ರಿಪ್ಪನ್‌ಪೇಟೆ: ಪತ್ರಕರ್ತ ಹಾಲಸ್ವಾಮಿ ಅವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಿರುಕುಳ ನೀಡಿರುವ ದಾವಣಗೆರೆ ಎಸ್.ಪಿ. ಸಿ.ಬಿ.ರಿಷ್ಯಂತ್ ಆವರನ್ನು ತಕ್ಷಣ ಅಮಾನತುಪಡಿಸುವಂತೆ ರಿಪ್ಪನ್‌ಪೇಟೆಯಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದವರು ಉಪತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮೂಲಕ ಆಗ್ರಹಿಸಿದ್ದಾರೆ.
ಫೆಬ್ರವರಿ 27 ರಂದು ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದ ಸಂದರ್ಭ ಪತ್ರಿಕಾ ವರದಿಗೆ ಬಂದಿದ್ದ ಸ್ಥಳೀಯ ವಾಹಿನಿ ಟಿವಿ ಭಾರತ್ ಸಂಪಾದಕ ಆರ್.ಎಸ್.ಹಾಲಸ್ವಾಮಿಗೆ ದಾವಣಗೆರೆ ಎಸ್ಪಿ ರಿಷ್ಯಂತ್ ಅವರು ಕರ್ತವ್ಯಕ್ಕೆ ಅಡ್ಡಿಪಡಿಸುವ ಮೂಲಕ ಮೊಬೈಲ್‌ನಲ್ಲಿ ಸೆರೆಹಿಡಿಯಲಾದ ಚಿತ್ರವನ್ನು ಡಿಲೀಟ್ ಮಾಡಿರುವ ಎಸ್ಪಿ ವಿರುದ್ದ ಕ್ರಮಕೈಗೊಳ್ಳುವ ಮೂಲಕ ತಕ್ಷಣ ಅಮಾನತು ಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಬಾಸ್ಟಿನ್ ಮ್ಯಾಥ್ಯೂಸ್, ಕೆ.ಎಂ.ಬಸವರಾಜ್, ಚಿದಾನಂದಸ್ವಾಮಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಿ.ರಾ.ರವಿಶಂಕರ್, ಮಹಮ್ಮದ್‌ರಫಿ, ದೇವರಾಜ್ ಹಾಜರಿದ್ದರು.