ಚಂದ್ರಗುತ್ತಿ ; ರೇಣುಕಾಂಬ ದೇವಸ್ಥಾನದ ಹುಂಡಿ ಎಣಿಕೆ – ಈ ಬಾರಿ ಸಂಗ್ರಹವಾದ ಹಣ ಎಷ್ಟು ಗೊತ್ತಾ ?

0 56

ಸೊರಬ : ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ದೇವಸ್ಥಾನದ ಆಡಳಿತ ಮಂಡಳಿ ಕಚೇರಿಯಲ್ಲಿ ಗುರುವಾರ ನಡೆಯಿತು.

ಚಂದ್ರಗುತ್ತಿ ನಾಡಕಚೇರಿ ಉಪ ತಹಶೀಲ್ದಾರ್ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್ ಶಿವಪ್ರಸಾದ್ ಅವರ ಸಮ್ಮುಖದಲ್ಲಿ ಭಕ್ತರ ಮೂಲಕ ಬಂದಂತಹ ಕಾಣಿಕೆ ಹುಂಡಿ ಹಣ ಎಣಿಕೆ ಕಾರ್ಯ ನಡೆಸಲಾಯಿತು.

ಈ ಬಾರಿ ದೇವಸ್ಥಾನದ ಹುಂಡಿಯಲ್ಲಿ ಸುಮಾರು. 29,36,530 ರೂ. ಕಾಣಿಕೆ ಸಂಗ್ರಹವಾಗಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಹುಂಡಿ ಹಣ ಎಣಿಸಿದಾಗ 41,23,920 ರೂ. ಸಂಗ್ರಹವಾಗಿತ್ತು. ಕೇವಲ ಐದು ತಿಂಗಳಿನಲ್ಲಿ ದೇವಸ್ಥಾನದ ಗರಿಷ್ಠ ಮೊತ್ತ ಕಾಣಿಕೆ ಹಣ 70,60,450 ರೂ. ಸಂಗ್ರಹವಾಗಿದೆ. ಎಣಿಕೆ ಕಾರ್ಯ ನಡೆಯುವ ಕೊಠಡಿ ಸುತ್ತ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.

ಶ್ರೀ ರೇಣುಕಾಂಬ ದೇವಸ್ಥಾನದಿಂದ ಸರ್ಕಾರಕ್ಕೆ ಕೋಟಿಗಟ್ಟಲೆ ಆದಾಯ ಸಂಗ್ರಹವಾಗುತ್ತಿದೆ. ಆದರೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಬೇಕಾಗುವ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರವು ಮುಂದಾಗುತ್ತಿಲ್ಲ ಎಂಬುವುದು ಶ್ರೀ ರೇಣುಕಾಂಬ ದೇವಿ ಭಕ್ತರ ಅಳಲಾಗಿದೆ.

ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಮುಜರಾಯಿ ಇಲಾಖೆ ವಿಷಯ ನಿರ್ವಾಹಕರು, ತಾಲೂಕು ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರು ಮತ್ತು ಚಂದ್ರಗುತ್ತಿ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿಗಳು, ಹಾಗೂ ದೇವಸ್ಥಾನದ ಸಿಬ್ಬಂದಿಗಳು ಸೇರಿದಂತೆ ಚಂದ್ರಗುತ್ತಿ ಆರಕ್ಷಕ ಠಾಣೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!