ಶಿವಮೊಗ್ಗ ; ಸ್ಮಾರ್ಟ್ ಸಿಟಿ ಯೋಜನೆ ಕಚೇರಿಯಲ್ಲಿ 1 ಲಕ್ಷ ರೂ. ಲಂಚ ಪಡೆಯುವ ಸಂದರ್ಭದಲ್ಲಿ ಚೀಫ್ ಇಂಜಿನಿಯರ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಸ್ಮಾರ್ಟ್ ಸಿಟಿ ಪ್ರಭಾರ ಚೀಫ್ ಇಂಜಿನಿಯರ್ ಎಂ. ಕೃಷ್ಣಪ್ಪ ಎಂಬುವರು ಎಕ್ಸ್‌ಟ್ರೀಮ್ ಮೀಡಿಯಾ ಸಂಸ್ಥೆಯ ಎಕ್ಸಿಕ್ಯೂಟಿವ್ ಸೈಟ್ ಇಂಜಿನಿಯರ್ ಎಂ.ಎಸ್. ಪವನ್ ಎಂಬುವರು ಶಿವಮೊಗ್ಗ ಸ್ಮಾರ್ಟ್ ಸಿಟಿಗೆ ಸಂಬಂಧಿಸಿ 7 ಡಿಸ್‌ಪ್ಲೇ ಬೋರ್ಡ್‌ಗಳ ಜಾಹೀರಾತು ನೋಡಿಕೊಳ್ಳುತ್ತಿದ್ದು ಅದರ ತ್ರೈಮಾಸಿಕದ 11.16 ಲಕ್ಷ ರೂ. ಬಿಲ್ ರಿಲೀಸ್ ಮಾಡುವುದು ಬಾಕಿ ಇತ್ತು. ಅದಕ್ಕೆ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಲಂಚ ಕೊಡಲು ಇಷ್ಟವಿಲ್ಲದೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಸ್ಮಾರ್ಟ್ ಸಿಟಿ ಕಚೇರಿ ಮುಂಭಾಗದ ಆವರಣದಲ್ಲಿ ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿ, ಸಿಬ್ಬಂದಿ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ದಾಳಿಯಲ್ಲಿ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ್, ಇನ್ಸ್‌ಪೆಕ್ಟರ್ ವೀರಬಸಪ್ಪ, ಸಿಬ್ಬಂದಿ ಯೋಗೇಶ್. ಟೀಕಪ್ಪ, ಮಂಜುನಾಥ್, ಸುರೇಂದ್ರ, ಪ್ರಶಾಂತ್ ಕುಮಾರ್, ಬಿ.ಟಿ.ಚನ್ನೇಶ್, ಪ್ರಕಾಶ್, ಆದರ್ಶ್ ಇತರರಿದ್ದರು.