RIPPONPETE ; ವಿಶ್ವದ ಪ್ರಮುಖ ವಿದ್ಯಾಸಂಸ್ಥೆಗಳ ಪಟ್ಟಿಯಲ್ಲಿ ಮೂವತ್ತೇರಡನೆ ಸ್ಥಾನ ಪಡೆದಿರುವ, ದೇಶದಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪೈಕಿ ಎರಡನೇ ಸ್ಥಾನ ಪಡೆದಿರುವ ರಾಜ್ಯದ ಏಕೈಕ ಭಾರತೀಯ ವ್ಯವಸ್ಥಾ ಪ್ರಬಂಧ ಸಂಸ್ಥೆಗೆ (Indian Institute of Management- IIM)
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಿಪ್ಪನ್‌ಪೇಟೆಯ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿಗಳು ಭೇಟಿ ನೀಡಿ ಶೈಕ್ಷಣಿಕ ಅಧ್ಯಯನವನ್ನು ಕೈಗೊಂಡರು.
ದೇಶದ ಅತ್ಯುನ್ನತ ಉನ್ನತ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿ, ಪ್ರತಿಷ್ಠಿತ ಸಂಸ್ಥೆಗಳಿಗೆ ನಡೆಸುವ ದಾಖಲಾತಿ ಪ್ರಕ್ರಿಯೆ, ದಾಖಲಾತಿ ಪೂರ್ವ ನಡೆಸುವ ಪರೀಕ್ಷೆಯ ವಿವರ, ತೇರ್ಗಡೆ ಹೊಂದಬೇಕಾದರೆ ನಡೆಸಬೇಕಾದ ತಯಾರಿ, ಐಐಎಂ ಬೆಂಗಳೂರಿನ ಸೆಮಿನಾರ್ ಹಾಲ್, ಗ್ರಂಥಾಲಯ, ಕ್ಲಾಸ್ ರೂಮ್ಸ್, ಪ್ಲೇಸ್ಮೆಂಟ್ ಸೆಲ್, ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಪ್ರೋಗ್ರಾಮ್ ತರಬೇತಿ ಕೇಂದ್ರ, ಹಾಸ್ಟೆಲ್, ಅಧ್ಯಾಪಕರ ಕೊಠಡಿಗಳಿಗೆ ಭೇಟಿ ಕೊಟ್ಟು ಸಂಬಂಧಪಟ್ಟ ಅಧಿಕಾರಿಗಳಿಂದ ವಿಶೇಷ ಮಾಹಿತಿಗಳನ್ನು ಪಡೆದುಕೊಂಡರು.
ಈ ವಿಶೇಷ ಅಧ್ಯಯನ ಪ್ರವಾಸದಲ್ಲಿ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥ ಡಾ.ರವೀಶ ಎನ್.ಎಸ್ ಉಪಸ್ಥಿತರಿದ್ದರು.
ಕಾಲೇಜಿನ ಅಂತಿಮ ಬಿಬಿಎ ವಿದ್ಯಾರ್ಥಿಗಳ ಈ ಸಾಧನೆಗೆ ಮತ್ತು ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ವಿರೂಪಾಕ್ಷಪ್ಪ ಹೆಚ್.ಎಸ್., ಕಾಲೇಜಿನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು. ಕಾಲೇಜಿನ ವಾಣಿಜ್ಯ ಕಲಾ ಹಾಗೂ ವಿಜ್ಞಾನ ವಿಭಾಗದ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.