ವಿಶೇಷಚೇತನರ ಆರೈಕೆದಾರರಿಗೆ ಮಾಸಿಕ 1000 ರೂ ಗಳ ಪ್ರೋತ್ಸಾಹ ಧನ ನೀಡಲು ಆದೇಶ

Written by admin

Published on:

ಕರ್ನಾಟಕ ಸರ್ಕಾರದಿಂದ ಅಂಗವಿಕಲರ ಆರೈಕೆದಾರರಿಗೆ ಮಾಸಿಕ 1,000 ರೂ ಗಳ ಪ್ರೋತ್ಸಾಹ ಧನ ನೀಡಿಕೆ ಆದೇಶವನ್ನು ಹೊರಡಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಅಂಗವಿಕಲತೆಯನ್ನು ಹೊಂದಿರುವಂತಹ ವಿಶೇಷಚೇತನ ಅಂಗವಿಕಲರ ಆರೈಕೆದಾರರಿಗೆ 1000 ರೂ ಗಳ ಪ್ರೋತ್ಸಾಹಧನ ನೀಡುತ್ತಾರೆನ್ನುವ ಸಂಪೂರ್ಣವಾದ ಮಾಹಿತಿಯನ್ನು ಓದಿ.

Read More:HOSANAGARA ಅಂಗನವಾಡಿ ಕಾರ‍್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆ | ಅಂಗನವಾಡಿ ಕಾರ‍್ಯಕರ್ತೆಯರ ಬೇಡಿಕೆ ಈಡೇರಿಕೆಗೆ ಸರ್ಕಾರ ಬದ್ಧ ; ಶಾಸಕ ಬೇಳೂರು

ರಾಜ್ಯದಲ್ಲಿ ಅಂಗವೈಕಲ್ಯದಿಂದ ಬಳಲುತ್ತಿರುವ ವಿಶೇಷಚೇತನ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು 1000 ರು ಪ್ರೋತ್ಸಾಹ ಧನ ನೀಡಲು ತಕ್ಷಣ ಫಲಾನುಭವಿಗಳ ಆಯ್ಕೆ ಮಾಡುವಂತೆ ಸರ್ಕಾರ ಆದೇಶವನ್ನು ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 2024 -25ನೇ ಸಾಲಿನ ಬಜೆಟ್‌ನಲ್ಲಿ ಬಾಲ್ಯದಲ್ಲಿ ಕಂಡುಬರುವಂತಹ ಚಲನೆಯ ಅಸ್ವಸ್ಥತೆ ಅಂತಂದ್ರೆ ಸೆರೆಬ್ರಲ್ ಪಾಲ್ಸಿ ಅನುವಂಶಿಕ ಸ್ನಾಯು ದೌರ್ಬಲ್ಯ ಮಲ್ಟಿಪಲ್ ಜನರಸ್ ಹಾಗೂ ಪಾರ್ಕಿನ್‌ಸನ್ ಕಾಯಿಲೆಗಳಿಂದ ಬಳಲುತ್ತಿರುವವರ ಆರೈಕೆದಾರರಿಗೆ ಪ್ರತಿ ತಿಂಗಳು ₹1000 ಪಿಂಚಣಿ ರೂಪದಲ್ಲಿ ಧನ ಸಹಾಯವನ್ನು ಘೋಷಣೆಯನ್ನು ಮಾಡಿದ್ದಾರೆ.

ವಿಶೇಷಚೇತನ

ಇದರ ಜೊತೆಗೆ ಹೊಸ ಯೋಜನೆಯಲ್ಲಿ ಬೆನ್ನುಹುರಿ ಅಪಘಾತ, ಅಂಗವಿಕಲರು, ಬುದ್ಧಿಮಾಂದ್ಯತೆಯ ಎರಡು ಬಗೆಯ ಅಂಗವಿಕಲತೆಯನ್ನು ಸೇರಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಬೆನ್ನುಹುರಿ, ಅಪಘಾತ, ಅಂಗವಿಕಲರು ಹಾಗೂ ಬುದ್ಧಿಮಾಂದ್ಯತೆ ಕುರಿತ ಪ್ರಸ್ತಾವನೆಗೆ ತಾತ್ಕಾಲಿಕ ತಡೆ ನೀಡಲಾಗಿರುತ್ತದೆ.

ಮಲ್ಟಿಪಲ್ ಜನರಸ್ ಹಾಗೂ ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವಂತಹ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು 1000 ರೂ ಗಳ ಪಿಂಚಣಿ ನೀಡಲಾಗುತ್ತದೆ. ಯಾರ್ಯಾರು ಈ ನಾಲ್ಕು ರೀತಿಯ ಅಂಗವಿಕಲತೆಯೊಂದಿಗೆ ವಿಶೇಷ ಚೇತನರ ಆರೈಕೆದಾರರು ಇದಕ್ಕೆ ಅರ್ಜಿಗಳನ್ನು ಹಾಕಬಹುದಾಗಿದೆ.

ಅರ್ಜಿಗಳಿಗೆ ಬೇಕಾಗಿರುವ ದಾಖಲೆಗಳು ಯಾವುವು ಅನ್ನೋದನ್ನ ನೋಡೋದಾದ್ರೆ, ಅಂಗವಿಕಲತೆಯ ಪ್ರಮಾಣ ಶೇ. 75 ಮತ್ತು ಅದಕ್ಕಿಂತ ಹೆಚ್ಚಾಗಿರಬೇಕು. ವಯಸ್ಸಿನ ಮಿತಿ ಇರುವುದಿಲ್ಲ. ಯಾವುದೇ ವಯಸ್ಸಿನವರು ಬೇಕಾದರೂ ಅರ್ಜಿ ಹಾಕಬಹುದು. ಹಾಗೇನೇ ಇದಕ್ಕೆ ಆದಾಯ ಮಿತಿ ಸಹ ಇರುವುದಿಲ್ಲ.

Read More:Ration Card | ಹೊಸ ರೇಷನ್ ಕಾರ್ಡ್ ಅಥವಾ ತಿದ್ದುಪಡಿಗೆ ಅರ್ಜಿ ಪ್ರಾರಂಭ !ಅರ್ಜಿ ಸಲ್ಲಿಸುವುದು ಹೇಗೆ ?

Leave a Comment