ಶಿವಮೊಗ್ಗ ; ಖಾಸಗಿ ಬಸ್‌ನಲ್ಲಿ 10 ಕೋಟಿ ರೂ. ಸಾಗಿಸಲಾಗಿದೆ ಎಂದು ಠಾಣೆಗೆ ಬಂದ ಅನಾಮಿಕ ಕರೆಯನ್ನಾಧರಿಸಿ ದಾಳಿ ನಡೆಸಿದ್ದ ಪೊಲೀಸರಿಗೆ ಸಿಕ್ಕಿದ್ದು 8 ಲಕ್ಷ ರೂ. ಮೌಲ್ಯದ ಬಟ್ಟೆ ಬಂಡಲ್ !

0 12

ಶಿವಮೊಗ್ಗ: ಮುಂಬೈನಿಂದ ಬಂದ ಖಾಸಗಿ ಬಸ್‌ನಲ್ಲಿ ಅಕ್ರಮವಾಗಿ ಬರೋಬ್ಬರಿ 10 ಕೋಟಿ ರೂ. ಸಾಗಿಸಲಾಗುತ್ತಿದೆ ಎಂಬ ಠಾಣೆಗೆ ಬಂದ ಅನಾಮಿಕ ಕರೆಯನ್ನಾಧರಿಸಿ ದಾಳಿ ನಡೆಸಿದ್ದ ಪೊಲೀಸರಿಗೆ ಸಿಕ್ಕಿದ್ದು 8 ಲಕ್ಷ ರೂ. ಮೌಲ್ಯದ ಬಟ್ಟೆ ಬಂಡಲ್. ಇದು ಶಿವಮೊಗ್ಗ ದೊಡ್ಡಪೇಟೆ ಠಾಣೆ ಪೊಲೀಸರ ವಿಶೇಷ ಕಾರ್ಯಾಚರಣೆ.

ಶುಕ್ರವಾರ ರಾತ್ರಿ ಮುಂಬೈನಿಂದ ಹೊರಟ ಈಸ್ಟ್ ವೆಸ್ಟ್ ಬಸ್‌ನಲ್ಲಿ ಬಟ್ಟೆ ಬಂಡಲ್‌ಗಳಲ್ಲಿ ಅಕ್ರಮವಾಗಿ ಕೋಟಿ ಕೋಟಿ ರೂ. ಹಣ ಸಾಗಿಸಲಾಗುತ್ತಿದೆ ಎಂದು ದೂರು ಬಂದಿತ್ತು. ಆ ದೂರಿನನ್ವಯ ಶನಿವಾರ ಬೆಳಗ್ಗೆ ಬಿ.ಎಚ್.ರಸ್ತೆಯ ಸೋಮಯ್ಯ ಲೇಔಟ್‌ಗೆ ಸಾಗುವ ಕ್ರಾಸ್ ಬಳಿ ದಾಳಿ ನಡೆಸಿದ ಪೊಲೀಸರಿಗೆ ಲಕ್ಷಾಂತರ ರೂ. ಮೌಲ್ಯದ ಬಟ್ಟೆ ಬಂಡಲ್‌ಗಳು ಸಿಕ್ಕಿದೆ.

ದೊಡ್ಡಪೇಟೆ ಠಾಣೆ ಪಿಎಸ್‌ಐ ವಸಂತ್ ನೇತೃತ್ವದಲ್ಲಿ ಐವರು ಪೇದೆಗಳು ಬಸ್‌ನ್ನು ತಡೆದು ತಪಾಸಣೆಗೆ ಒಳಪಡಿಸಿದಾಗ ದಾಖಲೆ ಇಲ್ಲದ ಶಿವಮೊಗ್ಗ, ಭದ್ರಾವತಿ ಸೇರಿ ಜಿಲ್ಲೆಯ ಹಲವು ಬಟ್ಟೆ ಅಂಗಡಿಗಳ 40 ಬಂಡಲ್ ಬಟ್ಟೆ ಪತ್ತೆಯಾಗಿವೆ. ಬಟ್ಟೆ ಬಂಡಲ್ನಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ವೀರಭದ್ರೇಶ್ವರ ಟಾಕೀಸ್ ಬಳಿಯಿರುವ ಈಸ್ಟ್ ವೆಸ್ಟ್ ಕಚೇರಿ ಬಳಿ ಪ್ರಯಾಣಿಕರನ್ನೂ ತಪಾಸಣೆಗೆ ಒಳಪಡಿಸಲಾಗಿದೆ.

ವಿವಿಧ ಬಟ್ಟೆ ಅಂಗಡಿಗಳಿಗೆ ಸೇರಿದ ಬಟ್ಟೆಗಳ ಮೌಲ್ಯ 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಎಲ್ಲ ಬಟ್ಟೆ ಸರಕುಗಳನ್ನು ವಾಣಿಜ್ಯ ತೆರಿಗೆ ಸಿಟಿಒ ಅಧಿಕಾರಿ ನಾಗರಾಜ್ ಅವರಿಗೆ ಹಸ್ತಾಂತರಿಸಲಾಗಿದೆ.

Leave A Reply

Your email address will not be published.

error: Content is protected !!