ರಿಪ್ಪನ್‌ಪೇಟೆ ಪ್ರಥಮದರ್ಜೆ ಕಾಲೇಜ್‌ಗೆ ನ್ಯಾಕ್ ಪೀರ್ ತಂಡ

0 23


ರಿಪ್ಪನ್‌ಪೇಟೆ: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜ್‌ಗೆ ಫೆಬ್ರವರಿ 8 ಮತ್ತು 9 ಎರಡು ದಿನ ವಿಶ್ರಾಂತ ಕುಲಪತಿ
ಪ್ರೋ.ಆರ್.ಡಿ.ಶರ್ಮ ನೇತೃತ್ವದ ತಂಡ ನ್ಯಾಕ್‌ತಂಡ ಭೇಟಿ ನೀಡಲಿದೆ ಎಂದು ಕಾಲೇಜ್ ಪ್ರಾಚಾರ್ಯ ಟಿ.ಚಂದ್ರಶೇಖರ ಪ್ರಕಟಣೆಯಲ್ಲಿ ತಿಳಿಸಿದರು.


ಈ ತಂಡವು ಕಾಲೇಜ್‌ನ ಶೈಕ್ಷಣಿಕ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಕುರಿತು ಪರಿಶೀಲಿಸಲಿದ್ದಾರೆ ತಂಡದ ಸಂಚಾಲಕರಾಗಿ ಪ್ರೋ.ಶರತ್‌ಕುಮಾರ್, ಸ್ಪೇನ್ ಮತ್ತು ಡಾ.ವಿಠಲ್‌ಗುಳೆ ಇವರು ಭಾಗವಹಿಸಿವರು ಎಂದು ಪ್ರಾಚಾರ್ಯ ಟಿ.ಚಂದ್ರಶೇಖರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಪ್ರಭಾರಿ ಪ್ರಾಚಾರ್ಯ ರಾಜು, ಉಪನ್ಯಾಸಕ ವೃಂದ ಹಾಜರಿದ್ದರು.

ರಿಪ್ಪನ್‌ಪೇಟೆಯಲ್ಲಿ ಶರಣರು ಕಂಡ ಶಿವ ಪ್ರವಚನ:

ರಿಪ್ಪನ್‌ಪೇಟೆ: ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಭಾಭವನದಲ್ಲಿ ಫೆಬ್ರವರಿ 8 ರಿಂದ 28 ರವರೆಗೆ ಪ್ರತಿದಿನ ರಾತ್ರಿ 8 ರಿಂದ 9 ಗಂಟೆಯವರೆಗೆ ಮಹಾಶಿವರಾತ್ರಿಯ ಅಂಗವಾಗಿ ಮಹಾನ್ ತಪಸ್ವಿ ಬಾಲ ಬ್ರಹ್ಮಚಾರಿಗಳು ಡಾ.ಬಿ.ಕೆ.ಬಸವರಾಜ ರಾಜಋಷಿಗಳು ಇವರಿಂದ “ಶರಣರು ಕಂಡ ಶಿವ’’ ಪ್ರವಚನ ಮಾಲೆ ಜರುಗಲಿದೆ.

Leave A Reply

Your email address will not be published.

error: Content is protected !!