ಹೊಸನಗರ ಪಿಎಲ್‌ಡಿ ಬ್ಯಾಂಕ್ ಕಳ್ಳತನಕ್ಕೆ ವಿಫಲ ಯತ್ನ ! ಪೊಲೀಸರ ಅತಿಥಿಯಾದ ಕಬಾಬ್ ಗಣೇಶ್, ಹಲವು ಫೈನಾನ್ಸ್ ಹಾಗೂ ಸೊಸೈಟಿ ಕಳ್ಳತನದಲ್ಲಿ ಇವನ ಪಾಲು ?


ಹೊಸನಗರ: ಶುಕ್ರವಾರ ರಾತ್ರಿ ಸುಮಾರು 3 ಗಂಟೆಯ ನಂತರ ಹೊಸನಗರ ಪ್ರತಿಷ್ಟಿತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಪಿಎಲ್‌ಡಿ ಬ್ಯಾಂಕ್ ಮುಂಭಾಗದ ಎರಡು ಬೀಗಗಳನ್ನು ಒಡೆದು ಒಳಗೆ ಹೋಗಿ ಎಲ್ಲ ಡ್ರಾಗಳನ್ನು ಎಳೆದು ನೋಡಿ ಗಾಡ್ರೇಜ್ ತೆಗೆಯುವ ಸಂದರ್ಭದಲ್ಲಿ ಹೊಸನಗರ ತಾಲ್ಲೂಕು ಕಾಳಿಕಾಪುರದ ಕಬಾಬ್ ಗಣೇಶ ಎಂಬುವವರು ಕಳ್ಳತನಕ್ಕೆ ಯತ್ನಿಸಿ ಸಿಕ್ಕಿ ಹಾಕಿಕೊಂಡಿರುವ ಘಟನೆ ನಡೆದಿದೆ.


ಹೊಸನಗರ ತಾಲ್ಲೂಕಿನಲ್ಲಿ ಸುಮಾರು ಎರಡು ತಿಂಗಳುಗಳಿಂದ ಕಪಿಲ ಫೈನಾನ್ಸ್, ವೀರಶೈವ ಪತ್ತಿನ ಸಹಕಾರ ಸಂಘ, ರಕ್ಷಿತಾ ಫೈನಾನ್ಸ್, ಪುನಃ ವೀರಶೈವ ಪತ್ತಿನ ಸಹಕಾರ ಸಂಘ, ನಗರ ನೀಲಕಂಠೇಶ್ವರ ಸೊಸೈಟಿ, ಪುರಪ್ಪೆಮನೆ ಸೊಸೈಟಿಗಳಲ್ಲಿ 15 ದಿನಗಳಿಗೊಮ್ಮೆ ಸಹಕಾರ ಸಂಸ್ಥೆಗಳ ಬೀಗ ಒಡೆದು ಹಣ ದೋಚಿಕೊಂಡು ಹೋಗುತ್ತಿದ್ದರು ಹೊಸನಗರ ತಾಲ್ಲೂಕಿನ ಪೊಲೀಸರು ಕಳ್ಳರನ್ನು ಪತ್ತೆ ಮಾಡಲು ಕಷ್ಟಕರವಾಗುತ್ತಿತ್ತು. ಎಷ್ಟೇ ಸಿ.ಸಿ ಕ್ಯಾಮೆರಾಗಳಿದ್ದರೂ ಯಾವುದೇ ಸುಳಿವು ನೀಡದಂತೆ ಹಣ ದೋಚಿಕೊಂಡು ಹೋಗುತ್ತಿದ್ದರು.


ಕಳ್ಳ ಕಬಾಬ್ ಗಣೇಶ ಸಿಕ್ಕಿದ್ದು ಹೇಗೆ ?

ಇಂದು ಬೆಳಿಗ್ಗೆ ಸುಮಾರು 4:10 ರ ಸಂದರ್ಭದಲ್ಲಿ ಶ್ರೀ ಚೌಡಮ್ಮ ರಸ್ತೆಯಲ್ಲಿರುವ ಪಿಎಲ್‌ಡಿ ಬ್ಯಾಂಕ್‌ನ ಮುಂಭಾಗದ ಬಾಗಿಲಿನ ಬೀಗ ಒಡೆಯುವ ಸಂದರ್ಭದಲ್ಲಿ ಶಬ್ದವಾಗಿದೆ ಅಲ್ಲೇ ಸಮೀಪವಿದ್ದ ಡಿಸಿಸಿ ಬ್ಯಾಂಕ್ ರಾತ್ರಿ ಕಾವಲುಗಾರ ವಿನಯ್ ಪೂಜಾರಿ ಹಾಗೂ ಗಣಪತಿ ಬ್ಯಾಂಕ್ ರಾತ್ರಿ ಕಾವಲುಗಾರರ ಸುರೇಶ ಬಿ ಒಟ್ಟು ಸೇರಿ ಶಬ್ದ ಬಂದ ಬ್ಯಾಂಕ್ ಕಡೆಗೆ ಹೋಗಿರುವ ಸಂದರ್ಭದಲ್ಲಿ ಎದುರುಗಡೆಯ ಪಿಎಲ್‌ಡಿ ಬ್ಯಾಂಕ್‌ನ ಬೀಗ ಮುರಿದಿರುವುದು ಕಣ್ಣಿಗೆ ಬಿದ್ದಿದೆ. ತಕ್ಷಣ ಪಿಎಲ್‌ಡಿ ಬ್ಯಾಂಕ್ ಪಿಗ್ಮಿ ಸಂಗ್ರಹಕಾರರಾದ ರಾಜು ಶೆಟ್ಟಿಯವರಿಗೆ ಸಮೀಪದ ಊರಿನವರೆ ಆದ ಲಕ್ಷ್ಮಣ ಆಚಾರಿಯವರಿಗೆ ಫೋನ್ ಮಾಡಿ ಪಿಎಲ್‌ಡಿ ಬ್ಯಾಂಕ್‌ಗೆ ಕಳ್ಳರು ನುಗ್ಗಿದ್ದಾರೆ ತಕ್ಷಣ ಬನ್ನಿ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ‌. ತಕ್ಷಣ ನಾಲ್ಕು ಜನರು ಒಟ್ಟಾಗಿ ಹೊಸನಗರ ಪೊಲೀಸ್ ಠಾಣೆಗೆ ಹಾಗೂ 112ಗೆ ಕರೆ ಮಾಡಿದ್ದಾರೆ ಪೊಲೀಸರು ಬರುವ ಕೆಲವೇ ಸೆಕೆಂಡ್‌ಗಳಲ್ಲಿ ಕಳ್ಳ ಬ್ಯಾಂಕ್‌ನಿಂದ ಹೊರಬಂದು ಇವರನ್ನು ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಆದರೆ ಈ ನಾಲ್ವರು ಕಳ್ಳನನ್ನು ಬೆನ್ನು ಬಿಡದಂತೆ ಓಡಿ ಹೋಗಿದ್ದಾರೆ ಇಡೀ ಪೇಟೆ ಒಂದು ಸುತ್ತು ಓಡುವಾಗ ಕಳ್ಳನಿಗೆ ಸುಸ್ತಾಗಿ ತಾನು ಧರಿಸಿದ್ದ ಹೆಲ್ಮೆಟ್ ತೆಗೆದಿದ್ದಾನೆ. ತಕ್ಷಣ ಪಿಗ್ಮಿ ಕಲೆಕ್ಟರ್ ರಾಜುಶೆಟ್ಟಿಗೆ ಕಳ್ಳ ಬೇರೆ ಯಾರು ಅಲ್ಲ ಕಬಾಬ್ ಗಣೇಶ ಎಂದು ಪರಿಚಯ ಸಿಕ್ಕಿದ್ದು ಓಡಿಸುವುದನ್ನು ಬಿಟ್ಟು ಅಷ್ಟೊತ್ತಿಗೆ 112 ಪೊಲೀಸ್ ಸಿಬ್ಬಂದಿ ಬಂದಿದ್ದಾರೆ. ತಕ್ಷಣ ಕಳ್ಳನೆಂದು ಹೇಳಲಾದ ಕಬಾಬ್ ಗಣೇಶ್‌ರವರ ಮನೆಗೆ ಹೋದಾಗ ಅಲ್ಲಿ ಅವರ ಪತ್ನಿ ನಮ್ಮ ಗಂಡ ಬೆಂಗಳೂರಿಗೆ ಹೋಗಿದ್ದಾರೆ ಅವರಿಲ್ಲ ಎಂಬ ಉತ್ತರ ಬಂದಿದೆ. ಅವರು ನಡೆದ ಘಟನೆಯನ್ನು ವಿವರಿಸಿ ಸಂಧಾನ ಮಾಡುವುದಾಗಿ ಅವರ ಪತ್ನಿಗೆ ಭರವಸೆ ನೀಡದ ನಂತರ ಅವರು ಕೊಡಚಾದ್ರಿ ಕಾಲೇಜ್ ಬಳಿ ಇದ್ದಾರೆ ಎಂಬ ಉತ್ತರ ನೀಡಿದ್ದು ಪೋಲೀಸರು ಹಾಗೂ ರಾಜುಶೆಟ್ಟಿಯವರ ಸಹಾಯದಿಂದ ಕಳ್ಳನನ್ನು ಬಂಧಿಸಲು ಪೊಲೀಸರಿಗೆ ಸಹಕಾರಿಯಾಗಿದೆ‌.

ಪಿಎಲ್‌ಡಿ ಬ್ಯಾಂಕ್ ಮುಂಬಾಗಿಲಿನ ಬೀಗ ಮುರಿದಿರುವುದನ್ನು
ಪಿಎಸ್ಐ ನೀಲರಾಜ್ ನರಲಾರರವರು ವೀಕ್ಷಿಸುತ್ತಿರುವುದು.


ಹೊಸನಗರ ಫೈನಾನ್ಸ್ ಹಾಗೂ ಸೊಸೈಟಿಗಳಲ್ಲಿ ಈತನೇ ಕಳ್ಳತನ ಮಾಡಿರಬಹುದೆನ್ನುವ ಶಂಕೆ ?
ಹೊಸನಗರದ ಕಪಿಲ ಫೈನಾನ್ಸ್, ರಕ್ಷಿತಾ ಫೈನಾನ್ಸ್, ವೀರಶೈವ ಪತ್ತಿನ ಸಹಕಾರ ಸಂಘ, ನಗರ ನೀಲಕಂಠೇಶ್ವರ ಸೊಸೈಟಿ ಹಾಗೂ ಪುರಪ್ಪೆಮನೆ ಸೊಸೈಟಿಗಳಲ್ಲಿ ಈತ ಮತ್ತು ಈತನ ಸಂಗಡಿಗರು ಕಳ್ಳತನ ಮಾಡಿರಬಹುದೆಂದು ಶಂಕಿಸಲಾಗಿದ್ದು ಎಲ್ಲವನ್ನು ಬಾಗಿಲು ಒಡೆದಿರುವುದು ಬೀಗ ಮುರಿದಿರುವುದು ಒಳ ನುಗ್ಗಿರುವುದು ಒಂದೇ ರೀತಿಯಿದ್ದು ಈತನನ್ನು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದರೆ ಖಂಡಿತ ಎಲ್ಲ ಕಳ್ಳತನ ಬಾಯಿ ಬಿಡುವುದರ ಜೊತೆಗೆ ಇವರ ಇವರ ಜೊತೆಗೆ ಯಾರ‍್ಯಾರು ಇರಬಹುದು ಎಂಬುದನ್ನು ಬಾಯಿ ಬಿಡಿಸಬೇಕಾಗಿದ್ದು ಸಂಪೂರ್ಣ ಮಾಹಿತಿ ಪೊಲೀಸ್ ತನಿಖೆಯಿಂದ ಹೊರಬರಲಿದೆ.

ರೊಚ್ಚಿಗೆದ್ದ ಪೊಲೀಸರು :

ಸುಮಾರು ಎರಡು ತಿಂಗಳುಗಳಿಂದ ಪೊಲೀಸ್ ಇಲಾಖೆ ರಾತ್ರಿ ವೇಳೆಯಲ್ಲಿ ನಿದ್ದೆ ಮಾಡದೇ ತಾಲ್ಲೂಕಿನಲ್ಲಿ ಕಳ್ಳತನ ಮಾಡುವವರನ್ನು ಪತ್ತೆ ಹಚ್ಚುವಲ್ಲಿ ಮಗ್ನರಾಗಿದ್ದು ಅಂತು-ಇಂತು ಕಳ್ಳ ಸಿಕ್ಕಿರುವುದರಿಂದ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.


ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗಿರೀಶ್‌ರವರ ಮಾರ್ಗದರ್ಶನದಲ್ಲಿ ಸಬ್‌ಇನ್ಸ್ಪೇಕ್ಟರ್ ನೀಲರಾಜ್ ನರಲಾರ ಹಾಗೂ ಸಿಬ್ಬಂದಿಗಳು ಈ ಪ್ರಕರಣವನ್ನು ಬೇಧಿಸಿ ಕೇಸ್ ದಾಖಲಿಸಿಕೊಂಡು ತನಿಖೆ ಕಾರ್ಯ ಕೈಗೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,745FollowersFollow
0SubscribersSubscribe
- Advertisement -spot_img

Latest Articles

error: Content is protected !!