ಫೆ. 12ಕ್ಕೆ ನಗರ ನೂತನ ಕಾಲೇಜು ಕಟ್ಟಡ ಉದ್ಘಾಟನೆ ಮತ್ತು ವಜ್ರ ಮಹೋತ್ಸವ ಕಾರ್ಯಕ್ರಮ


ಹೊಸನಗರ: ತಾಲ್ಲೂಕಿನ ನಗರ ಎಜುಕೇಷನ್ ಸೊಸೈಟಿಯ 8ರಿಂದ 12ನೇ ತರಗತಿ ಹೈಸ್ಕೂಲ್ ಹಾಗೂ ಪಿಯುಸಿ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಹಾಗೂ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಫೆ. 12 ರ ಭಾನುವಾರ ಬೆಳಿಗ್ಗೆಯಿಂದ ನಡೆಯಲಿದೆ ಎಂದು ನಗರ ಎಜುಕೇಷನ್ ಸೊಸೈಟಿ ಅಧ್ಯಕ್ಷರಾದ ಕೆ.ವಿ. ಕೃಷ್ಣಮೂರ್ತಿಯವರು ಹೇಳಿದರು.


ಅವರು ನಗರದ ನೂತನ ಕಟ್ಟಡದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,‌ 1962ರಲ್ಲಿ ಹೈಸ್ಕೂಲ್ ತೆರೆಯಲಾಗಿದ್ದು ಸುಮಾರು ಅರವತ್ತು ವರ್ಷಗಳಲ್ಲಿ ಇಲ್ಲಿ ಓದಿರುವ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ನೌಕರಿಯಲ್ಲಿರುವ ಜೊತೆಗೆ ಸಾಕಷ್ಟು ಹೆಸರು ಮಾಡಿದ್ದಾರೆ ಹಿಂದೆ ಶಾಲೆ ಹಳೇಯ ಕಟ್ಟಡದಲ್ಲಿದ್ದು ಸರ್ಕಾರದ ಅನುದಾನ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಸಾಕಷ್ಟು ದಾನಿಗಳಿಂದ ಧನ ಸಹಾಯ ಪಡೆದು ನೂತನ ಸುಸರ್ಜಿತ ಕಟ್ಟಡವನ್ನು ನಿರ್ಮಿಸಲಾಗಿದ್ದು ಈ ನೂತನ ಕಟ್ಟಡದ ಉದ್ಘಾಟನೆ ಹಾಗೂ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಫೆ. 12 ರ ಬೆಳಿಗ್ಗೆ ನಡೆಯಲಿದೆ ಎಂದರು.


ಇತಿಹಾಸ ಪ್ರಸಿದ್ದವಾದ ಬಿದನೂರು ನಗರವು ಹೊನ್ನೆಕಂಬಳಿ ಅರಸರ ಆಳ್ವಿಕೆಯಿಂದ ಕೆಳದಿ ನಾಯಕರ ಕಾಲದಲ್ಲಿ ಉಚ್ಛಾಯ ಸ್ಥಿತಿಯನ್ನು ಕಂಡ ಸಂಸ್ಥಾನ ನಿತ್ಯ ಹರಿದ್ವರ್ಣದ ಕಾನನದಿಂದಾವೃತವಾದ ನಗರವು ಕೋಟೆ, ಗುಡ್ಡ ಬೆಟ್ಟ ನೀರಿನ ನೈಸರ್ಗಿಕ ರಕ್ಷಣೆಯನ್ನು ಹೊಂದಿದ್ದು ಲಿಂಗನಮಕ್ಕಿ ವಿದ್ಯುದಾಗರಕ್ಕೆ ಜಲಾನಯದ ಪ್ರದೇಶವೂ ಆಗಿದ್ದು ದೀಪದ ಬುಡ ಕತ್ತಲು ಎಂಬಂತೆ ತನ್ನ ಸಂಸ್ಕೃತಿಯ ವೈಭವದ ಕುರುಹುಗಳನ್ನು ಬೆಳಕಿಗಾಗಿ ತ್ಯಾಗ ಮಾಡಿ ಮುಳುಗಡೆಯ ಪ್ರದೇಶವಾಗಿ ಅವಶೇಷಗಳ ಆಗರವಾಗಿ ಆಸಕ್ತರನ್ನು ಮಾತ್ರ ಇಂದಿಗೂ ಆಕರ್ಷಿಸುತ್ತಿದ್ದು 1963ರಲ್ಲಿ ಬೆಳಕಿಗಾಗಿ ಭೂಮಿಯನ್ನು ಬಿಟ್ಟುಕೊಟ್ಟಿದ್ದರೂ ನಗರ ವಾಸಿಗಳಲ್ಲಿ ಜ್ಞಾನಜ್ಯೋತಿಯ ಹಂಬಲ ತೀವ್ರವಾಗಿದ್ದು ಆಗಿನ ಕಾಲದಲ್ಲಿ ಪ್ರೌಢ ಶಿಕ್ಷಣ ಗಗನಕುಸುಮವಾಗಿತ್ತು ಈ ಕೊರತೆಯನ್ನು ಹೋಗಲಾಡಿಸುವ ಉದ್ದೇಶದಿಂದ ಹಿರಿಯರ ತೀವ್ರತರ ಅಪೇಕ್ಷೆಯ ಫಲವಾಗಿ ದಿ.ನಗರ ಎಜುಕೇಷನ್ ಸೊಸೈಟಿಯನ್ನು ಸ್ಥಾಪಿಸಲಾಗಿತ್ತು.

ಅಂದು ದಿ. ಶ್ರೀಮಂಜಯ್ಯ ಉಡುಪ, ಶ್ರಿ ಎನ್ ಸುಬ್ರಹ್ಮಣ್ಯ ಉಡುಪ, ಶ್ರೀ ಸ್ವಾಮಿರಾವ್ ರಘುನಾಥರಾಯರು ಅವರ ಸಹಕಾರದಲ್ಲಿ 13-06-1963ರಲ್ಲಿ ಶಿಕ್ಷಣ ಇಲಾಖೆಯಿಂದ ಅನುಮತಿ ದೊರಕಿದ್ದು ನಗರದಲ್ಲಿ ಪ್ರೌಢ ಶಾಲೆ ಶಿಕ್ಷಣಕ್ಕೆ ಭದ್ರ ಬುನಾದಿ ಮಾಡಲಾಯಿತು. ನಂತರ ಪಿಯುಸಿ ಕಾಲೇಜು ತೆರೆಯಲಾಯಿತು ಎಂದರು.
ಇಲ್ಲಿಯವರೆಗೆ ವಿದ್ಯಾರ್ಥಿಗಳಿಂದ ಯಾವುದೇ ಡೊನೇಷನ್ ಪಡೆಯದೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ರಾಷ್ಟ್ರ ಮಟ್ಟದ ಸಾಧನೆ ಮಾಡಿದ್ದು ಈ ಶಾಲೆಯ ವಿಶೇಷ ಗುಣವಾಗಿದ್ದು ಪ್ರತಿ ವರ್ಷ ಎಸ್.ಎಸ್.ಎಲ್.ಸಿಯಲ್ಲಿ ಶೇ. 100 ಹಾಗೂ ಪಿಯುಸಿಯಲ್ಲಿ ಶೇ. 90 ಫಲಿತಾಂಶ ಇಲ್ಲಿಯವರೆಗೆ ಬಂದಿದೆ ಎಂದರು.


ಫೆ. 12ನೇ ರ ಬೆಳಿಗ್ಗೆ 8;30ರಿಂದ ಕಾರ್ಯಕ್ರಮ ಆರಂಭವಾಗಲಿದ್ದು ನಗರದ ಪ್ರತಿಯೊಂದು ರಸ್ತೆಗಳಲ್ಲಿ ಡೊಳ್ಳು ಕುಣಿತದ ಮೂಲಕ ಮೆರವಣಿಗೆ ನಡೆಸಲಾಗುವುದು. ನಂತರ ಗೃಹಮಂತ್ರಿ ಆರಗ ಜ್ಞಾನೇಂದ್ರರವರು ನೂತನ ಕಟ್ಟಡ ಉದ್ಘಾಟನೆ ಮಾಡುವರು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ರವರು ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸ್ಮರಣ ಸಂಚಿಕೆ ಬಿಡುಗಡೆಯನ್ನು ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಡುಗಡೆ ಮಾಡುವರು. ಕ್ರೀಡಾಂಗಣ ಉದ್ಘಾಟನೆಯನ್ನು ಸಂಸದ ಬಿ.ವೈ ರಾಘವೇಂದ್ರರವರು ಉದ್ಘಾಟಿಸುವರು. ಈ ಸಮಾರಂಭದ ಅಧ್ಯಕ್ಷತೆಯನ್ನು ನಗರ ಎಜುಕೇಷನ್ ಸೊಸೈಟಿ ಅಧ್ಯಕ್ಷರಾದ ಕೆ.ವಿ. ಕೃಷ್ಣಮೂರ್ತಿಯವರು ವಹಿಸಲಿದ್ದಾರೆ.

ಬೆಳಿಗ್ಗೆಯಿಂದ ಸಭಾ ಕಾರ್ಯಕ್ರಮಗಳ ಜೊತೆಗೆ ವಿವಿಧ ಮನರಂಜನೆ ಕಾರ್ಯಕ್ರಮ ನಡೆಯಲಿದ್ದು ಫೆ. 11ನೇ ಶನಿವಾರ ಹಳೇ ವಿದ್ಯಾರ್ಥಿಗಳಿಗಾಗಿ ವಿವಿಧ ಜಲಕ್ರೀಡೆ, ವಿವಿಧ ರೀತಿಯ ಆಟಗಳನ್ನು ಏರ್ಪಡಿಸಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಹಲವು ಶಾಸಕರು, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಆಗಮಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ಶಾಲೆಯ ಹಳೇ ವಿದ್ಯಾರ್ಥಿಗಳು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೇಳಿಕೊಂಡರು.
ಈ ಪತ್ರಿಕಾಘೋಷ್ಠಿಯಲ್ಲಿ ಸಲಹೆಗಾರರಾದ ಶಿವಮೊಗ್ಗ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ರಾಮಪ್ಪ ಗೌಡ, ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಸುಧೀಂದ್ರ, ಭಂಡರ್‌ಕರ್, ನಿರ್ದೆಶಕರಾದ ಸುಬ್ರಹ್ಮಣ್ಯ ಬಾಗವತ್, ಹರ್ಷ, ಸುಬ್ರಹ್ಮಣ್ಯ, ಜಗನಾಥ್, ಹೊಸನಗರ ದೈಹಿಕ ಪರೀವಿಕ್ಷಕರಾದ ಬಾಲಚಂದ್ರ, ಪತ್ರಕರ್ತ ನಾರಾಯಣ ಕಾಮತ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,755FollowersFollow
0SubscribersSubscribe
- Advertisement -spot_img

Latest Articles

error: Content is protected !!