ಫೆ‌. 16 ರಂದು ಕವಲೇದುರ್ಗ ಮಠದಲ್ಲಿ ಶ್ರೀಮರುಳಸಿದ್ದೇಶ್ವರ ಶಿವಯೋಗ ಮಂದಿರ ಲೋಕಾರ್ಪಣೆ ಮತ್ತು ಧರ್ಮ ಸಮಾರಂಭ

0 515

ರಿಪ್ಪನ್‌ಪೇಟೆ: ತೀರ್ಥಹಳ್ಳಿ ತಾಲ್ಲೂಕಿನ ಕವಲೇದುರ್ಗ ಕೆಳದಿ ರಾಜಗುರು ಮಹಾಮಹತ್ತಿನ ಭವನಗಿರಿ ಸಂಸ್ಥಾನ ಮಠದಲ್ಲಿ ನೂತನವಾಗಿ ಶ್ರೀವೀರಭದ್ರಸ್ವಾಮಿ ಮತ್ತು ದುರ್ಗಾಂಬಿಕಾ ಅಷ್ಟಬಂಧ ಪ್ರಾಣ ಪ್ರತಿಷ್ಟೆ ಹಾಗೂ ಶ್ರೀ ಮರುಳಸಿದ್ದೇಶ್ವರ ಶಿವಯೋಗ ಮಂದಿರದ ಲೋಕಾರ್ಪಣೆ ಮತ್ತು ಬ್ರಹ್ಮಕಲಶಾರೋಹಣ ಧರ್ಮ ಸಮಾರಂಭವು ಫೆಬ್ರವರಿ 16 ರಂದು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಶ್ರೀಮದ್ ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರವರ ದಿವ್ಯ ಸಾನಿಧ್ಯದಲ್ಲಿ ಏರ್ಪಡಿಸಲಾಗಿದೆ ಎಂದು ಕವಲೇದುರ್ಗ ಭುವನಗಿರಿ ಮಠದ ಮರುಳಸಿದ್ದ ಶಿವಾಚಾರ್ಯ ಸ್ವಾಮಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಂತರ ಧರ್ಮಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಮದ್ ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರವರು ವಹಿಸಿ ಆಶೀರ್ವಚನ ನೀಡುವರು.

ಮಳಲಿಮಠದ ಗುರುನಾಗಭೂಷಣ ಶಿವಾಚಾರ್ಯರ ಸ್ವಾಮಿಜಿ ಮತ್ತು ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಹಾಗೂ ಕವಲೇದುರ್ಗ ಮಹಾಮಹತ್ತಿನ ಸಂಸ್ಥಾನ ಮಠದ ಮರಳುಸಿದ್ದ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು.

ಧರ್ಮಸಮಾರಂಭ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಬಿ.ವೈ.ರಾಘವೇಂದ್ರ ನೆರವೇರಿಸುವರು.
ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಸಮಾರಂಭದ ಆಧ್ಯಕ್ಷತೆ ವಹಿಸುವರು.

ಪತ್ರಿಕಾ ವರದಿಗಾರ ಅಂಕಣಕಾರ ಆರ್.ಎಸ್.ಪ್ರಶಾಂತ ಪ್ರಾಸ್ತಾವಿಕವಾಗಿ ಮಾತನಾಡುವರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಆಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಕವಲೇದುರ್ಗ ಬಹು ಉದ್ದೇಶಿ ಸೌಹಾರ್ಧ ಪತ್ತಿನ ಸಹಕಾರ ಬ್ಯಾಂಕ್ ಆಧ್ಯಕ್ಷ ಕಟ್ಟೆಗದ್ದೆ ಹಾಲಪ್ಪಗೌಡರು, ಹೊಸಕೋಟೆ ಹಾಲಪ್ಪಗೌಡರು ಹರತಾಳು, ಕೋಣಂದೂರು ಲತಾ ಕೆ.ಆರ್.ಪ್ರಕಾಶ್ ಮುಖ್ಯ ಆತಿಥಿಗಳಾಗಿ ಭಾಗವಹಿಸುವರು ಎಂದು ಮಠದ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.

error: Content is protected !!