ಮಾ. 9 ರಿಂದ 17 ರವರೆಗೆ ಹೊಂಬುಜ ಜಗನ್ಮಾತೆ ಪದ್ಮಾವತಿ ದೇವಿ ಮಹಾರಥೋತ್ಸವ


ರಿಪ್ಪನ್‌ಪೇಟೆ: ಜೈನರ ದಕ್ಷಿಣ ಕಾಶಿಯೆಂದೆ ಪ್ರಖ್ಯಾತಿ ಪಡೆದಿರುವ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಮಾ. 9 ರಿಂದ 15 ರವರೆಗೆ ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಮತ್ತು ಮಹಾಮಾತೆ ಪದ್ಮಾವತಿ ದೇವಿ ಅಮ್ಮನವರ ವಾರ್ಷಿಕ ರಥಯಾತ್ರಾ ಮಹೋತ್ಸವವು ಜಗದ್ಗುರ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ದಿವ್ಯಸಾನಿದ್ಯದಲ್ಲಿ ಏರ್ಪಡಿಸಲಾಗಿದೆ ಎಂದು ಮಠದ ಆಡಳಿತಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಾ‌. 9 ರಂದು ಗುರುವಾರ ಶ್ರೀಮಠದ ಬಸದಿಯಲ್ಲಿ ಶ್ರೀ ನೇಮಿನಾಥ ಸ್ವಾಮಿ ಬಸದಿ ಗಣಧರವಲಯ ಆರಾಧನೆ.
10 ರಂದು ಮಕ್ಕಳ ಬಸದಿಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ ಚಿಕ್ಕಬಸದಿ ಕಲ್ಯಾಣ ಮಂದಿರ ಅರಾಧನೆ. 11 ರಂದು ಬೋಗಾರ ಬಸದಿಯಲ್ಲಿ ಭಕ್ತಾಸುರ ಆರಾಧನೆ. ಮಾ. 12 ರಂದು ಭಾನುವಾರ ಇಂದ್ರಪ್ರತಿಷ್ಟೆ ವಿಮಾನ ಶುದ್ದಿ ಯಕ್ಷ ಪ್ರತಿಷ್ಟೆ ಧ್ವಜಾರೋಹಣ ಮಹಾನೈವೇದ್ಯ ಪೂಜೆ ನಾಂದಿ ಮಂಗಲ ವಾಸ್ತು ಶಾಂತಿ ಮೃತ್ತಿಕಾ ಸಂಗ್ರಹ ರಾತ್ರಿ 8 ಕ್ಕೆ ನಾಗವಾಹನೋತ್ಸವ. ಮಾ. 13 ರಂದು ಸೋಮವಾರ ನಿತ್ಯನಿಧಿ ಸಹಿತ ಶ್ರೀಸ್ವಾಮಿ ಮತ್ತು ಶ್ರೀಅಮ್ಮನವರ ಸನ್ನಿಧಿಯಲ್ಲಿ ಅಭಿಷೇಕ ಕಲಿಕುಂಡಯಂತ್ರಾರಾಧನೆ ರಾತ್ರಿ 8 ಕ್ಕೆ ಸಿಂಹವಾಹನೋತ್ಸವ. ಮಾ. 14 ರಂದು ಮಂಗಳವಾರ ನಿತ್ಯವಿಧಿ ಸಹಿತ ಜಲಾಗ್ನಿ ಹೋಮ ಶಾಂತಿ ಚಕ್ರಾರಾಧನೆ ಶ್ರೀಬಲಿ ಸಂಜೆ 6 ಕ್ಕೆ ಧಾರ್ಮಿಕ ಸಮಾರಂಭ “ಸಿದ್ದಾಂತ ಕೀರ್ತೀ ಪ್ರಶಸ್ತಿ ಪ್ರದಾನ’’ ರಾತ್ರಿ 8 ಕ್ಕೆ ಬೆಳ್ಳಿ ರಥೋತ್ಸವ ಪುಷ್ಪ ರಥೋತ್ಸವ
ಮಾ. 15 ಬುಧವಾರ ಮೂಲನಕ್ಷತ್ರದಲ್ಲಿ ಮಧ್ಯಾಹ್ನ 12 ಗಂಟೆಗೆ ನಿತ್ಯ ವಿಧಿ ಸಹಿತ ಮಹಾನೈವೇದ್ಯ ಪೂಜೆ ಜಗನ್ಮಾತೆ ಪದ್ಮಾವತಿ ದೇವಿ ರಥಾರೋಹಣ 1.25 ಕ್ಕೆ ಮಹಾರಥೋತ್ಸವ ಜರುಗಲಿದೆ.


ಮಾ. 16 ರಂದು ಗುರುವಾರ 11 ಗಂಟೆಗೆ ನಿತ್ಯವಿಧಿ ಸಹಿತ ತ್ರಿಕೂಟ ಜಿನಾಲಯದ ಭಗವಾನ್ ಶ್ರೀಪಾರ್ಶ್ವನಾಥ ಸ್ವಾಮಿಗೆ 108 ಕಲಶಗಳ ಮಹಾಭಿಷೇಕ ಮತ್ತು ಸಂಘ ಪೂಜೆ ಜರುಗಲಿದೆ.
ಮಾ‌. 17 ರಂದು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಕುಂಕುಮೋತ್ಸವ ಧ್ವಜಾವರೋಹಣ ಜರುಗಲಿದೆ ಎಂದು ಮಠದ ಆಡಳಿತಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,755FollowersFollow
0SubscribersSubscribe
- Advertisement -spot_img

Latest Articles

error: Content is protected !!