ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ – ಬೇಳೂರು

0 322

ರಿಪ್ಪನ್‌ಪೇಟೆ: ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿಗೆ ನಮ್ಮ ಮಕ್ಕಳನ್ನು ಪೋಷಕರು ದಾಖಲಿಸುವುದರ ಬಗ್ಗೆ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ತೀವ್ರ ಅತಂಕ ವ್ಯಕ್ತಪಡಿಸಿದರು.

ಗವಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯವರು ಆಯೋಜಿಸಲಾದ ಶಾಲಾ ಸಾಂಸ್ಕೃತಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿನ ಶಿಕ್ಷಕರು ಮೇರಿಟ್ ಆಧಾರದಲ್ಲಿ ನೇಮಕಾತಿಯಾಗಿ ಬರುವುದರೊಂದಿಗೆ ಅವರಿಗೆ ಕಾಲಕಾಲಕ್ಕೆ ಇಲಾಖೆಯಡಿ ತರಬೇತಿಯನ್ನು ಸಹ ನೀಡಲಾಗುತ್ತಿದ್ದು ಮಕ್ಕಳಿಗೆ ಸಹ ಅವರ ತಾವು ತರಬೇತಿಯಲ್ಲಿ ಪಡೆಯಲಾದ ಸರಳ ಶಿಕ್ಷಣ ಪದ್ದತಿಯನ್ನು ಮಕ್ಕಳಿಗೆ ಭೋದಿಸುತ್ತಾರೆ ಅಲ್ಲದೆ ಸರ್ಕಾರದ ಅಗತ್ಯ ಸೌಲಭ್ಯಗಳಾದ ಸಮವಸ್ತ್ರ ಶೂ, ಉಚಿತ ಶಿಕ್ಷಣ, ಬಿಸಿಯೂಟ, ಮೊಟ್ಟೆ, ಹಾಲು ಹೀಗಿ ಹತ್ತು ಹಲವು ಯೋಜನೆಗಳನ್ನು ನೀಡಲಾಗುತ್ತಿದ್ದರೂ ಕೂಡಾ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದುಬಾರಿ ಹಣ ತೆತ್ತು ದಾಖಲಿಸುತ್ತಿರುವುದು ಬೇಸರ ವ್ಯಕ್ತಪಡಿಸಿ, ಖಾಸಗಿ ವ್ಯಾಮೂಹದಿಂದಾಗಿ ನಮ್ಮ ಪೋಷಕರು ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆಯಿಂದ ಕಾಣುತ್ತಿದ್ದಾರೆ. ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲವಾಗಿರಬಹುದು ಆದರೆ ಶಿಕ್ಷಕರುಗಳು ಮಾತ್ರ ಮೇರಿಟ್ ಆಧಾರದಲ್ಲಿ ನೇಮಕಾತಿ ಆಗಿ ನಿಯೋಜಿತರಾಗಿದ್ದಾರೆ ಅವರ ಅನುಭವದಂತೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಇನ್ನಾದರೂ ಪೋಷಕವರ್ಗ ಮುಂದಾಗಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಗ್ರಾಮ ಪಂಚಾಯ್ತಿ ಸದಸ್ಯರಾದ ವನಮಾಲ, ಮಹಾಲಕ್ಷ್ಮಿ, ನಿರೂಪಮ, ದಾನಮ್ಮ, ಮಂಜುಳಾ ಕೇತಾರ್ಜಿರಾವ್, ಹೆಚ್.ಎಸ್.ಗಣಪತಿ, ಜಿ.ಡಿ.ಮಲ್ಲಿಕಾರ್ಜುನ, ಆಶೀಫ್‌ಭಾಷಾ, ವೇದಾವತಿ, ಪ್ರಕಾಶಪಾಲೇಕರ್, ಸಾರಾಭಿ ಇನ್ನಿತರರು ಹಾಜರಿದ್ದರು.

ಗಾಯಕಿ ಸುಧಾ ನೇರಲುಮನೆ ಪ್ರಾರ್ಥಿಸಿದರು. ಸಹ ಶಿಕ್ಷಕ ಮಹೇಂದ್ರ ಸ್ವಾಗತಿಸಿ, ಶಿರೋಮಣಿ ವರದಿ ವಾಚಿಸಿದರು.

Leave A Reply

Your email address will not be published.

error: Content is protected !!