ರಿಪ್ಪನ್‌ಪೇಟೆ : ನುಗ್ಗೆಕಾಯಿ ವಿಚಾರಕ್ಕೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆಯೊಂದು ಕೆಂಚನಾಲ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ ?
ಫೆ. 20 ರಂದು ಮಧ್ಯಾಹ್ನ ಸುಮಾರು 02 ಗಂಟೆಗೆ ರಾಮ್ ಕುಮಾರ್ ಕಟ್ಟೆ ಎಂಬುವವರು ಕೆಲಸದ ನಿಮಿತ್ತ ರಿಪ್ಪನ್‌ಪೇಟೆಗೆ ಬಂದಿದ್ದು ಕೆಲಸ ಮುಗಿಸಿ ವಾಪಸ್ ಸಂಜೆ 6-00 ಗಂಟೆ ಸುಮಾರಿಗೆ ಮನೆಗೆ ಹೋದಾಗ ಇದೇ ಗ್ರಾಮದ ನಾಗೇಶ ಬಿನ್ ಚೌಡಣ್ಣ ಇವರು ರಾಮ್ ಕುಮಾರ್ ಮನೆಯ ಹಿತ್ತಲಿನಲ್ಲಿರುವ ನುಗ್ಗೆ ಮರದಿಂದ ನುಗ್ಗೆಕಾಯಿ ಕೊಯ್ದುಕೊಂಡು ಹೋಗುತ್ತಿದ್ದುದ್ದನ್ನು ಗಮನಿಸಿ, ರಾಮ್ ಕುಮಾರ್ ಆತನ ಮನೆ ಎದುರಿನ ರಸ್ತೆಯಲ್ಲಿ ನಿಂತುಕೊಂಡು ‘ಯಾಕೆ ನಮ್ಮ ಮನೆಯ ಹಿತ್ತಲಿನಲ್ಲಿರುವ ನುಗ್ಗೆಕಾಯಿಯನ್ನು ಹೇಳದೇ ಕೇಳದೇ ಕೊಯ್ದುಕೊಂಡು ಹೋಗುತ್ತಿದ್ದೀಯ ?’ ಅಂತಾ ಕೇಳಿದ್ದಕ್ಕೆ ‘ಅದು ನಿನ್ನ ಅಪ್ಪಂದಾ ಮರ ? ನಾನು ಕೊಯ್ದುಕೊಂಡು ಹೋಗುತ್ತೇನೆ ಏನು ಮಾಡುತ್ತಿಯಾ ? ಸೂ… ಮಗನೆ ಅಂತಾ ಅವಾಚ್ಯವಾಗಿ
ಬೈದು ರಾಮ್ ಕುಮಾರ್ ರವರನ್ನು ಆತನ ಮನೆಯ ಎದುರಿನ ರಸ್ತೆಯಲ್ಲಿ ದೂಡಿ ಕೆಡವಿದ್ದು ಕಾಲಿನಿಂದ ಒದ್ದು ಅಲ್ಲೆ ಪಕ್ಕದಲ್ಲಿದ್ದ ಆತನ ಮನೆಯ ಉಣುಗೋಲಿನ ಗೂಟವನ್ನು ಕಿತ್ತುಕೊಂಡು ರಾಮ್ ಕುಮಾರ್ ತಲೆಗೆ ಹೊಡೆದಿದ್ದು ತಪ್ಪಿಸಿಕೊಂಡಿದ್ದರಿಂದ ರಾಮ್ ಕುಮಾರ್ ಬಲಗೈ ನ ಮೊಣಕೈಗೆ ಒಳಪೆಟ್ಟಾಗಿದೆ.
ನಾಗೇಶನ ಜೊತೆಯಲ್ಲಿದ್ದ ಆತನ ತಮ್ಮ ರವಿ ಬಿನ್ ಚೌಡಣ್ಣ, ಈತನು ರಾಮ್ ಕುಮಾರ್ ರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ರಾಜು ಬಿನ್ ಚೌಡಣ್ಣ, ಈತನು ರಾಮ್ ಕುಮಾರ್ ಕುತ್ತಿಗೆಗೆ ಕೈಯಿಂದ ಮುಷ್ಟಿ ಮಾಡಿ ಗುದ್ದಿ ಒಳಪೆಟ್ಟು ಮಾಡಿರುತ್ತಾನೆ. ಅಷ್ಟರಲ್ಲಿ ರವಿ ಈತನು ಕೊರಳು ಪಟ್ಟಿಯನ್ನು ಹಿಡಿದು ಮುಖಕ್ಕೆ ಎದೆಗೆ ಕೈಯಿಂದ ಗುದ್ದಿದ್ದಾನೆ.
ರಾಮ್ ಕುಮಾರ್ ನೋವಿನಿಂದ ಬೊಬ್ಬೆ ಹಾಕಿದ್ದನ್ನು ಕೇಳಿ
ಮುನ್ನ ಮತ್ತು ರಾಘು ಬಿನ್ ಚಂದ್ರಪ್ಪ ಹಾಗೂ ದೇವೇಂದ್ರ ಬಿನ್ ಕೆಂಚಣ್ಣ ರವರು ಗಲಾಟೆಯನ್ನು ಬಿಡಿಸಿದ್ದಾರೆ. ಅಷ್ಟರಲ್ಲಿ
ಆರೋಪಿಗಳು ಇವತ್ತು ಉಳಿದುಕೊಂಡಿದಿಯ ಇನ್ನೊಮ್ಮೆ ಸಿಗು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಅಂತ ಬೆದರಿಕೆ ಹಾಕಿ ಅವರ ಮನೆಗೆ ಹೋಗಿರುತ್ತಾರೆ.
ನುಗ್ಗೆಕಾಯಿ ತೆಗೆದುಕೊಂಡ ವಿಚಾರಕ್ಕೆ ಏಕಾಏಕಿ ನನ್ನನ್ನು ಅವಾಚ್ಯವಾಗಿ ಬೈದು, ದೂಡಿ, ಕೆಡವಿ, ಕೈಯಿಂದ ಗುದ್ದಿ,
ದೊಣ್ಣೆಯಿಂದ ಹಲ್ಲೆ ಮಾಡಿ ಒಳಪೆಟ್ಟು ಮಾಡಿದ ನಾಗೇಶ, ರಾಜು ಮತ್ತು ರವಿ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಮ್ ಕುಮಾರ್ ರಿಪ್ಪನ್‌ಪೇಟೆ ಠಾಣೆಯಲ್ಲಿ
ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.