ಹೊಸನಗರ ; ನಿವೃತ್ತ ನೌಕರರಿಂದ ಪಿಂಚಣಿ ಪರಿಷ್ಕರಣೆಗೆ ಒತ್ತಾಯಿಸಿ ಮನವಿ

Written by Mahesha Hindlemane

Published on:

ಹೊಸನಗರ ; 8ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಸಂದರ್ಭದಲ್ಲಿ ನಿವೃತ್ತ ಪಿಂಚಣಿದಾರರಿಗೆ ಪಿಂಚಣಿ ಕುಟುಂಬ ಪಿಂಚಣಿ ಹಾಗೂ ತುಟಿಭತ್ಯ ಪರಿಷ್ಕರಿಸಬೇಕೆಂದು ಹೊಸನಗರ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ದಿನಮಣಿ ನೇತೃತ್ವದಲ್ಲಿ ಹೊಸನಗರ ಗ್ರೇಡ್ 2 ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

WhatsApp Group Join Now
Telegram Group Join Now
Instagram Group Join Now

ಈ ಸಂದರ್ಭದಲ್ಲಿ ಮಾತನಾಡಿದ ಡಾ. ದಿನಮಣಿ, ಕೇಂದ್ರದ ಆರ್ಥಿಕ ಸಚಿವೆ ನಿರ್ಮಲ ಸೀತಾರಾಮನ್ ಅವರು ಸಂಸತ್‌ನಲ್ಲಿ 2025ರ ಏ.1 ಕ್ಕೂ ಮೊದಲು ನಿವೃತ್ತರಾದ ಸರ್ಕಾರಿ ನೌಕರರಿಗೆ ಪಿಂಚಣಿ ಕೌಟುಂಬಿಕ ಪಿಂಚಣಿ ತುಟಿಭತ್ಯೆಗಳನ್ನು 8ನೇ ಆಯೋಗದಲ್ಲಿ ಪರಿಷ್ಕರಿಸುವುದು ಕಷ್ಟ ಸಾಧ್ಯ ಎಂದು ಹೇಳಿದ್ದು ಇದರಿಂದ ಲಕ್ಷಾಂತರ ನಿವೃತ್ತ ನೌಕರರಿಗೆ ಅನ್ಯಾಯವಾಗಲಿದೆ ಎಂದು ಹೇಳಿದ್ದು ಸಚಿವರ ಈ ಹೇಳಿಕೆಯನ್ನು ಮರುಪರಿಶೀಲಿಸುವಂತೆ ತಿಳಿಸಿದ್ದು ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಎಲ್ಲ ನಿವೃತ್ತ ಪಿಂಚಣಿದಾರರ ಒಕ್ಕೂಟಗಳು ಹಾಗೂ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ನಿರ್ದೇಶನದಂತೆ ಜಿಲ್ಲಾ ಮಟ್ಟದ ಸಭೆಗಳಿಗೆ ಆಹ್ವಾನಿಸಿ ಚರ್ಚಿಸಲಾಗಿದ್ದು 2025ರ ಏ.1ಕ್ಕೂ ಮುಂಚಿತವಾಗಿ ನಿವೃತ್ತರಾದ ನೌಕರರಿಗೆ ಪಿಂಚಣಿದಾರರಿಗೆ ಪಿಂಚಣಿ ಕುಟುಂಬ ಪಿಂಚಣಿ ಮತ್ತು ಕಾಲ-ಕಾಲಕ್ಕೆ ನೀಡುವ ತುಟ್ಟಿಭತ್ಯೆಗಳನ್ನು ಪುನರ್ ಪರಿಶೀಲಿಸಿ ಯಥಾವತ್ತಾಗಿ ಜಾರಿ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಅನಂತ ಪದ್ಮನಾಭ, ನಿರ್ದೇಶಕರುಗಳಾದ ಮಹಾಬಲ, ಎನ್ ರಂಗನಾಥ್, ಗೋವಿಂದಪ್ಪ, ಎಸ್ ಮಂಜುನಾಥ್, ಜಾಲೇಂದ್ರಪ್ಪ, ಸುಬ್ರಹ್ಮಣ್ಯ, ಶಾರದ ಗೋಖಲೆ, ನಳಿನಿ ಎಸ್ ಮಂಜುನಾಥ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


ನಿವೃತ್ತ ನೌಕರ ಎಸ್ ಮಂಜುನಾಥ್‌ಗೆ ಸನ್ಮಾನ

ಹೊಸನಗರ : ಅರಣ್ಯ ಇಲಾಖೆಯ ನೌಕರರಾಗಿ ಸುಮಾರು 50 ವರ್ಷಗಳ ಸೇವೆ ಸಲ್ಲಿಸುವುದರ ಜೊತೆಗೆ ಇಲಾಖೆಗೆ ಉತ್ತಮವಾಗಿ ಕೆಲಸ ನಿರ್ವಹಿಸಿದ ಎಸ್ ಮಂಜುನಾಥ್‌ಗೆ ಈಗ 75 ವರ್ಷವಾಗಿರುವುದರಿಂದ ಇವರನ್ನು ಹೊಸನಗರ ನಿವೃತ್ತ ನೌಕರರ ಸಂಘದ ವತಿಯಿಂದ ನೌಕರರ ಸಂಘದ ಆವರಣದಲ್ಲಿ ಅದ್ದೂರಿಯಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು.

ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಡಾ. ದಿನಮಣಿ, ಕಾರ್ಯದರ್ಶಿ ಅನಂತ ಪದ್ಮನಾಭ, ನಿರ್ದೇಶಕರುಗಳಾದ ಮಹಾಬಲ, ಎನ್ ರಂಗನಾಥ್, ಗೋವಿಂದಪ್ಪ, ಎಸ್ ಮಂಜುನಾಥ್, ಜಾಲೇಂದ್ರಪ್ಪ, ಸುಬ್ರಹ್ಮಣ್ಯ, ಶಾರದ ಗೋಖಲೆ, ನಳಿನಿ ಎಸ್ ಮಂಜುನಾಥ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment