ವಿದ್ಯಾರ್ಥಿಗಳಿಂದಲೇ ಶಿಕ್ಷಕನಿಗೆ ರ‍್ಯಾಗಿಂಗ್ !? ಹೊಸನಗರ ರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳ ಕಪಿಚೇಷ್ಟೆ ಕೊನೆ ಎಂದು ? ಕ್ರಮಕ್ಕೆ ಮುಂದಾಗದೆ ಮೌನಕ್ಕೆ ಶರಣಾಗಿರುವ ಆಡಳಿತ ಸಮಿತಿ

0 9,231


ಹೊಸನಗರ : ಇತಿಹಾಸ ಪುರುಷರ ಹೆಸರಿನಲ್ಲಿ ಕಳೆದ ಹಲವು ದಶಕಗಳಿಂದ ಪಟ್ಟಣದ ಐ.ಬಿ ಗುಡ್ಡದಲ್ಲಿ ಅನಧಿಕೃತ ವಿದ್ಯಾರ್ಥಿ ನಿಲಯದ ಸಹಿತ ಎಲ್‌ಕೆಜಿಯಿಂದ ಪ್ರೌಢಶಿಕ್ಷಣದವರಗೆ ಖಾಸಗಿ ಶಾಲೆ ನಡೆಸಿಕೊಂಡು ಬರುತ್ತಿರುವ ಇಲ್ಲಿನ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯ (Sri Ramakrishna Vidyalaya) ಹಲವು ಹಗಣರಗಳು ಈಗಾಗಲೇ ಬೆಳಕಿಗೆ ಬಂದಿದ್ದು, ಇತ್ತೀಚೆಗೆ ವಿದ್ಯಾರ್ಥಿಗಳೇ (Students) ಶಿಕ್ಷಕನೋರ್ವನಿಗೆ (Teacher) ರ‍್ಯಾಂಗಿಂಗ್ (Ragging) ಮಾಡಿರುವ ಸುದ್ದಿ ನಾಗರೀಕರನ್ನು ಬೆಚ್ಚಿಬೀಳಿಸುವಂತೆ ಮಾಡಿದ್ದು ಸುದ್ದಿ ಚರ್ಚೆಗೆ ಗ್ರಾಸವಾಗಿದೆ.


ಮೂರ್ನಾಲ್ಕು ದಿನಗಳ ಹಿಂದಷ್ಟೆ ಈ ಶಾಲೆ ಒಂಬತ್ತನೇ ತರಗತಿ ಹಾಗೂ ಎಸ್‌ಎಸ್‌ಎಲ್‌ಸಿಯ ಕೆಲವು ಪುಂಡ ವಿದ್ಯಾರ್ಥಿಗಳು ಪಾಠ-ಪ್ರವಚನದ ವೇಳೆ ಶಿಕ್ಷಕನೋರ್ವನ ಪ್ಯಾಂಟಿಗೆ ಬಬ್ಬಲ್ ಹಚ್ಚಿ, ಶಾಲೆಯ ಕೊಠಡಿಯಲ್ಲಿ ಆತನ ವಿರುದ್ದ ಜೋರಾಗಿ ಕೂಗುತ್ತ ಅಸಭ್ಯ ವರ್ತನೆ ತೋರಿದ್ದ ಘಟನೆ ನಡೆದ ಸಂಗತಿ ಪಟ್ಟಣಾದ್ಯಂತ ಚರ್ಚೆಗೆ ಗ್ರಾಸವಾಗಿದ್ದರೂ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳ ವಿರುದ್ದ ಕ್ರಮಕ್ಕೆ ಮುಂದಾಗದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಇತ್ತೀಚೆಗೆ ಅನುಚಿತವಾಗಿ ವರ್ತಿಸುವ ಶಾಲಾ ಮಕ್ಕಳ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದ್ದ ಕಾರಣ ಒಂದೇ ಕೊಠಡಿಗೆ ಎರಡು ಶಿಕ್ಷಕರ ನೇಮಿಸಲಾಗಿದೆಯಂತೆ. ಓರ್ವ ಪಾಠ ಪ್ರವಚನ ಮಾಡಿದರೆ ಇನ್ನೋರ್ವ ಮಕ್ಕಳ ಅಸಭ್ಯ ವರ್ತನೆ ಕುರಿತು ನಿಗಾಯಿಡಲಂತೆ. ಈ ಶಾಲೆಯಲ್ಲಿ ಕಳೆದ ಹತ್ತಾರು ವರ್ಷಗಳಲ್ಲಿ ಬಹಳಷ್ಟು ಅವಘಡ ಸಂಭವಿಸಿ ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತಂದಿದ್ದರೂ ಶಿಕ್ಷಣ ಇಲಾಖೆ ಮಾತ್ರ ಮೌನಕ್ಕೆ ಶರಣಾಗಿರುವ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂತಹ ಶಾಲೆಗಳ ವಿರುದ್ದ ಸೂಕ್ತ ಕ್ರಮಕ್ಕೆ ಮುಂದಾಗಲಿ ಎಂಬುದೇ ಜನತೆಯ ಆಶಯವಾಗಿದೆ.

Leave A Reply

Your email address will not be published.

error: Content is protected !!