ನಿವೃತ್ತ ನೌಕರರಿಗೆ ಸಿಹಿ ಸುದ್ದಿ! ಈ ಯೋಜನೆಯಿಂದ ಸಿಗಲಿದೆ ಉಚಿತ ಚಿಕಿತ್ಸೆ !

Written by Koushik G K

Published on:

ಬೆಂಗಳೂರು:ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ ಇನ್ನು ಮುಂದೆ ಆರೋಗ್ಯ ಚಿಕಿತ್ಸೆ ಹೆಚ್ಚು ಸುಲಭವಾಗಲಿದೆ. ‘ಸಂಧ್ಯಾ ಕಿರಣ’ ಯೋಜನೆಯಡಿ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯ ಪರಿಷತ್ ಮಹಾಸಭೆಯಲ್ಲಿ ಅವರು ಮಾತನಾಡಿ, “ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕೆಲವು ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ. ನಿರಂತರ ಯಶಸ್ಸಿನ ಬೆನ್ನಲ್ಲೆ ಇದೀಗ ರಾಜ್ಯದ ಎಲ್ಲಾ ಭಾಗಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗುತ್ತದೆ,” ಎಂದರು.

‘ಸಂಧ್ಯಾ ಕಿರಣ’ ಅಂದರೇನು ?

  • ರಾಜ್ಯ ಸರ್ಕಾರದ ನಿವೃತ್ತ ನೌಕರರಿಗಾಗಿ ಜಾರಿಯಾದ ಆರೋಗ್ಯ ಯೋಜನೆ
  • ಪ್ರಸ್ತುತ ರೆಂಬರ್‌ಸ್‌ಮೆಂಟ್ (ಮರುಪಾವತಿ) ಆಧಾರಿತ ಚಿಕಿತ್ಸೆ ಲಭ್ಯ
  • ಇತ್ತೀಚೆಗೆ ನಗದು ರಹಿತ ಚಿಕಿತ್ಸೆ ಸೌಲಭ್ಯವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ

ಮುಂದಿನ ಹಂತ ಏನು?

  • ಈಗಿರುವ ಮರುಪಾವತಿ ವ್ಯವಸ್ಥೆಯನ್ನು ಕ್ರಮೇಣ ನಗದು ರಹಿತ ಪದ್ದತಿಗೆ ಪರಿವರ್ತನೆ
  • ಆಸ್ಪತ್ರೆಗಳು ನೇರವಾಗಿ ರಾಜ್ಯದಿಂದ ಪಾವತಿ ಪಡೆಯುವ ವ್ಯವಸ್ಥೆ
  • ಸೇವೆ ನೀಡುವ ಆಸ್ಪತ್ರೆಗಳಲ್ಲಿ ವ್ಯತ್ಯಾಸಗಳನ್ನು ವಿಶ್ಲೇಷಿಸಿ ನಿರ್ಧಾರ

ನಿವೃತ್ತ ನೌಕರರಿಗೆ ಇದು ಏನು ಲಾಭ?

  • ಚಿಕಿತ್ಸೆ ವೇಳೆ ನಗದು ಪಾವತಿ ಮಾಡಬೇಕಾಗಿಲ್ಲ
  • ವೈದ್ಯಕೀಯ ತೊಂದರೆಗಳಲ್ಲಿ ತಕ್ಷಣ ಸಹಾಯ
  • ಆರೋಗ್ಯ ಸುರಕ್ಷತೆಯ ಭರವಸೆ ಹೆಚ್ಚಳ

Read More:ಮಹಿಳೆಯರೇ ಕೇವಲ ₹100 ಹೂಡಿಕೆ ಮಾಡಿ, 2 ವರ್ಷಗಳಲ್ಲಿ ಲಕ್ಷಾಧಿಪತಿಯಾಗುವ ಅವಕಾಶ !

Leave a Comment