SHIVAMOGGA | ಜಿಲ್ಲಾದ್ಯಂತ ಕಳೆದ ಐದಾರು ದಿನಗಳಿಂದ ಧಾರಾಕಾರವಾಗಿ ವರುಣ ಅಬ್ಬರಿಸುತ್ತಿದ್ದು ಅದರಲ್ಲೂ ಹೊಸನಗರ, ತೀರ್ಥಹಳ್ಳಿ, ಸಾಗರ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಹೊಸನಗರ ತಾಲೂಕಿನ ಬಿದನೂರುನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲಾಗಿದೆ.
ರಿಪ್ಪನ್‌ಪೇಟೆಯಲ್ಲಿ ಡೆಂಘೀ ರಣಕೇಕೆ, ಇವತ್ತು ಮತ್ತೊಂದು ಬಲಿ !
ಇನ್ನೂ ಗುರುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟು ಮಳೆಯಾಗಿದೆ ಎಂದು ಇಲ್ಲಿ ಕೊಡಲಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ? (M.M.)
- ಬಿದನೂರುನಗರ (ಹೊಸನಗರ) : 250
- ಚಕ್ರಾನಗರ (ಹೊಸನಗರ) : 210
- ಸೊನಲೆ (ಹೊಸನಗರ) : 195
- ನೊಣಬೂರು (ತೀರ್ಥಹಳ್ಳಿ) : 172
- ಮಾಸ್ತಿಕಟ್ಟೆ (ಹೊಸನಗರ) : 165
- ಹುಲಿಕಲ್ (ಹೊಸನಗರ) : 158
- ಹುಂಚ (ಹೊಸನಗರ) : 156
- ಮೇಲಿನಬೆಸಿಗೆ (ಹೊಸನಗರ) : 132
- ಹೊಸೂರು-ಸಂಪೆಕಟ್ಟೆ (ಹೊಸನಗರ) : 130
- ಸುಳಗೋಡು (ಹೊಸನಗರ) : 126.5
- ಹಾದಿಗಲ್ಲು (ತೀರ್ಥಹಳ್ಳಿ) : 124.5
- ಯಡೂರು (ಹೊಸನಗರ) : 124
- ಮಾರುತಿಪುರ (ಹೊಸನಗರ) : 123
- ಕಂಡಿಕಾ (ಸಾಗರ) : 118.5
- ಕಲ್ಮನೆ (ಸಾಗರ) : 116
- ಕಾರ್ಗಲ್ (ಸಾಗರ) : 116
- ಬೆನ್ನೂರು (ಸೊರಬ) : 115.5
- ಮಾಣಿ (ಹೊಸನಗರ) : 110
- ಸಾವೇಹಕ್ಲು (ಹೊಸನಗರ) : 106
- ಹೊಸನಗರ (ಹೊಸನಗರ) : 92.4
- ಅರಸಾಳು (ಹೊಸನಗರ) : 75
ಲಿಂಗನಮಕ್ಕಿ ಜಲಾಶಯ :
1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಗುರುವಾರ ಬೆಳಿಗ್ಗೆ 8:00 ಗಂಟೆಗೆ 1787.80 ಅಡಿ ತಲುಪಿದ್ದು ಜಲಾಶಯಕ್ಕೆ 69226 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೆ ಅವಧಿಗೆ 1757.30 ಅಡಿ ನೀರು ಸಂಗ್ರಹವಾಗಿದ್ದು, ಕಳೆದ ಬಾರಿಗಿಂತ ಈ ಬಾರಿ 32 ಅಡಿ ಹೆಚ್ಚಿನ ನೀರು ಸಂಗ್ರಹವಾಗಿದೆ.