ಹೊಸನಗರ : ಪಟ್ಟಣದ ಶಕ್ತಿ ದೇವತೆ ಶ್ರೀ ಮಾರಿಕಾಂಬಾ ಅಮ್ಮನವರ ವರ್ಷಾವಧಿ 9 ದಿನಗಳ ಜಾತ್ರಾ ಮಹೋತ್ಸವ ಬುಧವಾರ ಮಧ್ಯರಾತ್ರಿ 12 ಗಂಟೆಗೆ ವಿಸರ್ಜನಾ ಪೂಜೆಯೊಂದಿಗೆ ಸಂಪನ್ನಗೊಂಡಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಾಟಕ ಸಂಗೀತ ಯಕ್ಷಗಾನ ಆರ್ಕೆಸ್ಟ್ರಾ ವಿಜಯ್ ವಿಲ್ಸನ್ ಅಮ್ಯೂಸ್ಮೆಂಟ ಅವರಿಂದ ಹಲವಾರು ವಿಶೇಷ ಮನರಂಜನ ಕಾರ್ಯಕ್ರಮ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಜಾತ್ರಾ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ರಕ್ಷಣಾ ಇಲಾಖೆಯವರು ವಿಶೇಷ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು.