ಮಾ. 4 ರಂದು ಪಟಗುಪ್ಪ ಸೇತುವೆ ಬಳಿ ಶರಾವತಿ ಹಿನ್ನೀರ ಹಬ್ಬ ; ಸುರೇಶ್ ಸ್ವಾಮಿರಾವ್


ಹೊಸನಗರ: ಕ್ಷೇತ್ರದ ಶಾಸಕ ಹರತಾಳು ಹಾಲಪ್ಪನವರ ಕನಸಿನ ಸೇತುವೆಯಾದ ಪಟಗುಪ್ಪ ಸೇತುವೆಯ ಬಳಿ ಮಾರ್ಚ್ 4 ಶನಿವಾರ ಸಂಜೆ 4 ಗಂಟೆಯಿಂದ ಶರಾವತಿ ಹಿನ್ನೀರ ಹಬ್ಬವನ್ನು ಆಚರಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್‌ರವರು ಹೇಳಿದರು.


ಹೊಸನಗರ ತಾಲ್ಲೂಕು ಪಟಗುಪ್ಪ ಸೇತುವೆಯ ಬಳಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ, ಶಾಸಕ ಹರತಾಳು ಹಾಲಪ್ಪನವರ ಅದ್ಯಕ್ಷತೆಯಲ್ಲಿ ಈ ಹಿನ್ನೀರ ಹಬ್ಬವನ್ನು ಆಚರಿಸಲಾಗುತ್ತಿದ್ದು ಈ ಕಾರ್ಯಕ್ರಮ ಹೊಸನಗರ ತಾಲ್ಲೂಕು ಹಾಗೂ ಸಾಗರ ತಾಲ್ಲೂಕಿಗೆ ಹೊಂದಿಕೊಂಡಿರುವುದರಿಂದ ರಾಜ್ಯದಲ್ಲಿ ಹೆಸರು ಮಾಡಿರುವುವಂತಹ 10 ತಂಡಗಳಿಂದ ಸಾಂಸ್ಕೃತೀಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇದರ ಜೊತೆಗೆ ಸಿನಿಮಾ ನಟರು ಹಾಗೂ ಟಿ.ವಿ ಮಾದ್ಯಮದಲ್ಲಿ ಹೆಸರು ಗಳಿಸಿರುವಂತಹ ವ್ಯಕ್ತಿಗಳನ್ನು ಕರೆಸಲಾಗುತ್ತದೆ ಎಂದರು.


ಈ ಕಾರ್ಯಕ್ರಮ ಪಕ್ಷಾತೀತವಾಗಿ ನಡಯಲಿದ್ದು ಈ ಕಾರ್ಯಕ್ರಮ ಎರಡು ಗ್ರಾಮ ಪಂಚಾಯತಿಯವರ ಸಮ್ಮಿಲನದಲ್ಲಿ ನಡೆಯಲಿದ್ದು ಹತ್ತರೂ ಹಳ್ಳಿಯ ಜನರು ಈ ಕಾರ್ಯಕ್ರಮಕ್ಕೆ ಕೈಜೋಡಿಸಲಿದ್ದು ಈ ಕಾರ್ಯಕ್ರಮ ಸಂಜೆ 4 ಗಂಟೆಯಿಂದ ಆರಂಭವಾಗಲಿದ್ದು ಎರಡು ಗಂಟೆಗಳ ಕಾಲ ಸಾಂಸ್ಕೃತೀಕ ಕಾರ್ಯಕ್ರಮ ನಂತರ 6 ಗಂಟೆಯಿಂದ ಸಭಾ ಕಾರ್ಯಕ್ರಮಗಳು ನಡೆಯಲಿದೆ ಸಭಾ ಕಾರ್ಯಕ್ರಮ ಮುಗಿದ ನಂತರ ಆರ್ಕೇಸ್ಟ್ರಾ ಕಾರ್ಯಕ್ರಮವಿದ್ದು ನಂತರ ರಾಜ್ಯದಲ್ಲಿ ಹೆಸರು ಮಾಡಿರುವ ನಾಲ್ಕು ತಂಡಗಳಿಂದ ಕೋಲಾಟ ತಂಡದಿಂದ ಕೋಲಾಟ ಕಾರ್ಯಕ್ರಮವಿರುತ್ತದೆ ಆಯಾಯ ಕೆಲಸಗಳಿಗೆ ಕಮಿಟಿಯನ್ನು ರಚಿಸಲಾಗಿದ್ದು ಆಯಾ ಕಮಿಟಿಯ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು ಎಲ್ಲ ಕಮಿಟಿಯ ಅಧ್ಯಕ್ಷತೆಯನ್ನು ಶಾಸಕರ ಆಗಿರುತ್ತಾರೆ. ಆಹಾರ ಮೇಳವನ್ನು ಆಯೋಜಿಸಲಾಗಿದ್ದು ಈ ಅಹಾರ ಮೇಳದಲ್ಲಿ ವಿವಿಧ ಬಗೆಯ ಮಲೆನಾಡಿನ ಪಾದರ್ಥಗಳಾದ ಸಸ್ಯಹಾರಿ ಹಾಗೂ ಮಾಂಸ ಹಾರಿ ಪದಾರ್ಥಗಳು ಸಿಗಲಿದೆ ಎಂದರು.


ಈ ಮಲೆನಾಡ ಸಿರಿಯ ಸೊಬಗನ್ನು ಸವಿಯುವ ಉದ್ದೇಶ ಹಾಗೂ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ನಡೆಯುವ ಹಿನ್ನೀರ ಹಬ್ಬದ ಉದ್ದೇಶ ನಮ್ಮ ಮಲೆನಾಡು ಭಾಗದ ಜನರು ಶರಾವತಿಯ ತೀರದಲ್ಲಿದ್ದು ಅವರ ಜಾಗ ಕಳೆದುಕೊಂಡವರು ಹಾಗೂ ಮನೆಗಳನ್ನು ಬಿಟ್ಟು ಬೇರೆ ಕಡಗೆ ವಲಸೆ ಹೋಗಿದ್ದು ಅವರನ್ನು ಒಟ್ಟು ಮಾಡಿ ಹಬ್ಬವನ್ನು ಆಚರಿಸುವ ಉದ್ಧೇಶ ಇದಾಗಿದ್ದು ಈ ಪಟಗುಪ್ಪ ಸೇತುವೆ ಬಳಿ ನಡೆಯುವ ಶರಾವತಿ ಹಿನ್ನೀರ ಹಬ್ಬಕ್ಕೆ ಎಲ್ಲರೂ ಆಗಮಿಸಿ ಮಲೆನಾಡ ಸೊಬಗನ್ನು ಸವಿಯಬೇಕು ಹಾಗೂ ಈ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು.


ಈ ಪತ್ರಿಕಾಗೋಷ್ಟಿಯಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಮಂಡಾಣಿ ಮೋಹನ್, ಎಂ.ಎನ್ ಸುಧಾಕರ್, ಚಾಲುಕ್ಯ ಬಸವರಾಜ್, ಮೆಣಸೆ ಆನಂದ್, ಎಂ ಗುಡ್ಡಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷೆ ಸವಿತಾ ರಮೇಶ, ಸದಸ್ಯ ಚಿಕ್ಕನಕೊಪ್ಪ ಶ್ರೀಧರ, ರಮೇಶ್, ರಾಜೇಂದ್ರ, ಗಿರೀಶ್, ಗುರುಮೂರ್ತಿ, ಇಂದ್ರೇಶ್, ಸಂತೋಷ, ಸುರೇಂದ್ರ, ಗಾಳಿ ಶಿವಪ್ಪ, ಪ್ರಹ್ಲಾದ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,747FollowersFollow
0SubscribersSubscribe
- Advertisement -spot_img

Latest Articles

error: Content is protected !!