ವಿಮಾನ ನಿಲ್ದಾಣಕ್ಕೆ ಉದ್ಯೋಗಿಗಳು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ; ಎಸ್ಪಿ ಸ್ಪಷ್ಟನೆ

0 195

ಶಿವಮೊಗ್ಗ : ವಿಮಾನ ನಿಲ್ದಾಣಕ್ಕೆ ಉದ್ಯೋಗಿಗಳು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಓಡಾಡುತ್ತಿದ್ದು, ಇದು ನಕಲಿಯಾಗಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದ್ದು, ವಿಮಾನ ನಿಲ್ದಾಣದಲ್ಲಿ ಏರ್ ಹೋಸ್ಟೆಸ್, ಬಿಸನಸ್ ಡೆವಲೆಪ್‌ಮೆಂಟ್ ಮ್ಯಾನೇಜರ್, ಏರ್‌ಲೈನ್ ಎಕ್ಸಿಕ್ಯೂಟೀವ್, ಸೆಕ್ಯೂರಿಟಿ ಗಾರ್ಡ್, ಹೆಲ್ಪರ್, ಕ್ಲೀನರ್ಸ್, ಟೀಂ ಮೆಂಬರ‍್ಸ್ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಡಿಪ್ಲೋಮೊ ಆದ 40 ವರ್ಷ ಒಳಗಿನ ಯುವಕ-ಯುವತಿಯರು ಬೇಕಾಗಿದ್ದಾರೆ ಎಂದು [email protected] ಇ-ಮೇಲ್ ನಕಲಿ ಐಡಿ ಮೂಲಕ ಜಾಹಿರಾತು ನೀಡುತ್ತಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಲಾಗಿಲ್ಲ ಇದು ನಕಲಿಯಾಗಿದ್ದು, ಸಾರ್ವಜನಿಕರು ಎಚ್ಚರ ವಹಿಸುವಂತೆ ಅವರು ಕೋರಿದ್ದಾರೆ.

Leave A Reply

Your email address will not be published.

error: Content is protected !!