ಅಡಿಕೆ ಖರೀದಿ ಮಾಡಲೆಂದು ಹಣ ತಂದವನಿಗೆ ಹಲ್ಲೆ ನಡೆಸಿ 5 ಲಕ್ಷ ರೂ. ದೋಚಿದ್ದ ಖದೀಮರು ಅಂದರ್ !

0 40

ಶಿವಮೊಗ್ಗ: ಅಡಿಕೆ ಖರೀದಿ ಮಾಡಲೆಂದು ಹಣ ತೆಗೆದುಕೊಂಡು ಬಂದಿದ್ದವನಿಗೆ ಹಲ್ಲೆ ನಡೆಸಿ 5 ಲಕ್ಷ ರೂ. ದೋಚಿದ್ದ ಐವರು ಖದೀಮರು ಕೊನೆಗೂ ಅಂದರ್ ಆಗಿದ್ದಾರೆ.


ಏನಿದು ಘಟನೆ ?

ಫೆ.06 ರಂದು ಬೆಳಗ್ಗೆ ಸಿಪ್ಪೆಗೋಟು ಅಡಿಕೆಯನ್ನು ಖರೀದಿ ಮಾಡಲು ಹಣವನ್ನು ತೆಗೆದುಕೊಂಡು ಬಂದಿದ್ದ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಸುರೇಶ್ ಕುಮಾರ್ (30)ರವರಿಗೆ ಅಡಿಕೆಯು ಶಿವಮೊಗ್ಗ ನಗರದ ಕಿಮ್ಮನೆ ರೆಸಾರ್ಟ್ ಗೆ ಹೋಗುವ ದಾರಿಯಲ್ಲಿರುವ ಗೋಡೌನ್ ನಲ್ಲಿದೆ ಬನ್ನಿ ತೋರಿಸುತ್ತೇನೆ ಎಂದು ಹೇಳಿದ್ದರಿಂದ ಸುರೇಶ್ ಕುಮಾರ್ ಮತ್ತು ಸ್ನೇಹಿತನಾದ ಸಂತೋಷ್ ರವರು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೆಸಿಟ್ ಕಾಲೇಜು ಹತ್ತಿರ ಕಿಮ್ಮನೆ ರೆಸಾರ್ಟ್ ಗೆ ಹೋಗುವ ದಾರಿಯಲ್ಲಿ ಹೋದಾಗ ಅಪರಿಚಿತ ವ್ಯಕ್ತಿಗಳು ಇವರ ಮೇಲೆ ಹಲ್ಲೆ ಮಾಡಿ 5 ಲಕ್ಷ ರೂ. ಅನ್ನು ದರೋಡೆ ಮಾಡಿಕೊಂಡು ಹೋಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಕಲಂ 395 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಜಿ ಕೆ ಮತ್ತು ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷರಾದ ಬಾಲರಾಜ್, ಶಿವಮೊಗ್ಗ ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ ಮಂಜುನಾಥ್ ಪೊಲೀಸ್ ನಿರೀಕ್ಷಕರು ತುಂಗಾನಗರ ಪೊಲೀಸ್ ಠಾಣೆ ರವರ ನೇತೃತ್ವದ ರಾಜುರೆಡ್ಡಿ ಬೆನ್ನೂರು ಪೊಲೀಸ್ ಉಪ ನಿರೀಕ್ಷಕರು, ಮನೋಹರ್ ಸಹಾಯಕ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್ ಹಾಗೂ ಸಿಪಿಸಿ ನಾಗಪ್ಪ ಅಡಿವಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ ಮತ್ತು ಹರೀಶ್ ರವರುಗಳನ್ನೊಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು.

ಈ ತನಿಖಾ ತಂಡವು ಇಂದು ಪ್ರಕಣದ ಆರೋಪಿಗಳಾದ ಶಿವಮೊಗ್ಗದ ಗೋಪಾಳದ ಮಂಜನಾಯ್ಕ @ ಮಂಜು (35), ಶಿಕಾರಿಪುರ ಟೌನ್‌ ನಿವಾಸಿ ಆಸೀಫ್ ವುಲ್ಲಾ @ ಆಸೀಪ್ (32), ಶಿವಮೊಗ್ಗದ ಕೊನಗವಳ್ಳಿ ಗಣೇಶ್ ನಾಯ್ಕ @ ಗಣು (28), ಶಿವಮೊಗ್ಗ ಟ್ಯಾಂಕ್ ಮೊಹಲ್ಲಾದ ದಾವಲ್ ಬಡಗಿ (35) ಮತ್ತು ಶಿವಮೊಗ್ಗ ಆರ್.ಎಂ.ಎಲ್ ನಗರದ ರಿಜ್ವಾನ್ ಅಹ್ಮದ್ @ ಮಹ್ಮದ ರಿಜ್ವಾನ್ (48) ಇವರುಗಳನ್ನು ಬಂಧಿಸಿ, ಆರೋಪಿಗಳಿಂದ 3,15,000 ರೂ. ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ 03 ಬೈಕ್‌ಗಳನ್ನು ಅಮಾನತು ಪಡಿಸಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!