ಅಪ್ರಾಪ್ತೆಗೆ ಗರ್ಭಿಣಿ ಮಾಡಿ 17 ತಿಂಗಳು ಜೈಲಿನಲ್ಲಿದ್ದು ಬಂದ ಆರೋಪಿ ಮತ್ತೆ ಅದೇ ಬಾಲಕಿಗೆ ಮದುವೆಯಾಗುತ್ತೇನೆಂದು ಪುಸಲಾಯಿಸಿ ರೋಡ್ ಗೋಲ್ಡ್ ತಾಳಿ ಕಟ್ಟಿ ಗರ್ಭಿಣಿ ಮಾಡಿ ಪೊಕ್ಸೋ ಕಾಯ್ದೆಯಡಿ ಮತ್ತೆ ಜೈಲುಪಾಲು !

0 141

ರಿಪ್ಪನ್‌ಪೇಟೆ : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಯುವಕನನ್ನು ಬಂಧಿಸಿದ ಘಟನೆ ನಡೆದಿದೆ.

ಹುಂಚ ಗ್ರಾಪಂ ವ್ಯಾಪ್ತಿಯ ಯುವಕ ಮನೋಜ್ (23) ಈತನನ್ನು ರಿಪ್ಪನ್‌ಪೇಟೆ ಪೊಲೀಸರು ಬಂಧಿಸಿದ್ದು ನೊಂದ ಬಾಲಕಿ ನೀಡಿದ ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ ?

ನೊಂದ ಬಾಲಕಿಯ ತಂದೆ ಸುಮಾರು 15 ವರ್ಷಗಳ ಹಿಂದೆ ತೀರಿಕೊಂಡಿದ್ದು ತಾಯಿ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಹಿರಿಯವನು ಡ್ರೈವಿಂಗ್ ಕೆಲಸ ಮಾಡಿಕೊಂಡಿರುತ್ತಾನೆ. ನೊಂದ ಬಾಲಕಿಯು 9ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿಕೊಂಡು ಮನೆಯಲ್ಲಿಯೇ ಇರುತ್ತಾರೆ. ಮನೋಜ್ ಎಂಬಾತನು ನೊಂದ ಬಾಲಕಿಯನ್ನು ಪುಸಲಾಯಿಸಿ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದರಿಂದ ಗರ್ಭಿಣಿಯಾಗಿ ಶಿವಮೊಗ್ಗ ಸುರಭಿ ಕೇಂದ್ರದಲ್ಲಿ ಸುಮಾರು 14 ತಿಂಗಳು ಇದ್ದು 2021ರ ಫೆ. 20ರಂದು ವಾಪಾಸ್ ಮನೆಗೆ ಹೋಗಿದ್ದು ಇವರಿಗೆ ಜನಿಸಿದ ಗಂಡು ಮಗುವನ್ನು ಸರಕಾರಕ್ಕೆ (ದತ್ತುಕೇಂದ್ರ) ನೀಡಿರುತ್ತಾರೆ.


ಆರೋಪಿ ಮನೋಜ್ ಈತನು ಸುಮಾರು 17 ತಿಂಗಳು
ಜೈಲಿನಲ್ಲಿದ್ದು ನಂತರ ಕೇಸನ್ನು ನ್ಯಾಯಾಲಯದಲ್ಲಿ ರಾಜಿ ಮಾಡಿಕೊಂಡಿರುತ್ತಾರೆ. ಮನೋಜ್ ನು ಜೈಲಿನಿಂದ ಬಿಡುಗಡೆಯಾದ ನಂತರ ಸಂತ್ರಸ್ಥ ಬಾಲಕಿಯೊಂದಿಗೆ ಪುನಃ ಸಂಪರ್ಕ ಬೆಳೆಸಿ ಮಾತನಾಡುತ್ತಿದ್ದು ನೊಂದ ಬಾಲಕಿಯ ಮನೆಗೆ ಪದೆ ಪದೆ ಬರುತ್ತಿದ್ದು, ನಿನ್ನನ್ನು ಮದುವೆಯಾಗುತ್ತೇನೆ ಬಲವಂತವಾಗಿ 2022 ರ ಮಾ.03 ರಂದು ನೊಂದ ಬಾಲಕಿಯನ್ನು ಕರೆದುಕೊಂಡು ಹೋಗಿ ಹೊರನಾಡಿನ ಗಣಪತಿ ದೇವಸ್ಥಾನದಲ್ಲಿ ಅಂಗಡಿಯಲ್ಲಿ ಸಿಗುವ ತಾಳಿಸರವನ್ನು ನೊಂದ ಬಾಲಕಿಯ ಕೊರಳಿಗೆ ಹಾಕಿ ಮದುವೆಯಾಗಿರುತ್ತಾನೆ. ನಂತರ ಆತನ ಮನೆಗೆ ಕರೆದುಕೊಂಡು ಹೋಗಿರುತ್ತಾನೆ.

ಮರುದಿನ ಮಾ.12 ರಂದು ನೊಂದ ಬಾಲಕಿ ಬೇಡ ಎಂದರೂ ಕೇಳದ ಆರೋಪಿ ನಾವಿಬ್ಬರೂ ಗಂಡ-ಹೆಂಡತಿ ಅಂತ ಹೇಳಿ ಬಲವಂತವಾಗಿ ದೈಹಿಕ ಸಂಪರ್ಕ ಹೊಂದಿ ಅತ್ಯಾಚಾರ ಮಾಡಿರುತ್ತಾನೆ. ನಂತರ ಸುಮಾರು 2 ತಿಂಗಳ ನಂತರ ನೊಂದ ಬಾಲಕಿಯು ಗರ್ಭಾವತಿಯಾಗಿರುತ್ತಾರೆ. ಫೆ.21 ರಂದು ಹೆಣ್ಣು ಮಗುವಿಗೆ ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಜನ್ಮ ನೀಡಿರುತ್ತಾರೆ.
ನೊಂದ ಬಾಲಕಿಯ ಮದುವೆಗೆ ಆರೋಪಿ ಮನೋಜ್ ರವರ ತಂದೆ-ತಾಯಿಯವರು ಕುಮ್ಮಕ್ಕು ನೀಡಿದ್ದರಿಂದ ಮದುವೆಯಾಗಿರುತ್ತಾರೆ. ನೊಂದ ಬಾಲಕಿಯನ್ನು ಬಲವಂತವಾಗಿ ಅತ್ಯಾಚಾರ ಮಾಡಿ ಮಗು ಜನಿಸಲು ಕಾರಣಕರ್ತನಾದ ಮನೋಜ್ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಘಟನೆ ಸಂಬಂಧ ಕಲಂ 376(2)(ಎನ್) ಐಪಿಸಿ, ಕಲಂ 6,17 ಪೋಕ್ಸೋ ಕಾಯ್ದೆ 2012 ಹಾಗೂ ಕಲಂ 09,11 ಚೈಲ್ಡ್ ಮ್ಯಾರೇಜ್ ಆಕ್ಟ್ ಅಡಿ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!