Karnataka Rain:ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ಪ್ರಕೃತಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಪ್ರಕಟಿಸಿರುವ ತಾಜಾ ಮುನ್ಸೂಚನೆಯ ಪ್ರಕಾರ, ಮುಂದಿನ 7 ದಿನಗಳವರೆಗೆ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಜೋರಾದ ಗಾಳಿಯೊಂದಿಗೆ ಚದುರಿದಿಂದ ವ್ಯಾಪಕವಾಗಿ ಹಗುರದಿಂದ ಭಾರಿ ಮಳೆಯ ಸಾಧ್ಯತೆ ಇದೆ.
ಇಂದು ಮತ್ತು ನಾಳೆ (ಗುರುವಾರ ಮತ್ತು ಶುಕ್ರವಾರ) ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಅತಿ ಭಾರಿ ಮಳೆಯ ಸಾಧ್ಯತೆ. ಅಲ್ಲದೆ, ಈ ಭಾಗಗಳಿಗೆ ಹೊಂದಿಕೊಂಡಿರುವ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.
ಹೀಗಾಗಿ, ಸಾರ್ವಜನಿಕರು, ರೈತರು, ಪ್ರವಾಸಿಗರು ಮತ್ತು ಮೀನುಗಾರರು ಮುನ್ನೆಚ್ಚರಿಕೆ ವಹಿಸಲು KSNDMC ಹಾಗೂ IMD ಸೂಚನೆ ನೀಡಿವೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
ಮುನ್ನೆಚ್ಚರಿಕೆ:
- ಕಡಲ ತೀರ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಿ, ಅಗತ್ಯವಿದ್ದರೆ ಸ್ಥಳಾಂತರವಾಗಿ .
- ಗುಡ್ಡ ಪ್ರದೇಶಗಳಲ್ಲಿ ನೆರೆ/ಗುಡ್ಡ ಕುಸಿತದ ಸಾಧ್ಯತೆ ಇರುವ ಕಾರಣದಿಂದ ಗ್ರಾಮಸ್ಥರು ಎಚ್ಚರಿಕೆಯಿಂದ ಇರಲಿ.
- ಪ್ರವಾಸ, ಬೆಟ್ಟಾರೋಹಣ ಅಥವಾ ನದಿತೀರದ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಕೈ ಬಿಡಿ .
- ಸಂಬಂಧಿತ ಇಲಾಖೆ ಸೂಚನೆ ಪಾಲಿಸಿ.
Read More :ಮನೆ ಕಟ್ಟುವವರಿಗೆ ಬಿಗ್ ಶಾಕ್ ! ಈ ನಿಯಮ ಪಾಲಿಸದಿದ್ದರೆ ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತ !

