Rain | Hosanagara ; ಭಾರಿ ವರ್ಷಧಾರೆ, ಸಾವೇಹಕ್ಲಿನಲ್ಲಿ ಅತ್ಯಧಿಕ 125 ಮಿ.ಮೀ. ಮಳೆ

0 475

ಹೊಸನಗರ : ರಾಜ್ಯದ ಪ್ರಮುಖ ವಿದ್ಯುದಾಗಾರ ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಹಸ್ತ ಮಳೆ ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದು ಶನಿವಾರ ಬೆಳಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಸಾವೇಹಕ್ಲಿನಲ್ಲಿ ಅತ್ಯಧಿಕ 125 ಮಿ.ಮೀ. ದಾಖಲಾಗಿದೆ.

ಉಳಿದಂತೆ ಚಕ್ರಾನಗರ 118, ಮಾಸ್ತಿಕಟ್ಟೆ 72, ಹುಲಿಕಲ್ 71, ಯಡೂರು 52, ಮಾಣಿ 50, ಹೊಸನಗರದ 47.2 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಶನಿವಾರ ಬೆಳಗ್ಗೆ ಸಹ ತಾಲೂಕಿನ ಎಲ್ಲೆಡೆ ನಿರಂತರವಾಗಿ ಮಳೆ ಬೀಳುತ್ತಿರುವ ಬಗ್ಗೆ ವರದಿಯಾಗಿದ್ದು ಮೇಲ್ಮೈ ಗಾಳಿಯೊಂದಿಗೆ ಶೀತ ವಾತಾವರಣ ಉಂಟಾಗಿದೆ. ಅಡಿಕೆ, ಭತ್ತ, ಮುಸುಕಿನಜೋಳ, ಶುಂಠಿ, ಬಾಳೆ, ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳಿಗೆ ಈ ಮಳೆ ವರವಾಗಿ ಪರಿಣಮಿಸಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

Leave A Reply

Your email address will not be published.

error: Content is protected !!