SHIVAMOGGA ; ಹಾಡಹಗಲೇ ರೌಡಿಶೀಟರ್ ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಹಳೇ ಬೊಮ್ಮನಕಟ್ಟೆಯಲ್ಲಿ ನಡೆದಿದೆ.
ಕಬಡ ರಾಜೇಶ್ ಶೆಟ್ಟಿ ಮರ್ಡರ್ ಆಗಿರುವ ರೌಡಿಶೀಟರ್. ಐದು ಜನರ ತಂಡದಿಂದ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.
ನವುಲೆ ಆನಂದನ ಸಹಚರ ಆಗಿದ್ದ ರಾಜೇಶ್ ಶೆಟ್ಟಿ ಬಸವನ ಗುಡಿಯ ಕ್ಯಾಸೆಟ್ ಅಂಗಡಿ ಮಾಲೀಕ ರಾಘುಶೆಟ್ಟಿ ಮರ್ಡರ್ ಕೇಸ್ ನಲ್ಲಿದ್ದ ಎನ್ನಲಾಗುತಿದ್ದು, ಇತ್ತೀಚೆಗಷ್ಟೇ ತನ್ನ ವಿರೋಧಿ ಬೊಮ್ಮನಕಟ್ಟೆಯ ಕರಿಯ ವಿನಯ್ ಮೇಲೆ ಹಲ್ಲೆ ಮಾಡಿ ಅವನ ಕೈ ಬೆರಳುಗಳನ್ನು ಕತ್ತರಿಸುವಂತೆ ಹಲ್ಲೆ ಮಾಡಿದ್ದನು ಎನ್ನಲಾಗುತ್ತಿದೆ.
ಹಳೆಯ ದ್ವೇಷದಿಂದಾಗಿ ಕರಿಯ ವಿನಯ್ ತಂಡ ರಾಜೇಶ್ ಶೆಟ್ಟಿ ಮೇಲೆ ಮುಗಿಬಿದ್ದು ಬರ್ಬರ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ವಿನೋಬನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.