ಹೊಸನಗರ ಗೋ ರಕ್ಷಣಾ ತಂಡದ ಯುವಕರಿಂದ ಬೀದಿ ಹಸುಗಳ ರಕ್ಷಣೆ

0 63


ಹೊಸನಗರ: ಪಟ್ಟಣದಲ್ಲಿ ಬೀದಿ ಹಸುಗಳು ಹಾಗೂ ಎತ್ತುಗಳ ಸಂಖ್ಯೆ ಹೆಚ್ಚಾಗಿದ್ದು ರಸ್ತೆಯಲ್ಲಿ ರಸ್ತೆಯ ಅಕ್ಕ-ಪಕ್ಕ ರಾತ್ರಿ ವೇಳೆಯಲ್ಲಿ ಮಲಗಿರುತ್ತಿದ್ದು ವಾಹನ ಸವಾರರಿಗೆ ರಾತ್ರಿ ವೇಳೆಯಲ್ಲಿ ಗೋವುಗಳು ಕಣ್ಣಿಗೆ ಕಾಣದೆ ಡಿಕ್ಕಿ ಹೊಡೆದುಕೊಂಡು ಹೋಗಿರುತ್ತಾರೆ. ವಾಹನ ಡಿಕ್ಕಿಯಾದ ಹಸುಗಳ ಅದರ ಜೊತೆಗೆ ಬೀದಿ ಹಸುಗಳಿಗೆ ಯಾವುದೇ ಕಾಯಿಲೆ ಬಂದರೆ ಆರೈಕೆ ಮಾಡುವ ಜವಾಬ್ದಾರಿಯನ್ನು ಹೊಸನಗರದ ಗೋ ರಕ್ಷಣಾ ತಂಡ ನಡೆಸುತ್ತಿದೆ.

20 ಯುವಕರ ತಂಡ ರಚನೆ:

ಹೊಸನಗರ ಪಟ್ಟಣ ಅಥವಾ ಸುತ್ತ-ಮುತ್ತ ಯಾವುದೇ ಮುಖ ಪ್ರಾಣಿಗಳಿಗೆ ಆರೋಗ್ಯದಲ್ಲಿ ತೊಂದರೆಯಾದರೆ ಅಥವಾ ಗೋವುಗಳ ಕಾಲುಗಳು ಮುರಿದುಕೊಂಡರೆ ರಾಘವೇಂದ್ರರವರ ನೇತೃತ್ವದ ಇಪ್ಪತ್ತು ಯುವಕರ ತಂಡ ಎಲ್ಲರೂ ಒಟ್ಟಾಗಿ ಎಷ್ಟೇ ಕೆಲಸ ಕಾರ್ಯಗಳು ಇದ್ದರೂ ಅದನ್ನು ಬಿಟ್ಟು ಮೂಖ ಪ್ರಾಣಿಗಳ ರಕ್ಷಣೆಗೆ ಆಗಮಿಸಿ ಹೊಸನಗರ ಪಶು ವೈದ್ಯರನ್ನು ಕರೆಸಿ ಬೇಕಾದಂತಹ ಔಷಧಿಗಳನ್ನು ತಮ್ಮ ಸ್ವಂತ ಹಣದಿಂದ ತರಿಸಿಕೊಡುವ ಸ್ವಭಾವ ಇವರದ್ದಾಗಿರುತ್ತದೆ. ನಂತರ ಅನಾರೋಗ್ಯ ಪೀಡಿತ ಅಥವಾ ಕಾಲು ಮುರಿದುಕೊಂಡ ಹಸುವನ್ನು ಮೀನು ಇಲಾಖೆಯ ಪಕ್ಕದಲ್ಲಿ ಸಣ್ಣ ಶೆಡ್‌ಗಳನ್ನು ಕಟ್ಟಿಕೊಂಡಿದ್ದು ಅದರಲ್ಲಿ ಇಟ್ಟು ಹುಲ್ಲು ಆಹಾರವನ್ನು ಇವರ ಸ್ವಂತ ಹಣದಲ್ಲಿ ಸಾಕಾಣಿಕೆ ಮಾಡಿ ಗುಣಪಡಿಸುವ ಹೊಣೆಯನ್ನು ಈ ಯುವಕರ ತಂಡ ಮಾಡುತ್ತದೆ.

ಚಿತ್ರ: ಹೊಸನಗರದಲ್ಲಿ ಗೋ ರಕ್ಷಕ ರಾಘವೇಂದ್ರರವರ ನೇತೃತ್ವದ ತಂಡ ಬಿಡಾಡಿ ಎತ್ತು ಕಣಿಲೆ ತಿಂದು ಮೂರ್ಛೆ ಹೋಗಿ ಬಿದ್ದಿದ್ದೂ ಅದನ್ನು ಔಷಧಿ ನೀಡಿ ಬದುಕುಳಿಸಿರುವುದು.


ಇವರಿಗೆ ದಾನಿಗಳ ಅವಶ್ಯಕತೆಯಿದೆ:

ಇವರು ಸುಮಾರು 5 ವರ್ಷಗಳಿಂದ ಗೋರಕ್ಷಣೆ ಕಾರ್ಯ ಮಾಡುತ್ತಿದ್ದು ಇವರಿಗೆ ಗೋವುಗಳಿಗೆ ಮೆಡಿಕಲ್ ಅಂಗಡಿಯಿಂದ ಔಷಧಿ ಕೊಡಿಸಲು ಹಾಗೂ ಗೋವುಗಳಿಗೆ ಪ್ರತಿ ದಿನ ಬೇಕಾಗುವ ಆಹಾರದ ವ್ಯವಸ್ಥೆ ಮಾಡುವವರು ಹುಲ್ಲುಗಳನ್ನು ದಾನವಾಗಿ ನೀಡುವವರ ಅವಶ್ಯಕತೆಯಿದ್ದು ಗೋರಕ್ಷಕರು ಅಥವಾ ದಾನಿಗಳು ಸಹಾಯ ಹಸ್ತ ಅಥವಾ ಗೋವುಗಳ ಆಹಾರ ನೀಡುವ ದಾನಿಗಳ ಅವಶ್ಯಕತೆಯಿದ್ದರೂ ಅವರು ಇಲ್ಲಿಯವರೆಗೆ ಯಾರಿಂದಲೂ ಹಣವಾಗಲೀ ಔಷಧಿ ಕೊಡಿಸಿ ಎಂದು ಯಾರ ಬಳಿಯು ಕೈ ಚಾಚಿಲ್ಲ. ದಾನಿಗಳು ಸಿಗುತ್ತಾರೋ ಇಲ್ಲವೋ ಆದರೆ ಇವರು ಮಾಡುವ ಪುಣ್ಯದ ಕೆಲಸಕ್ಕೆ ಖಂಡಿತವಾಗಿಯೂ ಪ್ರತಿಫಲವಂತು ಸಿಕ್ಕೆ ಸಿಗುತ್ತದೆ ಎಂಬ ನಂಬಿಕೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಗೋ ರಕ್ಷಣೆ ಮೂಖ ಪ್ರಾಣಿಗಳ ರಕ್ಷಣೆ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದ್ದು ರಕ್ಷಣೆ ಮಾಡುವವರಿಗೆ ನಾವೆಲ್ಲರೂ ಬೆಂಬಲವಾಗಿ ನಿಲ್ಲೋಣ.

Leave A Reply

Your email address will not be published.

error: Content is protected !!