ರಿಪ್ಪನ್‌ಪೇಟೆ ; ಕೇಂದ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಸೈನಿಕ ಮಾದಾಪುರ ಗ್ರಾಮದ ಕೊರಟಿಕೆರೆ ನಿವಾಸಿ ಲಿಂಗರಾಜ್ ಜಿ. ಇವರಿಗೆ ಗ್ರಾಮಸ್ಥರು ಮತ್ತು ಸಾರ್ವಜನಿಕರು ನಿವೃತ್ತ ಸೈನಿಕರು ಅದ್ದೂರಿಯಾಗಿ ಸ್ವಾಗತಿಸಿ ಮೆರವಣಿಗೆ ಮೂಲಕ ಬರಮಾಡಿಕೊಂಡರು.
ನಿವೃತ್ತ ಸೈನಿಕ ಲಿಂಗರಾಜ್ ಜಿ.ಇವರು ಊರಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಸಮೀಪದ ಸಿದ್ದಪ್ಪನಗುಡಿ ಬಳಿ ತೆರೆದ ವಾಹನದ ಮೂಲಕ ಮೆರವಣಿಗೆಯೊಂದಿಗೆ ವಿನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತ್ ಆಧ್ಯಕ್ಷೆ ಧನಲಕ್ಷ್ಮಿ, ಕೆಂಚನಾಲ ಗ್ರಾಮ ಪಂಚಾಯಿತ್ ಆಧ್ಯಕ್ಷ ಉಬೇದುಲ್ಲಾ ಷರೀಫ್ ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಮಾದಾಪುರ ,ಕೊರಟಿಕೆರೆ ಇನ್ನಿತರ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾಯಕಯೋಗಿ ಶಿವಕುಮಾರ ಸ್ವಾಮೀಜಿಗಳ ಜನ್ಮದಿನಾಚರಣೆ
ರಿಪ್ಪನ್‌ಪೇಟೆ ; ಕಾಯಕಯೋಗಿ ತ್ರಿವಿಧ ದಾಸೋಹಿ ಶತಾಯಿಷಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ 118ನೇ ಜನ್ಮ ದಿನಾಚರಣೆಯನ್ನು ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಸಾರ್ವಜನಿಕರು ರೋಟರಿ ಕ್ಲಬ್ ಸದಸ್ಯರು ಸಂಭ್ರಮ ಸಡಗರದೊಂದಿಗೆ ಆಚರಿಸಿದ್ದು ವಿಶೇಷವಾಗಿ ಜನಮನ ಸೆಳೆಯಿತು.

ಜಿ.ಎಸ್.ಬಿ. ಮತ್ತು ಬ್ರಾಹ್ಮಣ ಸಮಾಜ ಹಾಗೂ ರೋಟರಿ ಕ್ಲಬ್ ಸಾರ್ವಜನಿಕರು ಮತ್ತು ಶ್ರೀಗಳ ಅಭಿಮಾನಿ ಬಳಗದವರು ಇಲ್ಲಿನ ವಿನಾಯಕ ವೃತ್ತದಲ್ಲಿ ಲಿಂ|| ಡಾ.ಶಿವಕುಮಾರ ಮಹಾಸ್ವಾಮೀಜಿಗಳ ಭಾವಚಿತ್ರವನ್ನಿಟ್ಟು ಪೂಜೆಸಿ ಪುಷ್ಪವೃಷ್ಟಿ ಸುರಿಸುವ ಮೂಲಕ ನುಡಿನಮನ ಸಲ್ಲಿಸಿ, ಗೋ ಮಾತೆಗೆ ಬೆಲ್ಲ, ಅಕ್ಕಿ, ಬಾಳೆಹಣ್ಣು ನೀಡಿ ಶುಭಕೋರಿದರು.
ಜಿ.ಎಸ್.ಬಿ.ಸಮಾಜದ ಅಧ್ಯಕ್ಷ ಗಣೇಶಕಾಮತ್, ಪಿಎಸ್‌ಐ ಪ್ರವೀಣ್ ಎಸ್.ಪಿ., ಗಣೇಶ ಪ್ರಸಾದ್ ಹೋಟೆಲ್ ಪ್ರೋ.ಸುಧೀಂದ್ರ ಎಸ್.ಹೆಬ್ಬಾರ್, ಜೆ.ರಾಧಾಕೃಷ್ಣ, ಸಬಾಸ್ಟಿನ್ ಮಾಥ್ಯೂಸ್, ಹರೀಶ್‌ಪ್ರಭು, ರಾಮಚಂದ್ರ, ರವೀಂದ್ರ ಬಲ್ಲಾಳ್, ದೇವೇಂದ್ರಪ್ಪಗೌಡ ನೆವಟೂರು, ನಟರಾಜ್ ಶಿವಪುರ, ಪಿ. ಸುಧೀರ್, ಬಸಪ್ಪ ಬೆಳಂದೂರು, ಜೆ.ಜಿ.ಸದಾನಂದ ಜಂಬಳ್ಳಿ, ಮತ್ತಿತರರು ಹಾಜರಿದ್ದರು.