧವಾರ ರಾತ್ರಿ ಮಂಗಳೂರಿನ ಭಜರಂಗದಳದ ಸದಸ್ಯ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಿರುವುದನ್ನು ಖಂಡಿಸಿ ಹೊಸನಗರ ತಾಲ್ಲೂಕು ಬಿಜೆಪಿ ಘಟಕ ಹಾಗೂ ಭಜರಂಗದಳದ ಸದಸ್ಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ರಶ್ಮಿ ಹಾಲೇಶ್‌ಗೆ ಮನವಿ ಪತ್ರ ಸಲ್ಲಿಸಿ ಹತ್ಯೆ ನಡೆಸಿದವರನ್ನು ತಕ್ಷಣ ಬಂಧಿಸಬೇಕು ಹಾಗೂ ಹತ್ಯೆಗೆ ಬೆಂಬಲಿಸಿದವರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

WhatsApp Group Join Now
Telegram Group Join Now
Instagram Group Join Now

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಸುಹಾಸ್ ಶೆಟ್ಟಿ ಹತ್ಯೆ ಹಿಂದೂ ವಿರೋಧಿ ಜಿಹಾದಿಗಳು ನಡು ರಸ್ತೆಯಲ್ಲಿ ಭೀಕರವಾಗಿ ಕೊಲೆ ಮಾಡಿದ್ದು ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ತಕ್ಷಣ ದುಷ್ಟ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರಕ್ಷಣಾ ಇಲಾಖೆಯ ಅಧಿಕಾರಿಗಳು ಕೆಲವು ದಿನಗಳ ಹಿಂದೆ ಕೊಲೆ ಬೆದರಿಕೆ ಇದ್ದರೂ ಸಹ ಅವರಿಗೆ ರಕ್ಷಣೆ ಇಟ್ಟುಕೊಳ್ಳಲು ಅವಕಾಶ ಕೊಟ್ಟಿರುವುದಿಲ್ಲ. ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿಯೇ ಇದಕ್ಕೆ ಕಾರಣವಾಗಿದೆ ಕೆಜಿಹಳ್ಳಿ ಡಿಜೆಹಳ್ಳಿಗಳಲ್ಲಿನ ಆರೋಪಿಗಳ ಮೇಲಿನ ಮೊಕದ್ದಮೆಗಳನ್ನು ಕೈ ಬಿಟ್ಟು ಅವರಿಗೆ ಬ್ರದರ‍್ಸ್ ಎಂದು ಕರೆದು ರಾಜ್ಯದಲ್ಲಿ ಹಿಂದುಗಳನ್ನು ಕೊಚ್ಚಿ ಹಾಕಲು ಕಾರಣವಾಗಿದೆ.

ವೋಟ್ ಬ್ಯಾಂಕ್ ತುಷ್ಟಿಕರಣ ನೀತಿಯಿಂದಾಗಿ ರಾಜ್ಯದಲ್ಲಿ ಹಿಂದುಗಳ ಬದುಕುವುದು ಕಷ್ಟಕರವಾಗಿದೆ ಕೊಡಲೇ ರಾಜ್ಯ ಸರ್ಕಾರ ಹಿಂದುಗಳ ಪರ ನಿಲ್ಲಬೇಕು ಹಾಗೂ ಹಿಂದುಗಳಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಹಿರಿಯರಾದ ಉಮೆಶ್ ಕಂಚುಗಾರ್, ಎಂ.ಎನ್ ಸುಧಾಕರ್, ಕೆ.ವಿ ಕೃಷ್ಣಮೂರ್ತಿ, ಎ.ವಿ. ಮಲ್ಲಿಕಾರ್ಜುನ, ಗಣಪತಿ ಬಿಳಗೋಡು, ಸುರೇಶ್ ಸ್ವಾಮಿರಾವ್, ಸುಧೀಂದ್ರ ಪಂಡಿತ್, ಆಲವಳ್ಳಿ ವೀರೇಶ್, ಎಸ್.ಹೆಚ್. ನಿಂಗಮೂರ್ತಿ, ಎಸ್ ಶ್ರೀಧರ ಉಡುಪ, ಶ್ರೀಪತಿರಾವ್, ರಮೇಶ್, ಪ್ರಕಾಶ್ ಶೆಟ್ಟಿ, ಮಂಡಾಣಿ ಮೋಹನ, ರಮೇಶ್‌ಶೆಟ್ಟಿ. ಮಂಜುನಾಥ್ ಸಂಜೀವ, ವಿ.ಸತ್ಯನಾರಾಯಣ, ವಿಜಯಕುಮಾರ್, ಗೌತಮ್ ಕುಮಾರಸ್ವಾಮಿ, ಮುರುಳಿಧರ ಹತ್ವಾರ್, ನೆರಲೆ ರಮೇಶ್, ಮನು, ಕಾರಣಗಿರಿ ಕವ್ಯಾ, ಕಲ್ಲುಕೊಪ್ಪ ರಾಗವೇಂದ್ರ, ಕೋಣೆಮನೆ ಶಿವಕುಮಾರ್, ಶಶಿಕಲಾ ಅನಂತ್, ರಾಜೇಶ್ವರಿ, ಆಶಾ, ಸಾಕಷ್ಟು ಹಿಂದುಪರ ಸದಸ್ಯರು ಉಪಸ್ಥಿತರಿದ್ದರು.

Leave a Comment