ರಿಪ್ಪನ್‌ಪೇಟೆ ; 76ನೇ ಗಣರಾಜ್ಯೋತ್ಸವ ಮತ್ತು ಸ್ವಾಮಿವಿವೇಕಾನಂದರ ಜಯಂತ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಕೋಡೂರು ಬ್ಲಾಸಂ ಅಕಾಡಮಿ ಶಾಲಾ ವಿದ್ಯಾರ್ಥಿಗಳ ವೇಷಭೂಷಣ, ಪಥಸಂಚಲನ ಸಾರ್ವಜನಿಕರನ್ನು ಆಕರ್ಷಿಸಿತು.
ಕೋಡೂರು ಇತಿಹಾಸ ಪ್ರಸಿದ್ದ ಶ್ರೀಶಂಕರೇಶ್ವರ ದೇವಸ್ಥಾನದಿಂದ ಸ್ವಾಮಿ ವಿವೇಕಾನಂದರ ವೇಷಭೂಷಣದೊಂದಿಗೆ ಮಕ್ಕಳ ಪಥ ಸಂಚಲನಕ್ಕೆ ತಾಲ್ಲೂಕು ಪಂಚಾಯ್ತಿಮಾಜಿ ಸದಸ್ಯ ಹಾಗೂ ಬ್ಲಾಸಂ ಅಕಾಡಮಿ ಅಧ್ಯಕ್ಷ ಚಂದ್ರುಮೌಳಿ ಚಾಲನೆ ನೀಡಿ ಮಾತನಾಡಿ, ದೇಶದ ಅಖಂಡತೆಯನ್ನು ಹೊರದೇಶದಲ್ಲಿ ಪ್ರಚರಪಡಿಸುವ ಮೂಲಕ ವಿಶ್ವ ನಾಯಕರಾಗಿರುವ ಸ್ವಾಮಿ ವಿವೇಕಾನಂದರ ಆದರ್ಶಗಳು ಇಂದಿನ ವಿದ್ಯಾರ್ಥಿಗಳಲ್ಲಿ ಬೆಳೆಸುವ ಕೆಲಸ ಮಾಡುವುದರೊಂದಿಗೆ ಜನಜಾಗೃತಗೊಳಿಸುವ ನಿಟ್ಟಿನಲ್ಲಿ ಸಣ್ಣದೊಂದು ಪ್ರಯತ್ನ ನಡೆಸುತ್ತಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಸಂ ಅಕಾಡಮಿ ಟ್ರಸ್ಟಿಗಳಾದ ಸುರೇಶ್, ದಿವಾಕರಶೆಟ್ಟಿ, ಮುಖ್ಯೋಪಾಧ್ಯಾಯ ಸುಧಾಕರ್, ಪ್ರಕಾಶ, ಕೋಮಲ, ನಾಗಶ್ರೀ, ದೀಪಾ, ಅಶ್ವಿನಿ, ಗೀತಾ, ಆಸ್ಮಾ, ಅನಿಷಾ, ಪೋಷಕರು ಇನ್ನಿತರರು ಹಾಜರಿದ್ದರು.
ವಿದ್ಯಾರ್ಥಿಗಳ ಪಥಸಂಚಲನವು ಕೋಡೂರು ಮುಖ್ಯ ರಸ್ತೆಯಲ್ಲಿ ಸಂಚರಿಸಿ ಜನಾಕರ್ಷಣೆಗೊಂಡಿತು.