ರೌಡಿ ಶೀಟರ್ ಹಂದಿ ಅಣ್ಣಿ ಕೊಂದಿದ್ದ ಗ್ಯಾಂಗ್ ಮೇಲೆ ದಾಳಿ ; ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ !

0 9

ಶಿವಮೊಗ್ಗ : ಕಳೆದ ವರ್ಷ ಶಿವಮೊಗ್ಗದ ವಿನೋಬನಗರ ಪೊಲೀಸ್ ಚೌಕಿ ವೃತ್ತದಲ್ಲಿ ನಟೋರಿಯಸ್‌ ರೌಡಿ ಶೀಟರ್ ಹಂದಿ ಅಣ್ಣಿಯನ್ನು ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಶಿವಮೊಗ್ಗದ ಜನ ಈ ಭೀಕರ ದೃಶ್ಯವನ್ನು ಇನ್ನೂ ಮರೆತೇ ಇಲ್ಲ. ಹೀಗಿರುವಾಗಲೇ ರೌಡಿ ಶೀಟರ್ ಹಂದಿ ಅಣ್ಣಿಯನ್ನು ಕೊಂದಿದ್ದ ಗ್ಯಾಂಗ್ ಮೇಲೆ ದಾಳಿ ನಡೆಸಲಾಗಿದೆ.

ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಕೇಸ್ ಪ್ರಮುಖ ಆರೋಪಿಗಳ ಮೇಲೆ ಶಿವಮೊಗ್ಗ ಗಡಿ ಭಾಗದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲೂರು ಸಮೀಪದ ಗೋವಿನ ಕೋವಿಯಲ್ಲಿ ಗ್ಯಾಂಗ್ ಒಂದು ದಾಳಿ ನಡೆಸಿದೆ. ಈ ದಾಳಿಯಲ್ಲಿ ಗ್ಯಾಂಗ್ ನಿಂದ ತೀವ್ರ ಹಲ್ಲೆಗೆ ಒಳಗಾದ ಆಂಜನೇಯ ಎಂಬಾತ ಸಾವನ್ನಪ್ಪಿದ್ದು, ಮಧು ಎನ್ನುವರ ಸ್ಥಿತಿ ಗಂಭೀರವಾಗಿದೆ.

ಮತ್ತೊಂದು ಕೊಲೆ ಮಾಡುವ ಮೂಲಕ ಸೇಡು ತೀರಿಸಿಕೊಂಡ ಗ್ಯಾಂಗ್ ಬೂದಿ ಮುಚ್ಚಿದ ಕೆಂಡದಂತಿರೋ ಶಿವಮೊಗ್ಗ ಭೂಗತ ಲೋಕದ ಅಧಿಪತ್ಯವನ್ನು ಸಾಧಿಸಲು ಹೊರಟಿದೆ. ಇತ್ತೀಚೆಗೆ ನೆಮ್ಮದಿಯಾಗಿದ್ದ ಶಿವಮೊಗ್ಗದ ಜನ ಈಗ ಮತ್ತೆ ಭಯದಲ್ಲಿ ಬದುಕುವಂತಾಗಿದೆ.

ಅಸಲಿಗೆ ನಡೆದಿದ್ದೇನು..?

ಕುಖ್ಯಾತ ರೌಡಿ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಬರ್ಬರ ಕೊಲೆ ಕೇಸ್ ನಲ್ಲಿ ಆರೋಪಿಗಳಾದ ಮಧು, ಆಂಜನೇಯ ಎಂಬುವರು ಕೋರ್ಟ್‌ಗೆ ಹೋಗಿ ಬರುತ್ತಿದ್ದರು. ಕೋರ್ಟ್ ಮುಗಿಸಿ ಬೈಕ್ ನಲ್ಲಿ ಬರುತ್ತಿದ್ದಾಗ ಸ್ಕಾರ್ಪಿಯೋ ಫಾಲೋ ಮಾಡಿಕೊಂಡು ಬಂದಿದೆ. ಸ್ಕಾರ್ಪಿಯೋದಲ್ಲಿ ಬಂದ ನಾಲ್ಕೈದು ಜನರ ಗ್ಯಾಂಗ್ ಇಬ್ಬರ ಮೇಲೆ ತೀವ್ರಗಾಗಿ ಹಲ್ಲೆ ಮಾಡಿ ಎಸ್ಕೇಪ್ ಆಗಿದೆ. ಈಗ ಆಂಜನೇಯ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಧು ಸ್ಥಿತಿ ಗಂಭೀರವಾಗಿದೆ.

Leave A Reply

Your email address will not be published.

error: Content is protected !!