ಗರ್ತಿಕೆರೆ ರಾಘವೇಂದ್ರ ಸ್ವಾಮಿ ಮಠದಲ್ಲಿ ಆ. 31 ರಿಂದ ಸೆ. 2 ರವರೆಗೆ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ

0 51

ರಿಪ್ಪನ್‌ಪೇಟೆ: ಸಮೀಪದ ಗರ್ತಿಕೆರೆ ಶ್ರೀ ಗುರುರಾಘವೇಂದ್ರ ಸ್ವಾಮಿಮಠದಲ್ಲಿ ಆಗಸ್ಟ್ 31 ರಿಂದ ಸೆಪ್ಟಂಬರ್ 2 ರವರೆಗೆ ಶ್ರೀರಾಘವೇಂದ್ರ ಸ್ವಾಮಿಗಳವರ 352ನೇ ಆರಾಧನಾ ಮಹೋತ್ಸವ ಹಾಗೂ ಭಜನಾ ಭಕ್ತಿ ಗೀತೆಗಳ ಸಮ್ಮಿಶ್ರ ಸುಗಮಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಆಗಸ್ಟ್ 31 ರಂದು ಪೂರ್ವಾರಾಧನೆ ವಿಶೇಷ ಪೂಜೆಗಳು ತೀರ್ಥಪ್ರಸಾದ ವಿನಿಯೋಗ, ಸೆ.1 ರಂದು ಶುಕ್ರವಾರ ಆರಾಧನೆ ವಿಶೇಷ ಪೂಜೆ ತೀರ್ಥಪ್ರಸಾದ ವಿನಿಯೋಗ ಸಾಮೂಹಿಕ ಅನ್ನಸಂತರ್ಪಣೆ, ಸೆ.2 ರಂದು `ಉತ್ತರಾರಾಧನೆ’’, ಆ. 31 ರಂದು ಕೋಡೂರು ಸುಮುಖ ಭಜನಾ ಮಂಡಳಿವರಿಂದ ಭಜನೆ ತೀರ್ಥಹಳ್ಳಿ ಜಯಶ್ರೀ ಮತ್ತು ಸೌಂದರ್ಯ ಲಹರಿ ಸಂಚಾಲಕ ವೃಂದ ಇವರಿಂದ ಸೌಂದರ್ಯ ಲಹರಿ, ಸೆ.1 ರಂದು ಗರ್ತಿಕೆರೆ ರಾಘವೇಂದ್ರ ಭಜನಾ ಮಂಡಳಿ ಇವರಿಂದ ಭಜನೆ, ಆರಳಾಪುರ ಹೊದಲ ಇವರಿಂದ ಭಕ್ತಿಗೀತೆಗಳ ಸಮ್ಮಿಶ್ರ ಸುಗಮ ಸಂಗೀತ ಕಾರ್ಯಕ್ರಮ ಮತ್ತು ರಾಘವೇಂದ್ರ ಯಕ್ಷಗಾನ ಕಲಾಸಂಘ ಇವರಿಂದ ಯಕ್ಷಗಾನ ತಾಳಮದ್ದಲೆ ಸೆ.2 ರಂದು ರಿಪ್ಪನ್‌ಪೇಟೆಯ ವಿನಾಯಕ ಮೆಲೋಡಿಸ್ ತಂಡದವರಿಂದ ಭಕ್ತಿಗೀತೆಗಳ ರಸಮಂಜರಿ ಕಾರ್ಯಕ್ರಮ ಅಯೋಜಿಸಲಾಗಿದ್ದು ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗುರುಸಾರ್ವಭೌಮರ ದರ್ಶನಾಶೀರ್ವಾದ ಪಡೆಯುವಂತೆ ಮಠದ ಪ್ರಕಟಣೆ ತಿಳಿಸಿದೆ.

ನಿಧನವಾರ್ತೆ

ರಿಪ್ಪನ್‌ಪೇಟೆ: ಬೆನವಳ್ಳಿ ಗ್ರಾಮದ ಮುಡುಬ ವಾಸಿ ಶೇಖರಪ್ಪಗೌಡ (93) ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.


ಮೃತರಿಗೆ ಮೂವರು ಪುತ್ರ, ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ವೀರಶೈವ ಲಿಂಗಾಯ್ತಿ ಸಂಪ್ರದಾಯದಂತೆ ಮುಡುಬ ಗ್ರಾಮದ ಅವರ ಜಮೀನಿನಲ್ಲಿ ಜರುಗಿತು.

Leave A Reply

Your email address will not be published.

error: Content is protected !!