ಶಿವಮೊಗ್ಗ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಷೇರು ಹೂಡಿಕೆ” ಸಂಬಂಧಿತ ಜಾಹೀರಾತುಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಇವುಗಳಲ್ಲಿ ನಂಬಿಕೆ ಇಟ್ಟು ಹಣ ಹೂಡಿದವರು ತಮ್ಮ ಹಣವನ್ನ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿಯ ಒಂದು ಘಟನೆ ನಡೆದಿದೆ; ಇಲ್ಲಿಯ ಶಿಕ್ಷಕಿಯೊಬ್ಬರು ಮೋಸಗಾರರ ಬಲೆಗೆ ಬಿದ್ದು ₹40.85 ಲಕ್ಷವನ್ನು ಕಳೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಂ ಜಾಹೀರಾತು, ವಾಟ್ಸಪ್ ಗ್ರೂಪ್ ಮತ್ತು ನಕಲಿ ಲಾಭದ ಆಮಿಷ !
ಇನ್ಸ್ಟಾಗ್ರಾಂನಲ್ಲಿ ಷೇರು ಹೂಡಿಕೆ ಕುರಿತ ಉಚಿತ ಸಲಹೆ ನೀಡುವ ಜಾಹೀರಾತುಪ್ರಕಟವಾಗಿತ್ತು. ಅದರಲ್ಲಿ ಕ್ಲಿಕ್ ಮಾಡಿದಾಗ, ಶಿಕ್ಷಕಿಯ ಮೊಬೈಲ್ ಸಂಖ್ಯೆ ವಾಟ್ಸಪ್ ಗ್ರೂಪ್ ಸೇರ್ಪಡೆಯಾಗಿತ್ತು. ಅಲ್ಲಿ ಹಲವರು ಷೇರುಗಳಲ್ಲಿ ಹೂಡಿಕೆ ಮಾಡಿ ಲಾಭಗಳಿಸಿದ್ದು ಕುರಿತ ಮಾಹಿತಿಗಳನ್ನು ಹಂಚಿಕೊಂಡಿದ್ದರು. ಇದರಿಂದಾಗಿ, ಶಿಕ್ಷಕಿ ವಾಟ್ಸಪ್ ಗ್ರೂಪ್ನ ಅಡ್ಮಿನ್ಗೆ ಸಂದೇಶ ಕಳುಹಿಸಿದ್ದಾರೆ.
ಲಾಭ ಇಲ್ಲ, ಹಣವೂ ಇಲ್ಲ – ಶಿಕ್ಷಕಿ ಪೊಲೀಸರಿಗೆ ದೂರು
ಅಡ್ಮಿನ್ ಪ್ರತಿಷ್ಠಿತ ಬ್ರೋಕರೇಜ್ ಸಂಸ್ಥೆಯ ಹೆಸರಿನಲ್ಲಿ ಲಿಂಕ್ ಒಂದನ್ನು ಕಳುಹಿಸಿ, ಖಾತೆ ತೆರೆಯುವಂತೆ ಮಾಡಿ, ಹಲವಾರು ಷೇರುಗಳಲ್ಲಿ ಹೂಡಿಕೆ ಮಾಡಲು ಸೂಚಿಸಿದ್ದಾಗಿ ಆರೋಪಿಸಲಾಗಿದೆ. ಇದಲ್ಲದೆ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ಹೇಳಿದ್ದಾನೆ . ಫಲಿತಾಂಶವಾಗಿ, ಶಿಕ್ಷಕಿಯು ಈ ಹಣವನ್ನು ವರ್ಗಾಯಿಸಿದ್ದಾರೆ ಆದರೆ, ಅದರ ಲಾಭಾಂಶ ನೀಡದೆ, ಹೂಡಿಸಿದ ಹಣವನ್ನು ಹಿಂದಿರುಗಿಸುವುದಿಲ್ಲವೆಂದು ಶಿವಮೊಗ್ಗದ ಸಿ.ಇ.ಎನ್ ಠಾಣೆಗೆ ಶಿಕ್ಷಕಿಯು ದೂರು ದಾಖಲಿಸಿದ್ದಾರೆ
ಸುರಕ್ಷತಾ ಸಲಹೆಗಳು:
- ಆಧಿಕೃತ ವೆಬ್ಸೈಟ್ಗಳು ಅಥವಾ ನಿಗಮಿತ ಬ್ರೋಕರೇಜ್ ಕಂಪನಿಗಳೊಂದಿಗೆ ಮಾತ್ರ ವ್ಯವಹರಿಸಿ
- ಅಪರಿಚಿತ ವಾಟ್ಸಪ್/ಟೆಲಿಗ್ರಾಂ ಗ್ರೂಪ್ಗಳಿಗೆ ಸೇರದಿರಿ
- ಅಥವಾ, ನಿಮಗೆ ಸಂದ ಸಂದೇಶಗಳು, ಲಿಂಕ್ಗಳು ನಂಬಿಕೆಯಿಲ್ಲದಿದ್ದರೆ ಪೊಲೀಸರು ಅಥವಾ ಸೈಬರ್ ಸೆಲ್ಗೆ ದೂರು ಕೊಡಿ
Read More
ವಿದ್ಯಾಭ್ಯಾಸಕ್ಕೆ ಹಣವಿಲ್ಲವೇ? ಕೇಂದ್ರ ಸರ್ಕಾರದ ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಬಂಪರ್ ಸಾಲ ಸೌಲಭ್ಯ !
Adhaar Card : 3 ದಿನಗಳಲ್ಲಿ ಈ ಕೆಲಸ ಮಾಡಿ ಇಲ್ಲವಾದಲ್ಲಿ ಪಾವತಿಸಬೇಕು ಇಷ್ಟು ಹಣ !
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650