ಮಲೆನಾಡಿಗೆ ಮತ್ತೊಂದು ಗರಿ | ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಫೌಜಿಯ ಸರವತ್

0 79

ಹೊಸನಗರ : ಕರ್ನಾಟಕ ಶಿಕ್ಷಣ ಇಲಾಖೆ 2023-24ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಶನಿವಾರ ಪ್ರಕಟಿಸಿದೆ.

ಓರ್ವ ವಿಶೇಷ ಶಿಕ್ಷಕ ಸೇರಿ 11 ಮಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಈ ಭಾರಿ ನೀಡಲಾಗುತ್ತಿದೆ. ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕೃತರ ಪಟ್ಟಿಯಲ್ಲಿನ ಮಹಿಳಾ ಶಿಕ್ಷಕರುಗಳಿಗೆ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಇವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಹೊಸನಗರ ತಾಲೂಕಿನ ಅರಸಾಳು ಕ್ಲಸ್ಟರ್ ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕಿ ಫೌಜಿಯ ಸರವತ್ ಈ ಬಾರಿಯ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿ ಮಲೆನಾಡಿನ ಹಿರಿಮೆಗೆ ಮತ್ತೊಂದು ಗರಿ ಮೂಡಿಸಿದ್ದಾರೆ.

ಪ್ಯಾರೆಜಾನ್ ಹಾಗೂ ಕೌಸರ್ ಫಾತಿಮಾ ದಂಪತಿಗಳ ಪುತ್ರಿ ಫೌಜಿಯ, 2007 ರಿಂದ 2016 ರವರೆಗೂ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಮೇಲುಕೊಪ್ಪದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ, 2016 ರಿಂದ 2022 ರ ವರೆಗೂ ತೀರ್ಥಹಳ್ಳಿ ತಾಲೂಕು ಕಲ್ಲುಗುಡ್ಡ ಪ್ರಾಥಮಿಕ ಶಾಲೆಯಲ್ಲಿ ಹಾಗೂ 2022 ರಿಂದ ಪ್ರಸ್ತುತ ಹೊಸನಗರ ತಾಲೂಕು ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಕನ್ನಡ ಶಿಕ್ಷಕಿಯಾಗಿ ತಮ್ಮ ಯಶೋಗಾಥೆಯನ್ನು ಮುಂದುವರಿಸುತ್ತಿದ್ದಾರೆ‌.

2020ರಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, 2021 – 22ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, 2023 ರಲ್ಲಿ ಜಿಲ್ಲಾ ಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ತಮ್ಮ ಬುಟ್ಟಿಗೆ ಹಾಕಿಕೊಂಡು ಜಿಲ್ಲೆಯ, ರಾಜ್ಯ, ರಾಷ್ಟ್ರ ಮಟ್ಟದ ಇಲಾಖೆಯ ಕ್ರೀಡಾಕೂಟ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರಗಳ ಗೊಂಚಲನ್ನೆ ಪಡೆದಿದ್ದಾರೆ.

ಸಾಹಿತ್ಯ ರಚನೆಯಲ್ಲೇ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿದ ಫೌಜಿಯ ಶೈಕ್ಷಣಿಕವಾಗಿ ಇನ್ನು ಹೆಚ್ಚಿನ ಪಾಂಡಿತ್ಯ ಗಳಿಸುವ ಮಹತ್ವಕಾಂಕ್ಷೆಯ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!