RIPPONPETE | ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಸಮರ್ಪಕ ನಿರ್ವಹಣೆ ಇಲ್ಲದೆ ಸ್ವಚ್ಛತೆ ಎಂಬುದು ಕೇವಲ ಮರೀಚಿಕೆಯಾಗಿದೆ.
ಹೌದು, ಈಚೆಗೆ ಡೆಂಘೀ ಶಂಕಿತ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ ಹಿನ್ನಲೆಯಲ್ಲಿ ನಾಗರಿಕರು ಮನೆಯಲ್ಲಿ ತೆರೆದ ಅಥವಾ ಕೊಳವೆ ಬಾವಿಗಳಿದ್ದರೂ ಸಹ ಮನೆ ನೀರನ್ನು ಕುಡಿಯಲು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಬದಲಿಗೆ ಉತ್ತಮ ಆರೋಗ್ಯಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕದ ಗಣಕೀಕೃತ ಹಣ ಪಾವತಿ ಕೇಂದ್ರದಲ್ಲಿ 5 ರೂ. ಪಾವತಿಸಿ, 20 ಲೀಟರ್ ನೀರು ಪಡೆದು ಬಳಕೆ ಮಾಡುವವರ ಸಂಖ್ಯೆಯೂ ಹೆಚ್ಚಳಗೊಂಡಿದೆ. ಆದರೆ ಈ ನೀರಿನ ಬಳಕೆದಾರರ ಮನೆಗೆ ಸೊಳ್ಳೆ ಉತ್ಪಾದನೆಯ ಲಾರ್ವಗಳು ಬೋನಸ್ ರೂಪದಲ್ಲಿ ಸೇರಿಕೊಂಡು ರೋಗ ಹರಡುತ್ತಿರುವುದು ನಾಗರಿಕರಲ್ಲಿಆತಂಕ ಹುಟ್ಟಿಸಿದೆ.
ಗ್ರಾಮಾಡಳಿತ, ಆರೋಗ್ಯ ಇಲಾಖೆ ಧ್ವನಿವರ್ಧಕ, ಕರ ಪತ್ರಗಳ ಮೂಲಕ ಊರೆಲ್ಲಾ ಸುತ್ತಿ ಡೆಂಘೀ ಸೊಳ್ಳೆಗಳ ಬಗ್ಗೆ ಅರಿವು ಮೂಡಿಸುತ್ತಿರುವ ಇಲಾಖಾ ನೌಕರರು ಸಮಸ್ಯೆಯ ಮೂಲಕ್ಕೆ ಕಾರಣವಾದ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣ ಸಂಸ್ಥೆಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.