SHIVAMOGGA | DCC ಬ್ಯಾಂಕ್ ಚುನಾವಣೆ, ಗೆದ್ದು ಬೀಗಿದ ಕಾಂಗ್ರೆಸ್ ಅಭ್ಯರ್ಥಿಗಳು !

Written by malnadtimes.com

Published on:

SHIVAMOGGA | ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್‌ನ ನಿರ್ದೇಶಕರ ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದ್ದು ಈ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಇದರಿಂದ ಬಿಜೆಪಿ ಪಕ್ಷ ಭಾರೀ ಮುಖಭಂಗ ಅನುಭವಿಸಿದೆ.

WhatsApp Group Join Now
Telegram Group Join Now
Instagram Group Join Now

13 ಸ್ಥಾನಗಳಲ್ಲಿ ಓರ್ವ ಬಿಜೆಪಿ ಅಭ್ಯರ್ಥಿ ಮಾತ್ರ ಜಯ ಗಳಿಸಿದ್ದು ಸಾಗರ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ, ಸಹಕಾರಿ ಧುರೀಣ ಆರ್.ಎಂ ಮಂಜುನಾಥ್ ಗೌಡ ಬಣ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ಕುರಿತಂತೆ ಚುನಾವಣಾಧಿಕಾರಿ ಸತ್ಯನಾರಾಯಣ್ ಮಾಹಿತಿ ನೀಡಿದ್ದು, ಬೇಳೂರು ಗೋಪಾಲಕೃಷ್ಣ, ಸಿ.ಹನುಮಂತಪ್ಪ, ಎಸ್ ಪಿ ಚಂದ್ರಶೇಖರ್ ಗೌಡ, ಎಸ್.ಕೆ ಮರಿಯಪ್ಪ, ಜಿಎನ್ ಸುಧೀರ, ಕೆ.ಪಿ ರುದ್ರಗೌಡ, ಟಿ.ಶಿವಶಂಕರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ 13 ಮಂದಿ ಗೆಲುವು ಸಾಧಿಸಿರುವುದಾಗಿ ತಿಳಿಸಿದ್ದಾರೆ.

ಕ್ಷೇತ್ರವಾರು ಗೆದ್ದ ಅಭ್ಯರ್ಥಿಗಳು ಹಾಗೂ ಪಡೆದ ಮತ :

ಕ್ಷೇತ್ರ – 1

ಶಿವಮೊಗ್ಗ ತಾಲ್ಲೂಕು :
ಕೆ.ಪಿ.ದುಗ್ಗಪ್ಪ ಗೌಡ (13)
ಶಿವನಂಜಪ್ಪ (12)

ಭದ್ರಾವತಿ ತಾಲ್ಲೂಕು:
ಹೆಚ್.ಎಲ್.ಷಡಾಕ್ಷರಿ (7)
ಸಿ.ಹನುಮಂತಪ್ಪ( 9)

ತೀರ್ಥಹಳ್ಳಿ ತಾಲ್ಲೂಕು :
ಬಸವಾನಿ ವಿಜಯದೇವ್ (14)
ಕೆ.ಎಸ್.ಶಿವಕುಮಾರ್ (9)

ಸಾಗರ ತಾಲ್ಲೂಕು :
ಗೋಪಾಲಕೃಷ್ಣ ಬೇಳೂರು (15)
ರತ್ನಾಕರ ಹುನಗೋಡು (14)

ಶಿಕಾರಿಪುರ ತಾಲ್ಲೂಕು :
ಅಗಡಿ ಅಶೋಕ್ (11)
ಎಸ್.ಪಿ. ಚಂದ್ರಶೇಖರ ಗೌಡ (26)

ಸೊರಬ ತಾಲ್ಲೂಕು :
ಕೆ.ಪಿ.ರುದ್ರಗೌಡ (14)
ಶಿವಮೂರ್ತಿ ಗೌಡ (10)

ಹೊಸನಗರ ತಾಲ್ಲೂಕು :
ಎಂ.ಎಂ.ಪರಮೇಶ್ (ಅವಿರೋಧ ಆಯ್ಕೆ)

ಕ್ಷೇತ್ರ – 2

ಶಿವಮೊಗ್ಗ ಉಪವಿಭಾಗ :
ಆರ್.ಎಂ.ಮಂಜುನಾಥ ಗೌಡ (15)
ವಿರೂಪಾಕ್ಷಪ್ಪ(3)
ತಿರಸ್ಕೃತ-1

ಸಾಗರ ಉಪವಿಭಾಗ :
ಬಿ.ಡಿ.ಭೂಕಾಂತ್ (21)
ಜಿ.ಎನ್.ಸುಧೀರ (23)

ಕ್ಷೇತ್ರ – 3

ಶಿವಮೊಗ್ಗ ಉಪವಿಭಾಗ :
ಎಸ್.ಪಿ.ದಿನೇಶ (16)
ಎಸ್.ಕೆ.ಮರಿಯಪ್ಪ (39)

ಸಾಗರ ಉಪವಿಭಾಗ :
ಬಸವರಾಜ್ ಪಿ.ಎಲ್. (32)
ರವೀಂದ್ರ ಹೆಚ್.ಎಸ್. (21)
ತಿರಸ್ಕೃತ (3)

ಕ್ಷೇತ್ರ – 4

ಶಿವಮೊಗ್ಗ ಉಪವಿಭಾಗ :
ಡಿ.ಆನಂದ (16)
ಕೆ.ಎಲ್.ಜಗದೀಶ್ವರ್ (45)
ಮಹಾಲಿಂಗಯ್ಯ ಶಾಸ್ತ್ರೀ (47)
ಜೆ.ಪಿ.ಯೋಗೇಶ್ (14)

ಸಾಗರ ಉಪವಿಭಾಗ :
ಟಿ.ಶಿವಶಂಕರಪ್ಪ (75)
ಎಂ.ಡಿ.ಹರೀಶ್ (61)
ತಿರಸ್ಕೃತ (1)

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಡೆದಂತ ಇಂದಿನ ಚುನಾವಣೆಯ ಮತದಾನದಲ್ಲಿ 621 ಮಂದಿ ಭಾಗಿಯಾಗಿ ತಮ್ಮ ಮತವನ್ನು ಚಲಾಯಿಸಿದ್ದರು ಇವುಗಳಲ್ಲಿ 5 ಮತಗಳು ತಿರಸ್ಕೃತಗೊಂಡಿವೆ.

ಭಾಗ್ಯಲಕ್ಷ್ಮಿ ಬಾಂಡ್ ಇದ್ದವರ ಖಾತೆಗಳಿಗೆ ಸರ್ಕಾರದಿಂದ ಬಿಡುಗಡೆಯಾಗಲಿದೆ 1 ಲಕ್ಷ ಹಣ !

Leave a Comment