ಲಕ್ಕಿ ಡ್ರಾ ವಿಜೇತ ಮಹಿಳೆಗೆ ಸ್ಕೂಟಿ ಹಸ್ತಾಂತರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

Written by malnadtimes.com

Published on:

RIPPONPETE ; ಇತ್ತೀಚೆಗೆ ಕಲಾಕೌಸ್ತುಭ ಕನ್ನಡ ಸಂಘದವರು 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಅದೃಷ್ಟ ಲಾಟರಿ ಡ್ರಾದಲ್ಲಿ ಬಡಕುಟುಂಬದ ಮಹಿಳೆ ರಾಣಿ ರಾಮಚಂದ್ರ ಎಂಬುವರಿಗೆ ಲಾಟರಿ ಬಹುಮಾನ ಬಂದಿದ್ದು ವಿಜೇತರಿಗೆ ಶಾಸಕ ಹಾಗೂ ರಾಜ್ಯ ಆರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಬಹುಮಾನದ ದ್ವಿಚಕ್ರವಾಹದ ಕೀಯನ್ನು ನೀಡುವ ಮೂಲಕ ಹಸ್ತಾಂತರಿಸಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಸಿದ್ದಿವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಲಾಕೌಸ್ತುಭ ಸಂಘದ ಲಕ್ಕಿ ಡ್ರಾ ವಿಜೇತ ತೀರ್ಥಹಳ್ಳಿ ರಸ್ತೆಯ ರಾಣಿ ರಾಮಚಂದ್ರ ಕಡುಬಡ ಕುಟುಂಬದ ಮಹಿಳೆಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ, ಜಿ.ಪಂ.ಮಾಜಿ ಸದಸ್ಯ ಬಂಡಿ ರಾಮಚಂದ್ರ, ಡಿ.ಈ.ಮಧುಸೂಧನ್, ಆಸಿಫ್‌ಭಾಷಾ, ರಾಮಚಂದ್ರ ಬಳೆಗಾರ್, ಪದ್ಮ ಸುರೇಶ್, ಉಮಾ ಸುರೇಶ್, ಮುರುಳಿ ಕೆರೆಹಳ್ಳಿ, ರೇಖಾರವಿ, ಅಶ್ವಿನಿ ಸತೀಶ್, ಶೈಲಾ ಆರ್.ಪ್ರಭು, ನಾಗರತ್ನ ದೇವರಾಜ್, ಹಿರಿಯಣ್ಣ ಭಂಡಾರಿ, ದಿವಾಕರ್, ಉಲ್ಲಾಸ್, ಪರಮೇಶ ಇನ್ನಿತರ ಹಲವರು ಹಾಜರಿದ್ದರು.


ವಾಹನ ಮಾರಾಟ ಅಭಿಯಾನ

RIPPONPETE ; ಮಹೆಂತಾ ಮೋಟಾರ‍್ಸ್ ಮಹೀಂದ್ರಾ ಶೋರೂಂ ಶಿವಮೊಗ್ಗದವರು ಮಹೀಂದ್ರ ಕಂಪನಿಯ ಜೀಪ್ ಮಾರಾಟ ಪ್ರದರ್ಶನದೊಂದಿಗೆ ರೈತರಲ್ಲಿ ಅಭಿಯಾನ ನಡೆಸಿದರು.

ಕಂಪನಿಯ ಸೇಲ್ಸ್ ಮ್ಯಾನೇಜರ್ ಈ. ನಿರಂಜನ್, ತಬ್ರೇಜ್, ದೇವಾಜಕುರುವರಿ ಇನ್ನಿತರರು ಹಾಜರಿದ್ದರು.

Leave a Comment