ರಿಪ್ಪನ್‌ಪೇಟೆ ; ಹೊಸನಗರ, ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ನಿವೃತ್ತ ಪ್ರಾಚಾರ್ಯ, ಇಂಗ್ಲೀಷ್ ಪ್ರಾಧ್ಯಾಪಕ, ತೀರ್ಥಹಳ್ಳಿ ವಾಗ್ದೇವಿ ಬಿ.ಎಡ್ ಕಾಲೇಜು ಮಾಲೀಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಕೆ. ಕರುಣಾಕರ್ (64) ಇಂದು ಮುಂಜಾನೆ 6:30ಕ್ಕೆ ನಿಧನ ಹೊಂದಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಹೊಸನಗರ ತಾಲ್ಲೂಕಿನ ಹುಂಚ ಗ್ರಾಮದಲ್ಲಿ ವೀರಶೈವ ಸಂಪ್ರದಾಯದಂತೆ ಹಿಂದೂ ರುದ್ರಭೂಮಿಯಲ್ಲಿ ಜರುಗಲಿದೆ.
ಸಂತಾಪ :
ಕರುಣಾಕರ್ ನಿಧನದ ಸುದ್ಧಿ ತಿಳಿದ ತಕ್ಷಣ ಹೊಸನಗರ ಕೊಡಚಾದ್ರಿ ಕಾಲೇಜ್ ಪ್ರಾಂಶುಪಾಲ ಉಮೇಶ್, ಗ್ರಂಥಪಾಲಕ ಲೋಕೇಶ್, ನಿವೃತ್ತ ಪ್ರಾಂಶುಪಾಲ ಮಾರ್ಷಲ್ ಶರಾಮ್ ಹಾಗೂ ಕೊಡಚಾದ್ರಿ ಕಾಲೇಜಿನ ಉಪನ್ಯಾಸಕ ವೃಂದ ಮೃತರ ಮನೆಗೆ ತೆರಳಿ ಸಂತಾಪ ಸೂಚಿಸುವುದರ ಜೊತೆಗೆ ಮೃತರ ಕುಟುಂಬಕ್ಕೆ ಸಂತ್ವಾನ ಹೇಳಿದರು.