ಜಾತಿಯ ವಿಷ ಬೀಜ ಬಿತ್ತುತ್ತಿರುವುದು ಕಾಂಗ್ರೆಸ್, ಜೆಡಿಎಸ್ ; ಕೆ.ಎಸ್ ಈಶ್ವರಪ್ಪ

0 64

ಶಿವಮೊಗ್ಗ : ಜಾತಿಯ ವಿಷ ಬೀಜ ಬಿತ್ತುತ್ತಿರುವುದು ಕಾಂಗ್ರೆಸ್, ಜೆಡಿಎಸ್ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು‌.


ಮಾಧ್ಯಮದವರೊಂದಿಗೆ ಮಾತನಾಡಿ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದ ಅವರು, ಹಿಂದು ಹೌದೋ ಇಲ್ವ ಅನ್ನೋದನ್ನು ನಾನು ಹೇಗೆ ಹೇಳಲಿ. ವೈಚಾರಿಕವಾಗಿ ಏನು ಹೇಳಬೇಕೋ ಅನ್ನೋದು ಅವರಿಗೆ ಗೊತ್ತಿಲ್ಲ. ಮುಸ್ಲಿಮರ ಓಟು ಎಷ್ಟು ಮುಖ್ಯನೋ ಅಷ್ಟೇ ಮುಖ್ಯ ಹಿಂದುಗಳ ಓಟು ಬೇಕು.
ಹೇಗೆ ಹಿಂದು ನಂಬುತ್ತೇನೆ, ಹಿಂದುತ್ವ ನಂಬಲ್ಲ ಅಂತ ಹೇಳ್ತಾರೆ.
ನಾನು ಮುಸಲ್ಮಾನ ಮುಸಲ್ಮಾನತ್ವವನ್ನು ನಂಬಲ್ಲ ಎಂದು ಹೇಳಲಿ ನೋಡೋಣ. ಹಿಂದುತ್ವ ನಂಬಲ್ಲ ಎಂದರೆ ನೀನು ಮುಸಲ್ಮಾನ ನಾ‌. ಸೈದ್ಧಾಂತಿಕವಾಗಿ ಅವರ ವಿಚಾರ ಎನು ಅಂತ ಗೊತ್ತಾಗುತ್ತಿಲ್ಲ. ಸುಪ್ರೀಂಕೋರ್ಟ್ ಹೇಳಿದೆ ಹಿಂದುತ್ವ ಎಂದರೆ ಎಲ್ಲ ಜಾತಿ ಧರ್ಮಗಳು ಸೇರಿವೆ ಎಂದು ಹಾಗಾದ್ರೆ ಸಿದ್ದರಾಮಯ್ಯ ನವರು ಸುಪ್ರೀಂಕೋರ್ಟ್ ಮಾತನ್ನು ಮೀರುತ್ತಾರಾ? ಎಂದು ಪ್ರಶ್ನಿಸಿದರು.


ಡಿಕೆಶಿಗೆ ಇಡಿ‌ ನೋಟೀಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಡಿ ನೋಟಿಸ್ ಕೊಡ್ತಾ ಇದಾರೆ, ಟಾರ್ಚರ್ ಕೊಡ್ತಾ ಇದಾರೆ ಅಂತ ಗೊಣಗಾಡುವುದನ್ನು ಬಿಡಲಿ. ಕಾನೂನಿಗೆ ಗೌರವ ಕೊಡ್ತಿನಿ ಅಂತ ಒಂದು ಮಾತನ್ನು ಹೇಳಲಿ ನೋಡೋಣ. ಇಡಿ ಸಿಬಿಐ ಏನ್ ಮಾಡುತ್ತೆ ಅಂತ ಹೇಳೋದಿಕ್ಕಿಂತ ಎದುರಿಸುತ್ತೇನೆ ಎಂದು ಹೇಳಲಿ‌ ಆಗ ರಾಜ್ಯದ ಜನತೆ ಇಡಿಗೆ ಹಾಗೂ ಎಲ್ಲಾ ಕಾನೂನಿಗೆ ಗೌರವ ಕೊಡ್ತಾರೆ ಎಂದುಕೊಳ್ಳುತ್ತೆ‌‌. ಪ್ರತಿ ಬಾರಿ ನೋಟಿಸ್ ಕೊಟ್ಟಾಗ ಅವರು ಈ ರೀತಿ ಹೇಳೋದು ಸರಿಯಲ್ಲ.
ಇಡಿ ಬಂದಿದ್ದು,ಬಿಜೆಪಿ ಸರ್ಕಾರ ಬಂದಮೇಲಾ ? ಅವರ ಸರ್ಕಾರ ಇದ್ದಾಗಲೂ ಇಡಿ ಇದೆ ಎಂದರು.


ಪ್ರಹ್ಲಾದ್ ಜೋಷಿ ವಿರುದ್ದ ಭೋಜೆಗೌಡ ಆರೋಪ ವಿಚಾರವಾಗಿ ಮಾತನಾಡಿ, ಜೋಷಿ ಯವರು ಕಾನೂನು ಹೋರಾಟ ಮಾಡ್ತಿವಿ ಎಂದು ಹೇಳಿದ್ದಾರೆ. ಭೋಜೇಗೌಡ್ರು ಅದನ್ನು ಫೇಸ್ ಮಾಡಲಿ ಎಂದರು.

ಬ್ರಾಹ್ಮಣ ಸಿಎಂ ವಿಚಾರವಾಗಿ ಮಾತನಾಡಿ, ಜಾತಿಯ ವಿಷ ಬೀಜ ಬಿತ್ತುತ್ತಿರುವುದು ಕಾಂಗ್ರೆಸ್ ಜೆಡಿಎಸ್. ಯಾರನ್ನೇ ಸಿಎಂ ಮಾಡುವುದು ಶಾಸಕಾಂಗಕ್ಕೆ ಹೈಕಮಾಂಡ್ ಗೆ ಬಿಟ್ಟ ವಿಚಾರ. ಯಾವನ್ ಹೇಳಿದ ಇವರಿಗೆ ಅವರನ್ನೇ ಸಿಎಂ ಮಾಡ್ತಿವಿ ಅಂತ.
ಬಾಯಿಗೆ ಬಂದಂತೆ ಮಾತನಾಡುವುದು ಸಿಎಂ‌ ಆಗಿದ್ದ ಕುಮಾರಸ್ವಾಮಿಗೆ ಸರಿಯಲ್ಲ. ನಾವು ಯಾರನ್ನಾದರೂ ಸಿಎಂ ಮಾಡ್ತೀವಿ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು. ಕುಮಾರಸ್ವಾಮಿಗೆ ಬಿಜೆಪಿ ಪೂರ್ಣ ಬಹುಮತ ಬರುತ್ತೆ ಅಂತ ಗೊತ್ತಿದೆ. ಅದನ್ನಾದರೂ ಜನರ ಮುಂದೆ ಹೇಳಲಿ ಕುಮಾರಸ್ವಾಮಿಯವರು ಜಾತಿಯ ವಿಷ ಬೀಜ ಬಿತ್ತಿ ಕಾಂಗ್ರೆಸ್ ರಾಜ್ಯದಲ್ಲಿ‌ ನಿರ್ನಾಮವಾಗಿದೆ. ಸಿದ್ದರಾಮಯ್ಯ ಮಾಡಿದ ಕುತಂತ್ರದಿಂದ ಸಿಎಂ‌ ಸ್ಥಾನ ಕಳೆದುಕೊಂಡ್ರು. ಜಾತಿ ವಿಷ ಬೀಜ ಬಿತ್ತಿದವರನ್ನು ಎಲ್ಲಾರೂ ತರಾಟೆಗೆ ತೆಗದುಕೊಳ್ಳುತ್ತಾರೆ. ಸಮಾಜದಲ್ಲಿ ಸಾಕಷ್ಟು ಗೌರವಯುತವಾಗ ಜಾತಿಗಳಲ್ಲಿ ಬ್ರಾಹ್ಮಣರು ಒಬ್ಬರು ಅಂತರವನ್ನು ಅಪಮಾನ‌ಮಾಡುವುದು ಸರಿಯಲ್ಲ ಎಂದರು.

Leave A Reply

Your email address will not be published.

error: Content is protected !!