ಬಿದರಹಳ್ಳಿ ಶಾಲೆ ಶಿಕ್ಷಕ ಬಿ. ದೇವೇಂದ್ರಪ್ಪ ವಯೋನಿವೃತ್ತಿ | ಶಿಕ್ಷಕರು ಸದಾ ಶಾಂತ ಸ್ವಭಾವ ಹೊಂದಿರಬೇಕು ; ಕುಬೇಂದ್ರಪ್ಪ

0 1,146

ಹೊಸನಗರ: ಸರ್ಕಾರಿ ಶಾಲೆಯ ಶಿಕ್ಷಕರಿರಲಿ ಅಥವಾ ಖಾಸಗಿ ಶಾಲೆಯ ಶಿಕ್ಷಕರಿರಲಿ ಶಾಂತ ಸ್ವಬಾವ ಹೊಂದಿರಬೇಕು ಇಲ್ಲವಾದರೆ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ ಎಂದು ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಕುಬೇಂದ್ರಪ್ಪ ಹೇಳಿದರು.

ತಾಲ್ಲೂಕಿನ ಬಿದರಹಳ್ಳಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ದೇವೆಂದ್ರಪ್ಪ ವಯೋನಿವೃತ್ತಿ ಪಡೆದಿದ್ದು ಅವರನ್ನು ಬಡ್ತಿ ಶಿಕ್ಷಕರ ಸಂಘದ ವತಿಯಿಂದ ಶಾಲೆಯ ಆವರಣದಲ್ಲಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಮಾತನಾಡಿದರು.

ಶಿಕ್ಷಕ ದೇವೆಂದ್ರಪ್ಪ 35 ವರ್ಷಗಳ ಸದಾ ಶಾಂತ ಸ್ವಭಾವದಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಬೋಧಿಸಿದವರು. ಇವರೊಂದಿಗೆ ವಿದ್ಯೆ ಕಲಿತ ಮಕ್ಕಳು ಇಂದು ದೊಡ್ಡ-ದೊಡ್ಡ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದು ಅಲ್ಲದೇ ಪ್ರತಿಯೊಂದು ವಿದ್ಯಾರ್ಥಿಗಳು ರಾಜ್ಯ ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಇಂಥವರಿಂದ ಪಾಠ ಕೇಳಿದ ವಿದ್ಯಾರ್ಥಿಗಳು ಧನ್ಯರು.

ಶಿಕ್ಷಕ ಬಿ.ದೇವೇಂದ್ರಪ್ಪ

ಶಿಕ್ಷಕರು ಮತ್ತು ಎಸ್‌ಡಿಎಂಸಿಯವರ ಸಂಬಂಧ ಚೆನ್ನಾಗಿದ್ದರೆ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು. ಈ ಕೆಲಸವನ್ನು ನಿವೃತ್ತಿ ಪಡೆದಿರುವ ದೇವೇಂದ್ರಪ್ಪ ಆ ಕೆಲಸ ಮಾಡಿದ ಕೀರ್ತಿ ಅವರಲ್ಲಿದೆ. ಅದಕ್ಕಾಗಿ ಇವರಿಗೆ ಗೋವಿಂದಗೌಡ ಪ್ರಶಸ್ತಿಗೆ ದೊರೆತಿರುವುದು ಅವರ ಸಾಧನೆಗೆ ಸಿಕ್ಕ ಶಿರಕಳಸ ಎಂದರು.

ಈ ಗೌರವಿಸುವ ಸಂದರ್ಭದಲ್ಲಿ ಬಡ್ತಿ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಲಿಲ್ಲಿ ಡಿಸೋಜ, ಪ್ರಧಾನ ಕಾರ್ಯದರ್ಶಿ ದುಗ್ಗಪ್ಪ, ಸಂಘಟನಾ ಕಾರ್ಯದರ್ಶಿ ಮಂಜಪ್ಪ, ಗಣಪತಿ, ಡಿ. ಸುಶೀಲಮ್ಮ, ತಿಮ್ಮಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!