RIPPONPETE ಮಳೆಯ ನಡುವೆಯೂ ವೈಭವದೊಂದಿಗೆ ಜರುಗಿದ ಕೆಂಚನಾಲ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ

Written by malnadtimes.com

Published on:

RIPPONPETE | ಇಂದು ಜರುಗಿದ ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬ ದೇವಿಯ ಮಳೆಗಾಲದ ಜಾತ್ರಾ ಮಹೋತ್ಸವವು ವೈಭವದೊಂದಿಗೆ ಸಂಪನ್ನಗೊಂಡಿತು.

WhatsApp Group Join Now
Telegram Group Join Now
Instagram Group Join Now

ವರ್ಷದಲ್ಲಿ ಎರಡು ಬಾರಿ ಅಂದರೆ ಮಳೆಗಾಲದಲ್ಲಿ ಮಂಗಳವಾರ ಬೇಸಿಗೆಯಲ್ಲಿ ಬುಧವಾರದಂದು ಶ್ರೀ ಮಾರಿಕಾಂಬಾ ದೇವಿ ಜಾತ್ರೆ ಆಚರಿಸುವುದು ಇಲ್ಲಿನ ವಿಶೇಷ.

ಇಂದು ಮುಂಜಾನೆ ಆರು ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದೇವಿಗೆ ವಿಶೇಷ ಅಲಂಕಾರ ಪೂಜೆ ಮತ್ತು ಮಹಾಮಂಗಳಾರತಿ ನಡೆದು ನಂತರ ಕೋಳಿ, ಕುರಿಗಳ ಹರಕೆ ಬಲಿ ಪೂಜೆ ಜರುಗುತ್ತದೆ.

ಜಿಲ್ಲೆ, ಹೊರ ಜಿಲ್ಲೆ, ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಗೆ ಹಣ್ಣು-ಕಾಯಿ ಸಮರ್ಪಿಸಿ ದರ್ಶನಾಶೀರ್ವಾದ ಪಡೆದರು.

ಬೇಡಿದ ವರ ಕರುಣಿಸುವ ಮಾರಿಕಾಂಬೆ :

ವಿವಾಹವಾಗದವರು ಮತ್ತು ಸಂತಾನ ಭಾಗ್ಯ ಹೀಗೆ ಹತ್ತು ಹಲವು ಬೇಡಿಕೆಯನ್ನು ದೇವಿಯಲ್ಲಿಟ್ಟು ಪ್ರಾರ್ಥಿಸಿದರೆ ಕೇವಲ ಅರು ತಿಂಗಳಲ್ಲಿ ಇಷ್ಟಾರ್ಥ ನೆರವೇರುವುದು ಎಂಬ ನಂಬಿಕೆಯಿಂದ ಭಕ್ತರ ಸಮೂಹ ವರ್ಷದಿಂದ ವರ್ಷಕ್ಕೆ ಹೆಚ್ಚು ಆಕರ್ಷಿತವಾಗಿದ್ದು ಜಾತ್ರಾ ಮಹೋತ್ಸವದಲ್ಲಿ ಹರಕೆ ಸಮರ್ಪಿಸಲು ಭಕ್ತರ ದಂಡು ತಂಡೋಪ-ತಂಡವಾಗಿ ಹರಿದು ಬರುತ್ತದೆ.

ಜಿಲ್ಲೆ, ಹೊರ ಜಿಲ್ಲೆಯಿಂದ ಸುಮಾರು 20 ಸಹಸ್ರಕ್ಕೂ ಅಧಿಕ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು.

ರಕ್ಷಣಾ ಇಲಾಖೆಯಿಂದ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದೇವಾಲಯ ಸಮಿತಿ ಇದ್ದರು.

Leave a Comment