ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷರಾಗಿ ರವೀಂದ್ರ ಕೆರೆಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಆಯ್ಕೆ

Written by malnadtimes.com

Published on:

RIPPONPETE ; 31 ವರ್ಷದ ಕಲಾ ಕೌಸ್ತುಭ ಕನ್ನಡ ಸಂಘಕ್ಕೆ ಹಾಗೂ 69ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಿತಿಗೆ ಆಧ್ಯಕ್ಷರಾಗಿ ರವೀಂದ್ರ ಕೆರೆಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಪಿ. ಸುಧೀರ್ ಆಯ್ಕೆಯಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಕಳೆದ ಸಾಲಿನ ಅಧ್ಯಕ್ಷರಾದ ಲೀಲಾ ಉಮಾಶಂಕರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಲೀಲಾ ಉಮಾಶಂಕರ್ (ಗೌರವಾಧ್ಯಕ್ಷರು), ರವೀಂದ್ರ ಕೆರೆಹಳ್ಳಿ (ಅಧ್ಯಕ್ಷ) ಮುರುಳಿಧರ ಕೆರೆಹಳ್ಳಿ, ರಾಮಚಂದ್ರ ಬಳೆಗಾರ್, ರಾಘವೇಂದ್ರ (ಆರ್ಟಿಸ್ಟ್), ಅಶ್ವಿನಿ ರವಿಶಂಕರ್, ಡಾ.ಶಿವಾಜಿರಾವ್, ಶೈಲಾ ಆರ್.ಪ್ರಭು, ಎಸ್.ದಾನಪ್ಪ (ಉಪಾಧ್ಯಕ್ಷರು), ಪಿ.ಸುಧೀರ್ (ಪ್ರಧಾನ ಕಾರ್ಯದರ್ಶಿ), ಪ್ರವೀಣ್ ಆಚಾರ್, ಲಕ್ಷ್ಮಿ ಶ್ರೀನಿವಾಸ್ ಆಚಾರ್, ಆಶಾ ಬಸವರಾಜ್, ಗೀತಾ ಅಣ್ಣಪ್ಪ, ಸೀತಮ್ಮ (ಕಾರ್ಯದರ್ಶಿ), ಸಂದೀಪ್‌ಶೆಟ್ಟಿ, ಶ್ರೀನಿವಾಸ್ (ಗ್ಯಾರೇಜ್), ರವಿ ಆಚಾರ್, ರಾಕೇಶ್, ಸೂರ್ಯಗೌಡ, ರಾಘವೇಂದ್ರ ಎಸ್.ಎಂ, ರಾಘವೇಂದ್ರ (ಸಹಕಾರ್ಯದರ್ಶಿ), ಗೀತಾ ಕರಿಬಸಪ್ಪ, ಪದ್ಮಕುಮಾರ್ (ಖಜಾಂಚಿ), ಗಣೇಶ ಕುಕ್ಕಳಲೇ, ರಾಘವೇಂದ್ರ ಚಿಪ್ಳಿ, ರೇಖಾರವಿ, ನವೀನ್ (ಸಂಘಟನಾ ಕಾರ್ಯದರ್ಶಿ), ಭೀಮರಾಜ್, ವರ್ಗೀಶ್ ಪಿ.ಜೆ. (ಕ್ರೀಡಾ ಕಾರ್ಯದರ್ಶಿ) ಕೆ.ಎಂ.ಬಸವರಾಜ್, ರಫಿ ರಿಪ್ಪನ್‌ಪೇಟೆ, ಸಬಾಸ್ಟೀನ್ ಮ್ಯಾಥ್ಯೂಸ್ (ಪ್ರಚಾರ ಸಮಿತಿ) ಹಾಗೂ ಟಿ.ಆರ್.ಕೃಷ್ಣಪ್ಪ, ಎಂ.ಸುರೇಶ್‌ಸಿಂಗ್, ಎಂ.ಬಿ.ಮಂಜುನಾಥ, ಆರ್.ರಾಘವೇಂದ್ರ, ಪದ್ಮಾ ಸುರೇಶ್, ಉಮಾ ಸುರೇಶ್,
ಎನ್.ಸತೀಶ್, ಪರಶುರಾಮ, ಸಿ.ಚಂದ್ರುಬಾಬು, ಅರುಣ್ ಕಾಳಮುಖಿ, ನರಸಿಂಹ, ಹಿರಿಯಣ್ಣ ಭಂಡಾರಿ, ಎನ್.ವರ್ತೇಶ್, ಪ್ರವೀಣ್, ಸುಧೀಂದ್ರ ಪೂಜಾರಿ, ಲಕ್ಷ್ಮಣ ಆಟೋ, ನಿರೂಪ್ ಕುಮಾರ್, ಇನ್ನಿತರ ಹಲವರು ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.


ನ. 28 ರಿಂದ 30 ರವರಗೆ ರಾಜ್ಯೋತ್ಸವ ಕಾರ್ಯಕ್ರಮದ ಸಿದ್ದತಾ ಸಭೆ :

RIPPONPETE ; ಇಲ್ಲಿನ ಕಲಾ ಕೌಸ್ತುಭ ಕನ್ನಡ ಸಂಘ 31ನೇ ವರ್ಷದ ವಾರ್ಷಿಕೋತ್ಸವ ಮತ್ತು 69ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬರುವ ನವೆಂಬರ್ 28 ರಿಂದ 30 ರವರೆಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ಆಚರಿಸುವ ಬಗ್ಗೆ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕುಂಚೆಬೈಲು ಗ್ರಾಮದ ಮಕ್ಕಿಮನೆ ನಿವಾಸಿ ಆಶಾ ರವರ ಚಿಕಿತ್ಸೆಗೆ ನೆರವಾಗಿ.

ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ ಮತ್ತು ಪ್ರಧಾನ ಕಾರ್ಯದರ್ಶಿ ಪಿ.ಸುಧೀರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನವೆಂಬರ್ 28 ರಂದು ಕನ್ನಡ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ ಹೆಸರಾಂತ ಕಲಾತಂಡಗಳ ಮೆರಗಿನನೊಂದಿಗೆ ಶಾಲಾ-ಕಾಲೇಜ್ ವಿದ್ಯಾರ್ಥಿಗಳೊಂದಿಗೆ ನಡೆಯಲಿದೆ. ನಂತರ ಕನ್ನಡ ಧ್ವಜಾರೋಹಣ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮ ಜರುಗಲಿದ್ದು ಸಂಜೆ 8.30ಕ್ಕೆ ಪಟ್ಲ ಸತೀಶ್ ನೇತೃತ್ವದಲ್ಲಿ ಕಾಲಮಿತಿ ಯಕ್ಷಗಾನ ಪ್ರದರ್ಶನ ಜರುಗಲಿದೆ.

ನ. 28 ರಂದು ಕೆಸರುಗದ್ದೆ ಓಟದ ಸ್ಪರ್ಧೆ, ಮಹಿಳೆಯರಿಗೆ ಹಗ್ಗ ಜಗ್ಗಾಟ, ರಾತ್ರಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ನ. 30 ರಂದು ಇತ್ತೀಚೆಗೆ ಅಕಾಲಿಕವಾಗಿ ನಿಧನ ಹೊಂದಿದ ಹಿರಿಯ ವಾಲಿಬಾಲ್ ಕ್ರೀಡಾಪಟು ಬಿಜು ಸ್ಮರಣಾರ್ಥ ಹೊಸನಗರ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳು ಮತ್ತು ರಾತ್ರಿ ಸಮಾರೋಪ ಸಮಾರಂಭ ನಂತರ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದವರಿಂದ ನೃತ್ಯ ವೈಭವ ಕಾರ್ಯಕ್ರಮ ಜರುಗಲಿದ್ದು ಸಕಲ ಕನ್ನಾಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕಾರಿಯಾಗುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಪದ್ಮಾ ಸುರೇಶ್, ರಾಮಚಂದ್ರ, ರಾಘವೇಂದ್ರ ಆರ್ಟಿಸ್ಟಿ, ಶೈಲಾ ಆರ್.ಪ್ರಭು, ಸೀತಾರಾಜು, ರೇಖಾ ರವಿ, ಪಿ.ಜೆ.ವರ್ಗೀಸ್, ಇನ್ನಿತರರು ಇದ್ದರು.

Leave a Comment