ಹೊಸನಗರ : ಸತತ 10-15 ವರ್ಷಗಳಿಂದ ಹೊಸನಗರ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪೆನ್ನು ಪುಸ್ತಕಗಳನ್ನು ಜೊತೆಗೆ ಬಡ ಮಕ್ಕಳಿಗೆ ಸಹಾಯ ಹಸ್ತ ನೀಡುತ್ತಾ ಬರುತ್ತಿರುವ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಗುಳ್ಳೆಕೊಪ್ಪ ಗ್ರಾಮದ ರವಿಕುಮಾರ್‌ಗೆ ಎಕ್ಸಲೆನ್ಸ್ ಅಂಡ್ ಹಾನರ್ ಪುರಸ್ಕಾರವನ್ನು ವಿಜಯ ಕರ್ನಾಟಕ ತಂಡ ನೀಡಿದೆ.
ಬೆಂಗಳೂರಿನಲ್ಲಿ 25 ವರ್ಷಗಳ ಇತಿಹಾಸವಿರುವ ಇವರ ಸಂಸ್ಥೆ ಉತ್ತಮ ಗುಣಮಟ್ಟದ ಎಲೆಕ್ಟ್ರಿಕ್ ಕಂಟ್ರೋಲ್ ಪ್ಯಾನಲ್‌ಗಳನ್ನು ವಿದೇಶಗಳಿಗೂ ಪೂರೈಕೆ ಮಾಡುತ್ತಿದ್ದು ಇದನ್ನು ಗುರುತಿಸಿ ಕಳೆದ ವರ್ಷ ಭಾರತ ಸರ್ಕಾರ ಮೇಕ್ ಇನ್ ಇಂಡಿಯಾ ಪ್ರಶಸ್ತಿ ನೀಡಿ ಗೌರವಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

