ಒತ್ತುವರಿ ಹೆಸರಿನಲ್ಲಿ ರಾತ್ರೋರಾತ್ರಿ ಉದ್ಬವಗೊಳ್ಳುತ್ತಿರುವ ಅಕ್ರಮ ಮನೆಗಳು ; ಸಿಸಿಎಫ್‌ಸಿಗೆ ಗ್ರಾಮಸ್ಥರ ದೂರು

0 59

ರಿಪ್ಪನ್‌ಪೇಟೆ: ಒತ್ತುವರಿ ನೆಪದಲ್ಲಿ ಮನೆಗಳು ದಿಢೀರ್ ತಲೆ ಎತ್ತಿಕೊಳ್ಳುವುದರೊಂದಿಗೆ ಬೆಲೆ ಬಾಳುವ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡುತ್ತಿದ್ದರೂ ಕೂಡಾ ಆರಣ್ಯ ಇಲಾಖೆಯವರಾಗಲಿ, ಕಂದಾಯ ಇಲಾಖೆಯವರಾಗಲಿ ಇತ್ತ ತಲೆ ಹಾಕದೇ ಒತ್ತುವರಿದಾರರಿಗೆ ಬೆಂಬಲವಾಗಿ ನಿಂತಿದ್ದಾರೆಂದು ಬಿದರಹಳ್ಳಿ ಗ್ರಾಮದ ರೈತರುಗಳಾದ ಚೂಡಪ್ಪ, ಸತೀಶ, ತೀರ್ಥಪ್ಪ, ಶ್ರೀನಿವಾಸ, ರಾಜೇಶ, ದಿನೇಶ ಇನ್ನಿತರ ನೂರಾರು ಗ್ರಾಮಸ್ಥರು ವಿರೋಧಿಸಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಅರಸಾಳು ವಲಯ ವ್ಯಾಪ್ತಿಗೆ ಬರುವ ಬಿದರಹಳ್ಳಿ ಗ್ರಾಮದ ಸರ್ವೇ ನಂಬರ್ 6 ರಲ್ಲಿ ಅರಣ್ಯ ಇಲಾಖೆಗೆ ಸೇರುವ ಜಾಗವನ್ನು ಕಬಳಿಸುವ ಉದ್ದೇಶದಿಂದಾಗಿ ರಾತ್ರೋರಾತ್ರಿ ಉದ್ಬವಗೊಂಡಿರುವ ಹಲವು ಮನೆಗಳನ್ನು ಬಿದರಹಳ್ಳಿ ಗ್ರಾಮಸ್ಥರುಗಳು ಕಂಡು ಹೌಹಾರುವಂತಾಗಿದೆ. ಈ ಕುರಿತು ಅರಸಾಳು ವಲಯ ಉಪವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾದರೂ ಕೂಡಾ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ.

ಸದರಿ ಸರ್ವೇನಂಬರ್ 6 ರಲ್ಲಿನ ಜಾಗದಲ್ಲಿ ವಿ.ಎಫ್.ಸಿ ವತಿಯಿಂದ ಕಳೆದ 2014-15ನೇ ಸಾಲಿನಲ್ಲಿ ಅರಣ್ಯ ಬೆಳೆಸಲಾಗಿದ್ದು ಈ ಜಾಗವು ನಮ್ಮ ಇಲಾಖೆಗೆ ಸೇರಿಲ್ಲ ಎಂದು ಹೇಳಿ ಕೈತೊಳೆದುಕೊಳ್ಳುವ ಪ್ರಯತ್ನದಲ್ಲಿ ಅರಣ್ಯ ಇಲಾಖೆಯವರು ವಾದಿಸುತ್ತಿದ್ದರೆ ಕಮದಾಯ ಇಲಾಖೆಯವರು ಅರಣ್ಯ ಇಲಾಖೆಯ ವಿಲೇಜ್ ಫಾರೆಸ್ಟ್ ಎಂದು ಹೇಳುತ್ತಿದ್ದು ಇಬ್ಬರ ಜಗಳದಲ್ಲಿ ಅಳಿದುಳಿದಿರುವ ಅರಣ್ಯ ಸಂಪತ್ತು ಉಳಿಸುವ ಪ್ರಯತ್ನದಲ್ಲಿ ಬಿದರಹಳ್ಳಿ ರೈತ ಮುಖಂಡರು, ನೂರಾರು ಗ್ರಾಮಸ್ಥರುಗಳು ತಮ್ಮೂರಿನಲ್ಲಿನ ಅರಣ್ಯ ಜಾಗವನ್ನು ಉಳಿಸಿ ತೋಟಕ್ಕೆ ಮರದ ಸೊಪ್ಪು ಮತ್ತು ಒಣ ಎಲೆಗೊಬ್ಬರಕ್ಕಾಗಿ ಉತ್ತಮ ಪರಿಸರ ರಕ್ಷಣೆ ಮಾಡಲು ಹೀಗೆ ಅರಣ್ಯ ನಾಶವನ್ನು ತಡೆಯಲು ಮುಂದಾಗಿದ್ದಾರೆ.

ಈ ಕೂಡಲೇ ಸಂಬಂಧಿಸಿದ ಅರಸಾಳು ವಲಯ ಅರಣ್ಯಾಧಿಕಾರಿಗಳು ಇತ್ತ ಗಮನಹರಿಸಿ ದಿಢೀರ್ ನಿರ್ಮಿಸಲಾಗಿರುವ ಶೆಡ್ ಕಿತ್ತು ಹಾಕುವುದರೊಂದಿಗೆ ಅರಣ್ಯ ಪ್ರದೇಶವನ್ನು ಉಳಿಸುವಂತೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

Leave A Reply

Your email address will not be published.

error: Content is protected !!